Connect with us

Featured

ಸುಖ ಸಂಸಾರಕ್ಕೆ ಸಿಂಪಲ್ ಸೂತ್ರಗಳು…! – ಹೀಗಿದ್ದರೆ ಜಗಳ ಆಗೋದೇ ಇಲ್ಲ..!

ರೈಸಿಂಗ್ ಕನ್ನಡ :

ವೆಬ್ ಡೆಸ್ಕ್ :

Advertisement

ಪ್ರೀತಿ ಅಥವಾ ಮದುವೆ ಆರಂಭದಲ್ಲಿ ಎಲ್ಲವೂ ಚೆನ್ನಾಗೆ ಇರುತ್ತೆ. ಆನಂತರ ಅದೇ ಪ್ರೀತಿ ಅನೋನ್ಯತೆ ಹೆಚ್ಚು ಕಾಲ ಉಳಿಯುವುದಿಲ್ಲ. ಸಣ್ಣ ಪುಟ್ಟ ಸಮಸ್ಯೆಗಳಿಗೂ ಮನಸ್ತಾಪವಾಗಲು ಶುರುವಾಗುತ್ತದೆ. ಇದೇ ಕಾರಣದಿಂದ ದೂರ ಕೂಡ ಆಗಬಹುದು.

ಪ್ರೀತಿಯಲ್ಲಿನ ಸಮಸ್ಯೆಗಳಿಗೆ ಹಲವು ಕಾರಣಗಳಿರುತ್ತವೆ…ಆದರೆ ಸಂಬಂಧವನ್ನು ಕಾಪಾಡಿಕೊಳ್ಳಲು ಒಂದೇ ಒಂದು ಕಾರಣ ಮಾತ್ರ ಇರುವುದು ಅದುವೇ ಪ್ರೀತಿ. ಪರಸ್ಪರರ ಮೇಲಿನ ನಿಮ್ಮ ಪ್ರೀತಿ ವ್ಯಕ್ತಪಡಿಸುವ ಮೂಲಕ ಸಮಸ್ಯೆಗಳನ್ನು ದೂರ ಮಾಡಬಹದು. ಹಾಗೆಯೇ ಸಂಬಂಧಗಳನ್ನು ಗಟ್ಟಿಗೊಳಿಸಲು ಏನು ಮಾಡಬೇಕೆಂದು ಇಲ್ಲಿ ಕೆಲ ಸಲಹೆಗಳನ್ನು ನೀಡಲಾಗಿದೆ.

ಸಲಹೆ ಪಡೆಯಿರಿ :
ಪ್ರೀತಿಸಿ ಮದುವೆಯಾಗಿ ಅಥವಾ ಮದುವೆಯಾಗಿ ಪ್ರೀತಿಸಿ. ಇಲ್ಲಿ ಸಂಬಂಧ ಗಟ್ಟಿಯಾಗಿ ನೆಲೆಯೂರಬೇಕಿದ್ರೆ ಪ್ರೀತಿಸಲೇಬೇಕು. ಆದರೆ ವೈವಾಹಿಕ ಜೀವನದ ಆರಂಭದಲ್ಲಿದ್ದ ಪ್ರೀತಿ ಆ ಬಳಿಕ ಇರುವುದಿಲ್ಲ. ಅದರಲ್ಲೂ ಮದುವೆ ಬಳಿಕ ವೈಮನಸ್ಸು ಮೂಡುವುದು ಸಹಜ. ಇಂತಹ ಸಮಯದಲ್ಲಿ ಸಂಬಂಧವನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ಭಾವಿಸಿದ್ರೆ, ಗುರು-ಹಿರಿಯರ ಸಲಹೆ ಪಡೆಯುವುದು ಉತ್ತಮ. ಏಕೆಂದರೆ ಅನುಭವದ ಕೊರತೆ ಕೆಲವೊಮ್ಮೆ ನಮ್ಮನ್ನು ಇಕ್ಕಟಿಗೆ ಸಿಲುಕಿಸಿರುತ್ತದೆ.

ನಂಬಿಕೆ :
ಪ್ರತಿನಿತ್ಯ ನಿಮ್ಮ ಸಂಗಾತಿಗೆ ಐ ಲವ್ ಯೂ ಹೇಳುವುದು ಒಳ್ಳೆಯದು. ಏಕೆಂದರೆ ನಿಮ್ಮ ಬಾಯಿಯಿಂದ ಕೇಳಿ ಬರುವ ಈ ಪ್ರೀತಿ ಮಾತು ಸಂಬಂಧವನ್ನು ಗಟ್ಟಿಗೊಳಿಸುತ್ತದೆ. ಹಾಗೆಯೇ ನಿಮ್ಮ ಮೇಲೆ ನಂಬಿಕೆ ಮೂಡಿಸುತ್ತದೆ. ನಂಬಿಕೆಯಿಲ್ಲದೆ ಪ್ರೀತಿ ಇರಲಾರದು ಮತ್ತು ಪ್ರೀತಿ ಇಲ್ಲದಿದ್ದರೆ ನಾವು ಯಾರನ್ನೂ ನಂಬಲು ಸಾಧ್ಯವಿಲ್ಲ ಎಂಬುದು ಅರ್ಥಮಾಡಿಕೊಳ್ಳಿ. ಹಾಗಾಗಿ ಸಂಬಂಧದ ನ್ಯೂನತೆಗಳನ್ನು ಮರೆಯಲು ಪ್ರೀತಿಯ ಮಾತು ಅತ್ಯವಶ್ಯಕ.

ಪರಸ್ಪರ ಮಾತುಕತೆ :
ಹೆಚ್ಚಿನ ದಂಪತಿಗಳು ಮಗುವಿನ ಬಗ್ಗೆ, ಆರ್ಥಿಕ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡುವುದಿಲ್ಲ. ಜೀವನ ಹೇಗಾದರೂ ನಡೆಯುತ್ತೆ. ತಮ್ಮ ಸಂಗಾತಿ ತಮ್ಮ ಮನಸ್ಸಿನಲ್ಲಿ ನಡೆಯುತ್ತಿರುವ ಎಲ್ಲವನ್ನೂ ಅರ್ಥಮಾಡಿಕೊಳ್ಳುತ್ತಿದ್ದಾರೆ ಎಂದು ಇಬ್ಬರೂ ಭಾವಿಸುತ್ತಾರೆ. ಆದರೆ ಅದು ಮುಂದೊಂದು ದಿನ ಸಮಸ್ಯೆಗೆ ಕಾರಣವಾಗಬಹುದು. ಹೀಗಾಗಿ ಪ್ರತಿಯೊಂದು ವಿಷಯದ ಬಗ್ಗೆ ಇಬ್ಬರೂ ಕೂತು ಮಾತುಕತೆ ನಡೆಸಬೇಕು. ಕಷ್ಟ-ಸುಖಗಳನ್ನು ಹಂಚಿಕೊಳ್ಳಬೇಕು.

ಮುಚ್ಚುಮರೆ ಬೇಡ :
ಸಂಗಾತಿಯೊಂದಿಗೆ ಮಾತನಾಡುವಾಗ ಮುಚ್ಚು ಮರೆಯಿಲ್ಲದೆ ಎಲ್ಲವನ್ನೂ ಹಂಚಿಕೊಳ್ಳಬೇಕು. ಏಕೆಂದರೆ ಎಲ್ಲವನ್ನೂ ತಿಳಿದುಕೊಳ್ಳಲು ಸಂಗಾತಿ ದೇವರು ಅಲ್ಲ. ಮತ್ತೊಬ್ಬರ ಮೂಲಕ ನಿಮ್ಮ ವಿಷಯ ಸಂಗಾತಿಗೆ ತಲುಪುವ ಮೊದಲೇ ನೀವೇ ಎಲ್ಲವನ್ನೂ ಹೇಳಿಬಿಡಿ. ಇದರಿಂದ ಅಪನಂಬಿಕೆ ದೂರವಾಗುತ್ತದೆ.

ದುಡುಕಿನ ನಿರ್ಧಾರ ಬೇಡ :
ಯಾವುದೇ ಸಮಸ್ಯೆಗೂ ದುಡುಕಿನ ನಿರ್ಧಾರ ತೆಗೆದುಕೊಳ್ಳುವುದು ಉತ್ತಮವಲ್ಲ. ಒಂದು ವೇಳೆ ಸಂಬಂಧದ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕೆಂದು ನಿರ್ಧರಿಸಿದರೂ, ಅದಕ್ಕೂ ಮುನ್ನ
ಕೌನ್ಸಿಲಿಂಗ್ ಮಾಡಿಸಿಕೊಳ್ಳಿ. ಹೊಂದಾಣಿಕೆ, ನಿರೀಕ್ಷೆಗಳನ್ನು ಹುಟ್ಟುಹಾಕುವುದು ಎಲ್ಲವೂ ಸಾಧ್ಯ. ಈ ಪ್ರಯತ್ನದಲ್ಲಿ ಸಂಕೋಚ ಮತ್ತು ಹಿಂಜರಿಕೆಯನ್ನು ಬಿಟ್ಟು ಸಲಹೆಗಾರರ ​​ಸಹಾಯವನ್ನು ಪಡೆಯಿರಿ.

Advertisement
Continue Reading
Advertisement
Click to comment

Leave a Reply

Your email address will not be published. Required fields are marked *

ಬೆಂಗಳೂರು4 months ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು4 months ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು4 months ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು4 months ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು4 months ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು4 months ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು4 months ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು4 months ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured3 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured5 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured3 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured1 year ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ5 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured4 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured5 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured5 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured7 months ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured1 year ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ