Featured
ಇತಿಹಾಸ ಹೇಗಿದೆಯೋ ಹಾಗೇ ಮಕ್ಕಳಿಗೆ ಕಲಿಸಿ : ಟಿಪ್ಪು ವಿವಾದದ ಬಗ್ಗೆ ಯದುವೀರ್ ಒಡೆಯರ್ ಮಾತು
![](https://risingkannada.com/wp-content/uploads/2019/10/tippu-odeyar.jpg)
ಮೈಸೂರು : ಸದ್ಯ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಹಾಟ್ ನ್ಯೂಸ್ ಅಂದ್ರೆ, ಅದು ಟಿಪ್ಪು ಸುಲ್ತಾನ್. ಪಠ್ಯದಲ್ಲಿ ಟಿಪ್ಪು ಸುಲ್ತಾನ್ ಕುರಿತ ಇತಿಹಾಸ ತೆಗೆದುಹಾಕೋಕೆ ರಾಜ್ಯ ಬಿಜೆಪಿ ಸರ್ಕಾರ ನಿರ್ಧರಿಸಿದೆ. ಈ ವಿಚಾರವನ್ನ ಸಿಎಂ ಬಿ.ಎಸ್. ಯಡಿಯೂರಪ್ಪ ಅವರೇ ಸ್ಪಷ್ಟಪಡಿಸಿದ್ದು, ಇದೀಗ ವಿವಾದಕ್ಕೆ ಕಾರಣವಾಗಿದೆ. ಇಷ್ಟು ದಿನ ಟಿಪ್ಪು ಮೈಸೂರು ಹುಲಿ ಎಂದು ಓದಿದ್ದೇ ತಪ್ಪಾ..? ಹಾಗಿದ್ರೆ, ಟಿಪ್ಪುಗೆ ಇತಿಹಾಸವೇ ಇಲ್ವಾ ಅನ್ನೋ ಅಭಿಪ್ರಾಯಗಳು ಎಲ್ಲೆಡೆ ವ್ಯಕ್ತವಾಗ್ತಿದೆ.
ಟಿಪ್ಪು ಇತಿಹಾಸವನ್ನ ಪಠ್ಯದಿಂದ ತೆಗೆದು ಹಾಕುವ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರು ರಾಜವಂಶಸ್ಥರಾದ ಮಹಾರಾಜ ಯದುವೀರ್ ಒಡೆಯರ್ ಮಾತನಾಡಿದ್ದಾರೆ. ಅದು ಸರ್ಕಾರದ ಇಷ್ಟ. ಆ ಬಗ್ಗೆ ನನ್ನದೇನು ಅಭಿಪ್ರಾಯ ಇಲ್ಲ. ಇತಿಹಾಸ ಹೇಗಿದೆಯೋ, ಹಾಗೇಯೆ ಮಕ್ಕಳಿಗೆ ಕಲಿಸಬೇಕು. ಅದನ್ನ ಯಾರು ಬದಲಾಯಿಸಿಬಾರದು ಅನ್ನೋದು ನನ್ನ ಅಭಿಪ್ರಾಯ ಎಂದು ಯದುವೀರ್ ಹೇಳಿದ್ದಾರೆ.
ಸರ್ಕಾರದ ಈ ನಿರ್ಧಾರದ ಬಗ್ಗೆ ನನ್ನ ವೈಯುಕ್ತಿಕ ಅಭಿಪ್ರಾಯ ಬೇಕಾಗಿಲ್ಲ. ಯಾರಿಗೆ ಶಿಕ್ಷಣ ಹಾಗೂ ವಿದ್ಯಾಭ್ಯಾಸ ಬಗ್ಗೆ ಹೆಚ್ಚಿನ ಅರಿವು ಇದೆಯೋ ಅವರ ಅಭಿಪ್ರಾಯ ಪಡೆದುಕೊಳ್ಳಿ. ಆದ್ರೆ ಇತಿಹಾಸವನ್ನ ಇರುವಂತೇಯೆ ಮಕ್ಕಳಿಗೆ ತಿಳಿಸಬೇಕು ಎಂದು ಯದುವೀರ್ ಒಡೆಯರ್ ಹೇಳಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?