Featured
ತುಮಕೂರಿನಲ್ಲಿ ಕೋವಿಡ್ 19ಗೆ ನಾಲ್ವರ ಬಲಿ: ದಾಖಲೆಯ 194 ಹೊಸ ಕೇಸ್
ರೈಸಿಂಗ್ ಕನ್ನಡ :
ತುಮಕೂರು:
ತುಮಕೂರಿನಲ್ಲಿ ಕೊರೊನಾ ಆರ್ಭಟ ಮುಂದುವರೆದಿದ್ದು ಬುಧವಾರ ನಾಲ್ವರು ಸೋಂಕಿತರು ಮೃತಪಟ್ಟಿದ್ದಾರೆ. ಸೋಂಕಿನಲ್ಲೂ ದಾಖಲೆ ಬರೆದಿದೆ.
ಜಿಲ್ಲಾ ಆರೋಗ್ಯ ಕುಟುಂಬ ನೀಡಿದ ವರದಿಯಲ್ಲಿ ಕಳೆದ 24 ಗಂಟೆಯಲ್ಲಿ ನಾಲ್ಕು ಜನರು ಕೊರೊನಾ ಮಹಾಮಾರಿಗೆ ಬಲಿಯಾಗಿದ್ದು ತುಮಕೂರು ತಾಲ್ಲೂಕಿನಲ್ಲಿ ಮೂವರು ಸಾವನ್ನಪ್ಪಿದ್ದಾರೆ. ವಿನೋಬಾನಗರದ 53 ವರ್ಷದ ಮಹಿಳೆ, ಹಾಗೂ ನಜರಾಬಾದ್ ಬಡಾವಣೆಯ 45 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ.
ಕೊಂತಿಹಳ್ಳಿ ಗ್ರಾಮದ 55 ವರ್ಷದ ವ್ಯಕ್ತಿಯೊಬ್ಬರು ಕೊರೊನಾದಿಂದ ಮೃತಪಟ್ಟಿದ್ದಾರೆ. ಶಿರಾ ಪಟ್ಟಣದ ಪಾರ್ಕ್ ಮೊಹಲ್ಲಾ ಬಡಾವಣೆಯ ನಿವಾಸಿ 39 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಕೊರೊನಾಗೆ ಬಲಿಯಾದವರ ಸಂಖ್ಯೆ ಒಟ್ಟು 147 ಕ್ಕೆ ಏರಿಕೆಯಾಗಿದೆ
ಜಿಲ್ಲೆಯಲ್ಲಿ ಇಂದು 194 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದ್ದು ಸೋಂಕಿತರ ಸಂಖ್ಯೆ 4,751 ಕ್ಕೇ ಏರಿಕೆಯಾಗಿದೆ. ಇಂದು ಕೂಡ ನಾಲ್ವರು ಸೋಂಕಿತರು ಮೃತಪಟ್ಟಿದ್ದು ಸಾವಿನ ಸಂಖ್ಯೆ 147ಕ್ಕೆ ಏರಿಕೆಯಾಗಿದೆ ಎಂದು ಕಲ್ಯಾಣಾಧಿಕಾರಿ ಡಾ. ನಾಗೇಂದ್ರಪ್ಪ ತಿಳಿಸಿದ್ದಾರೆ.
ತಾಲ್ಲೂಕು ವಾರು ಸೋಂಕಿತರು.
ಚಿ ನಾಹಳ್ಳಿ 20,ಗುಬ್ಬಿ 6,ಕೊರಟಗೆರೆ 7,ಕುಣಿಗಲ್ 15,ಮಧುಗಿರಿ 6,ಪಾವಗಡ 7,ಶಿರಾ 7,ತಿಪಟೂರು 13,ತುಮಕೂರು 91,ತುರುವೇಕೆರೆ 22,
99 ಜನ ಆಸ್ಪತ್ರೆಯಿಂದ ಡಿಸ್ಚಾರ್ಜ್
ಜಿಲ್ಲೆಯಲ್ಲಿ ಸೊಂಕಿತರು ಹೆಚ್ಚಾದಂತೆ ಗುಣಮುಖರಾಗುತ್ತಿರುವವರ ಸಂಖ್ಯೆಯೂ ಹೆಚ್ಚಾಗಿದ್ದು ಇಂದು 99 ಜನ ಸೋಂಕಿತರು ಕೊರೊನಾದಿಂದ ಗುಣಮುಖರಾಗಿ ಕೋವಿಡ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈವರಗೆ 3452 ಜನರು ಕೊರೊನಾ ಸೊಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?