Featured
ಟಿಪ್ಪು ಆಡಳಿತ ಇದ್ದಿದ್ರೆ, ಸಿದ್ದರಾಮಯ್ಯನೂ ಬದಲಾಗ್ತಿದ್ರು..! : ಸಿಟಿ ರವಿ ಗುದ್ದು..!
![](https://risingkannada.com/wp-content/uploads/2019/08/ct-ravi.jpeg)
ಬೆಂಗಳೂರು : ಟಿಪ್ಪು ಸುಲ್ತಾನ್ ಇತಿಹಾಸ ಪಠ್ಯದಲ್ಲಿ ಇರುತ್ತೋ ಇರಲ್ವೋ ಎಂಬ ಗೊಂದಲ ಮುಂದುವರೆದಿದೆ. ಈ ನಡುವೆ ಬಿಜೆಪಿ ನಾಯಕರು ಟಿಪ್ಪು ಪಠ್ಯ ಬೇಡ ಅನ್ನೋ ವಾದ ಮುಂದುವರೆಸಿದ್ದಾರೆ. ಇದೇ ವಿಚಾರವಾಗಿ ಬೆಂಗಳೂರಿನಲ್ಲಿ ಮಾತ್ನಾಡಿದ ಸಚಿವ ಸಿ.ಟಿ. ರವಿ, ಟಿಪ್ಪು ಸುಲ್ತಾನ್, ಮೊದಲ ಹಾಗೂ ಎರಡನೇ ಮೈಸೂರು ಯುದ್ಧದಲ್ಲಿ ಸೋತ ನಂತರ ಓಲೈಕೆ ರಾಜಕಾರಣ ಮಾಡಲು ಶುರು ಮಾಡಿದ ಎಂದಿದ್ದಾರೆ.
ಎರಡು ಯುದ್ಧ ಸೋತ ಬಳಿಕ, ಶೃಂಗೇರಿಗೆ ದಾನ ಕೊಡಲು ಹೋದ ಎಂದು ಸಿ.ಟಿ. ರವಿ ಹೇಳಿದ್ದಾರೆ. ಕನ್ನಡವನ್ನು ಬಿಟ್ಟು ಪಾರ್ಸಿ ಭಾಷೆ ಆಡಳಿತ ಭಾಷೆಯಾಗಿ ಮಾಡಿದ. ಒಂದ್ವೇಳೆ, ಟಿಪ್ಪು ಆಡಳಿತ ಮುಂದುವರೆದಿದ್ದರೆ ಸಿದ್ದರಾಮಯ್ಯನೂ ಬದಲಾಗಿರ್ತಿದ್ರು. ಅವರ ಭಾಷೆನೂ ಪಾರ್ಸಿ ಇರ್ತಿತ್ತು ಎಂದು ಸಿಟಿ ರವಿ, ಸಿದ್ದರಾಮಯ್ಯ ಅವರನ್ನ ವ್ಯಂಗ್ಯ ಮಾಡಿದ್ದಾರೆ.
ಇತಿಹಾಸ ನಾಡಿನ ಜನರಿಗೆ ಪ್ರೇರಣೆ ಕೊಡಬೇಕು. ಮಕ್ಕಳಿಗೆ ಆ ರೀತಿಯ ಇತಿಹಾಸ ಹೇಳಿಕೊಡಬೇಕು. ಅಲೆಕ್ಸಾಂಡರ್ನನ್ನ ಸೋಲಿಸಿದ ಪುರರವನ ಪೌರುಷದ ಬಗ್ಗೆ ಮಕ್ಕಳಿಗೆ ಹೇಳಬೇಕಿದೆ. ಇತಿಹಾಸ ವಾಸ್ತವಿಕ ನೆಲೆಯಿಂದ ಕೂಡಿರಬೇಕು ಎಂದು ವಿಧಾನಸೌಧದಲ್ಲಿ ಸಚಿವ ಸಿ.ಟಿ ರವಿ ಹೇಳಿದ್ದಾರೆ..
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?