Featured
ಟಿಕ್ಟಾಕ್ ಸ್ಟಾರ್ ಸೋನು ಗೌಡ ಏನ್ ಮಾಡ್ತಿದ್ದಾರೆ.? : Bigg Bossಗೆ ಹೋಗ್ತಾರಾ..?
ರೈಸಿಂಗ್ ಕನ್ನಡ :- ( ಸೋನುಗೌಡ. ) ಟಿಕ್ಟಾಕ್ ವಿಡಿಯೋ ಮೂಲಕ ವೈರಲ್ ಆಗಿರೋ ಸ್ಟಾರ್. ಜೊತೆಗೆ ಹಲವು ವಿವಾದಗಳಿಂದಲೇ ಕನ್ನಡಿಗರ ಆಕ್ರೋಶಕ್ಕೆ, ನೆಟ್ಟಿಗರ ಟ್ರೋಲ್ಗೆ ಒಳಗಾಗಿ, ಈಗ ನಟಿಯಾಗಿ ಪ್ರಮೋಷನ್ ಪಡೆದಿದ್ದಾರೆ. ಯೆಸ್, ಸೋಶಿಯಲ್ ಮೀಡಿಯಾ ಸ್ಟಾರ್ ಆಗಿದ್ದ ಸೋನು ಗೌಡ, ಈಗ ಸ್ಯಾಂಡಲ್ವುಡ್ ನಟಿಯಾಗಿ ಪ್ರಮೋಟ್ ಆಗಿದ್ದಾರೆ. ಈ ನಡುವೆ, ಸೋನುಗೌಡ, ಬಿಗ್ ಬಾಸ್ ಸ್ಪರ್ಧಿ ಆಗ್ತಾರೆ ಅನ್ನೋ ಮಾಹಿತಿ ಹೊರ ಬಂದಿದೆ.
ಇನ್ನೇನು ಮುಂದಿನ ತಿಂಗಳು ಅಂದ್ರೆ, ಫೆಬ್ರವರಿಯಲ್ಲಿ ಕಲರ್ಸ್ ಕನ್ನಡ ವಾಹಿನಿಯ ಬಿಗ್ ಬಾಸ್ ರಿಯಾಲಿಟಿ ಶೋ ಶುರುವಾಗಲಿದೆ. ಈಗಾಗಲೇ ಬಿಗ್ ಬಾಸ್ ಶೋನಲ್ಲಿ ಯಾರೆಲ್ಲಾ ಇರ್ತಾರೆ ಅನ್ನೋ ಚರ್ಚೆ ನಡೀತಿದೆ. ಅದ್ರಲ್ಲೂ ಸೋಶಿಯಲ್ ಮೀಡಿಯಾದಲ್ಲಿ ಇವರು ಇರ್ತಾರೆ, ಅವರು ಹೋಗ್ತಾರೆ ಅನ್ನೋ ಅಂತೆ ಕಂತೆಗಳೇ ಜೋರು ಸುದ್ದಿ ಆಗ್ತಿದೆ. ಈ ಸುದ್ದಿಗೆ ಪುಷ್ಠಿ ನೀಡುವಂತೆ ಸೋನು ಗೌಡ ಬಿಗ್ ಬಾಸ್ಗೆ ಹೋಗ್ತಾರೆ ಅನ್ನೋದು ಸದ್ಯ ಹಾಟ್ ಟಾಪಿಕ್.
ಈ ಹಿಂದೆ ಕನ್ನಡಿಗರು ಬೆಳೆಸಲ್ಲ, ತುಳೀತಾರೆ ಅನ್ನೋ ಹೇಳಿಕೆ ನೀಡೋ ಮೂಲಕ ಸಿಕ್ಕಾಪಟ್ಟೆ ಟ್ರೋಲ್ ಆಗಿ, ವಿವಾದ ಸೃಷ್ಟಿಸಿದ್ದವರು ಸೋನುಗೌಡ. ಇದಾದ್ಮೇಲೆ ಈಗ ಕನ್ನಡದ ಸಿನಿಮಾವೊಂದರಲ್ಲೂ ನಟಿಸ್ತಿದ್ದಾರೆ. ಕ್ಯಾಡ್ಬರೀಸ್ ಅನ್ನೋ ಸಿನಿಮಾದಲ್ಲಿ ನಟ ಧರ್ಮ ಕೀರ್ತಿರಾಜ್ ಜೊತೆ ಸೌನುಗೌಡ ಕೂಡ ಆ್ಯಕ್ಟ್ ಮಾಡ್ತಿದ್ದಾರೆ. ಟಿಕ್ಟಾಕ್ನಲ್ಲಿ ನಟಿಸುವಷ್ಟು ಸುಲಭವಲ್ಲ, ಕ್ಯಾಮೆರಾ ಫೇಸ್ ಮಾಡೋದು. ಸಿನಿಮಾದಲ್ಲಿ ನಟಿಸೋದು ಕಷ್ಟ ಅಂತ ಸೋನುಗೌಡ ಹೇಳಿದ್ದಾರೆ.
ಇತ್ತೀಚೆಗೆ ಫೇಸ್ಬುಕ್ ಲೈವ್ನಲ್ಲಿ ಮಾತ್ನಾಡಿರೋ ಸೋನುಗೌಡು, ಬಿಗ್ ಬಾಸ್ಗೆ ಹೋಗೋ ಬಗ್ಗೆ ಯಾವುದೇ ನಿರ್ಧಾರ ಆಗಿಲ್ಲ. ಈ ಬಗ್ಗೆ ಏನನ್ನೂ ಹೇಳೋದಿಲ್ಲ. ಒಂದ್ವೇಳೆ, ಬಿಗ್ ಬಾಸ್ ಶೋಗೆ ಹೋದ್ರೆ ನಿಮಗೆ ಖಂಡಿತ ಹೇಳ್ತೇನೆ ಎಂದಿದ್ದಾರೆ.
ಆದ್ರೆ, ಸೋನುಗೌಡ ಬಿಗ್ ಬಾಸ್ಗೆ ಹೋಗೇ ಹೋಗ್ತಾರೆ. ಸದ್ಯ ಕನ್ನಡದಲ್ಲಿ ಕಾಟ್ರೋವರ್ಸಿ ಆಗಿರೋ ಸೋಶಿಯಲ್ ಮೀಡಿಯಾ ಸ್ಟಾರ್ ಅಂದ್ರೆ ಸೋನುಗೌಡ ಮಾತ್ರ. ಹೀಗಾಗಿ, ಸೋನುಗೆ ಬಿಗ್ ಬಾಸ್ನಿಂದ ಆಫರ್ ಬಂದಿದೆ. ಬಿಗ್ ಬಾಸ್ ರೂಲ್ಸ್ ಪ್ರಕಾರ, ಯಾರೂ ಕೂಡ ಬಿಗ್ ಬಾಸ್ ಮನೆಯೊಳಗೆ ಹೋಗುವವರೆಗೆ ಅದನ್ನ ಅಧಿಕೃತವಾಗಿ ಹೇಳುವಂತಿಲ್ಲ. ಹೀಗಾಗಿನೇ, ಮುಚ್ಚಿಡ್ತಿದ್ದಾರಂತೆ ಅನ್ನೋದು ಸೋಶಿಯಲ್ ಮೀಡಿಯಾಗಳಲ್ಲಿ ಕೇಳಿ ಬರ್ತಿದೆ ಮಾತು.
ಅದೇನೇ, ಆಗ್ಲಿ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿದ್ದ ಸೌನುಗೌಡ, ಈಗ ಕನ್ನಡದಲ್ಲೇ ಸಿನಿಮಾ ಮಾಡ್ತಿದ್ದಾರೆ. ಜೊತೆಗೆ ಬಿಗ್ ಬಾಸ್ ಮನೆಗೂ ಹೋಗ್ತಾರೆ ಅನ್ನೋ ಮಾತು ಕೇಳಿಬ್ತರಿದೆ. ಮುಂದೆ ಏನಾಗುತ್ತೋ ನೋಡೋಣ. ಸೌನುಗೌಡಗೂ ಒಳ್ಳೇದಾಗಲಿ ಅಂತ ಹಾರೈಸೋಣ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?