Featured
ತುಮಕೂರಿನಲ್ಲಿ ಕೊರೊನಾಗೆ ಐವರ ಬಲಿ: 127 ಹೊಸ ಕೊರೊನಾ ಕೇಸ್

ರೈಸಿಂಗ್ ಕನ್ನಡ :
ತುಮಕೂರು:
ಕಲ್ಪತರು ನಾಡು ತುಮಕೂರಿನಲ್ಲಿ ಕೊರೊನಾ ರಣ ಕೇಕೆ ಮುಂದುವರೆದಿದ್ದು ಕಳೆದ 24 ಗಂಟೆಯಲ್ಲಿ ಐವರು ಸಾವನಪ್ಪಿದ್ದಾರೆ.
ಜಿಲ್ಲೆಯಲ್ಲಿ ಇಂದು 127 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದ್ದು ಸೊಂಕಿತರ ಸಂಖ್ಯೆ 4105 ಕ್ಕೆ ಏರಿಕೆಯಾಗಿದೆ, 5 ಜನರು ಮೃತಪಟ್ಟಿದ್ದು ಸಾವಿನ ಸಂಖ್ಯೆ 129 ಕ್ಕೇ ಏರಿಕೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ ನಾಗೇಂದ್ರಪ್ಪ ತಿಳಿಸಿದ್ದಾರೆ.
ತಾಲ್ಲೂಕು ವಾರು ಸೋಂಕಿತರು
ಚಿಕ್ಕ ನಾಯಕನಹಳ್ಳಿ 15, ಗುಬ್ಬಿ 9, ಕೊರಟಗೆರೆ 3, ಕುಣಿಗಲ್ 6, ಮಧುಗಿರಿ 28, ಪಾವಗಡ 20, ಶಿರಾ 4, ತಿಪಟೂರು 6, ತುಮಕೂರು 35, ತುರುವೇಕೆರೆ 1

ಇಂದು ಐದು ಮಂದಿ ಕೊರೊನಾಗೆ ಬಲಿ.
ಜಿಲ್ಲೆಯಲ್ಲಿ ಇಂದು ಐದು ಜನರು ಕೊರೊನಾ ಮಹಾಮಾರಿಗೆ ಬಲಿಯಾಗಿದ್ದು ತುಮಕೂರು ನಗರದ ಭವಾನಿ ನಗರದ 44 ವರ್ಷದ ವ್ಯಕ್ತಿ, ಕ್ಯಾತ್ಸಂದ್ರ 51 ವರ್ಷದ ಮಹಿಳೆ ಕೊರೊನಾಗೆ ಬಲಿಯಾಗಿದ್ದಾರೆ. ಕೊರಟಗೆರೆ ತಾಲ್ಲೂಕಿನಲ್ಲಿ ಇಬ್ಬರು ಮೃತಪಟ್ಟಿದ್ದು ಹೊಳವನಹಳ್ಳಿ ಗ್ರಾಮದ 65 ವರ್ಷದ ವೃದ್ದೆ ಹಾಗೂ ಚಿಕ್ಕದೊಡ್ಡವಾಡಿ ಗ್ರಾಮದ 65 ವರ್ಷದ ವೃದ್ದೆ ಸಾವನ್ನಪ್ಪಿದ್ದಾರೆ. ತುರುವೇಕರೆ ಪಟ್ಟಣದ ಶಕ್ತಿ ನಗರದ 38 ವರ್ಷ ಮಹಿಳೆ ಕೊರೊನಾಗೆ ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 129 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.
101 ಜನ ಆಸ್ಪತ್ರೆಯಿಂದ ಡಿಸ್ಚಾರ್ಜ್
ಜಿಲ್ಲೆಯಲ್ಲಿ ಇಂದು 101 ಜನ ಸೊಂಕಿತರು ಕೊರೊನಾದಿಂದ ಗುಣಮುಖರಾಗಿ ಕೋವಿಡ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈವರಗೆ 3004 ಜನರು ಕೊರೊನಾ ಸೊಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?