ಬೆಂಗಳೂರು
ಬೆಂಗಳೂರಿಗರಿಗೆ ಸಂಸ್ಕರಿಸಿದ ಟ್ಯಾಂಕರ್ ನೀರು: ರೇಟೆಷ್ಟು ಗೊತ್ತಾ?
![](https://risingkannada.com/wp-content/uploads/2024/03/watertanker.jpg)
Bengalore: ನೀರಿಲ್ಲದೆ ಪರದಾಡುತ್ತಿರುವ ಬೆಂಗಳೂರು ಮಂದಿಗೆ ಗುಡ್ ನ್ಯೂಸ್ ಸಿಕ್ಕಿದೆ. ಖಾಸಗಿ ವಾಟರ್ ಟ್ಯಾಂಕರ್ ಮಾಲೀಕರಿಗೆ ಬೆಲೆ ನಿಗದಿ ಮಾಡುವ ಮೂಲಕ ಜಲಮಂಡಳಿ, ಶಾಕ್ ಕೊಟ್ಟಿದೆ. ರಿಯಾಯಿತಿ ದರದಲ್ಲಿ ಬೆಂಗಳೂರಿಗರಿಗೆ ಟ್ಯಾಂಕರ್ ನೀರು ಸಿಗುವಂತಹ ತೀರ್ಮಾನ ಕೈಗೊಂಡಿದೆ. ಕೇವಲ ₹360 ರೂಪಾಯಿಗೆ 6 ಸಾವಿರ ಲೀಟರ್ ನೀರು ಮಾರಾಟಕ್ಕೆ ಜಲಮಂಡಳಿ ನಿಗದಿ ಮಾಡಿದೆ. ಬೆಂಗಳೂರು ನಗರ ಜಿಲ್ಲಾಡಳಿತ ನಿಗದಿ ಮಾಡಿದ್ದಕ್ಕಿಂತ ಕಡಿಮೆ ದರದಲ್ಲಿ ನೀರು ಮಾರಾಟಕ್ಕೆ ಸೂಚನೆ ನೀಡಿದೆ. ಈ ಹಿಂದೆ ಬೆಂಗಳೂರು ನಗರ ಜಿಲ್ಲಾಡಳಿತ 6 ಸಾವಿರ ಲೀಟರ್ ₹510 ನಿಗದಿ ಮಾಡಿತ್ತು.
ಇದೀಗ ಅದಕ್ಕಿಂತಲೂ ಕಡಿಮೆ ದರದಲ್ಲಿ ಜಲಮಂಡಳಿ ಸಂಸ್ಕರಿಸಿದ ನೀರು ಒದಗಿಸೋಕೆ ಮುಂದಾಗಿದೆ. ಇನ್ನು ಈ ನೀರು ಕುಡಿಯೋದಿಕ್ಕೆ ಹೊರತುಪಡಿಸಿ ಇತರೆ ಚಟುವಟಿಕೆಗಳ ಬಳಕೆಗೆ ಮಾತ್ರ ಯೋಗ್ಯ ಎಂದು ತಿಳಿಸಿದೆ. ಅಂದಾಗೆ ನಗರದಿಂದ ಚರಂಡಿ ಸೇರುವ ನೀರನ್ನೇ ಶುದ್ದವಾಗಿ ಸಂಸ್ಕರಿಸಿ 1400 ಎಂಎಲ್ ಡಿ ನೀರನ್ನ ಬೆಂಗಳೂರಿಗರಿಗೆ ಕಡಿಮೆ ದರದಲ್ಲಿ ನೀಡೋದಿಕ್ಕೆ ಮುಂದಾಗಿದೆ. ಬೆಂಗಳೂರಿನಲ್ಲಿ ನಿತ್ಯ 1212 MLD ನೀರು ತ್ಯಾಜ್ಯ ಸೇರುತ್ತಿದೆ. ಇದೇ ನೀರನ್ನು ಸಂಸ್ಕರಿಸಿ ಮರು ಬಳಕೆಗೆ ನೀಡಲು ಜಲಮಂಡಳಿ ತೀರ್ಮಾನ ಮಾಡಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?