Featured
ತುಮಕೂರಿನಲ್ಲಿ ಸಾವಿರ ಗಡಿ ದಾಟಿದ ಕೊರೊನಾ ಸಂಖ್ಯೆ: ಒಂದೇ ದಿನ 119 ಪ್ರಕರಣ

ರೈಸಿಂಗ್ ಕನ್ನಡ:
ತುಮಕೂರು:
ತುಮಕೂರು ಜಿಲ್ಲೆಯಲ್ಲಿ ಕೊರೊನಾ ಏರಿಕೆಯಾಗಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಸಾವಿರ ಗಡಿದಾಟಿದೆ. ಒಂದೇ ದಿನ ನೂರಕ್ಕೂ ಹೆಚ್ಚು ಪ್ರಕರಣ ದಾಖಲಾಗಿರೋದು ಆತಂಕಕ್ಕೆ ಕಾರಣವಾಗಿದೆ.ಇಂದು 119 ಪ್ರಕರಣಗಳು ದಾಖಲಾಗಿವೆ.
ತುಮಕೂರು 49, ಚಿಕ್ಕನಾಯಕನಹಳ್ಳಿ 13, ಪಾವಗಡ 13, ಮಧುಗಿರಿ 9, ತಿಪಟೂರು 9, ಕುಣಿಗಲ್ 8, ತುರುವೇಕೆರೆ5, ಕೊರಟಗೆರೆ 8, ಶಿರಾ 4, ಗುಬ್ಬಿ 1 ಪ್ರಕರಣ ದಾಖಲಾಗಿದೆ. ಇನ್ನೂ ಕೊರೋನಾ ಸೊಂಕಿಗೆ ಇಂದು ನಾಲ್ವರು ಬಲಿಯಾಗಿದ್ದಾರೆ.

ತುಮಕೂರಿನ ಗೆದ್ದಲಹಳ್ಳಿಯಲ್ಲಿ 4೦ ವರ್ಷದ ಮಹಿಳೆ. ಸದಾಶಿವನಗರದ 52 ವರ್ಷದ ವ್ಯಕ್ತಿ.ಸಾದಘಟ್ಟದ 73 ವರ್ಷದ ವೃದ್ಧ ಹಾಗೂ ಪಿ.ಎಚ್. ಕಾಲೋನಿಯ 65 ವರ್ಷದ ವೃದ್ಧ ಮೃತಪಟ್ಟಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 42ಕ್ಕೆ ಏರಿಕೆಯಾಗಿದೆ.
ಐಸಿಯುವಿನಲ್ಲಿ 12 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 43 ಜನ ಕೊರೋನಾದಿಂದ ಗುಣಮುಖರಾಗಿದ್ದು ಒಟ್ಟು 1110 ಕೊರೋನಾ ಪ್ರಕರಣ ದಾಖಲಾಗಿವೆ. ಈವರೆಗೂ ಒಟ್ಟು 595 ಜನರು ಗುಣಮುಖರಾಗಿದ್ದು 473 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?