ಕ್ರೀಡೆ
ಟೀಂ ಇಂಡಿಯಾಗೆ ಕಂಬ್ಯಾಕ್ ಮಾಡಲು ಇದೇ ಲಾಸ್ಟ್ ಚಾನ್ಸ್; ಐಪಿಎಲ್ನಲ್ಲೂ ಮಿಸ್ ಆದ್ರೆ ಪರ್ಮನೆಂಟ್ ಔಟ್!
![](https://risingkannada.com/wp-content/uploads/2024/03/cricket-1.png)
Cricket : ಬಿಸಿಸಿಐ ಈ ಬಾರಿ ಹಲವಾರು ಸ್ಟಾರ್ ಕ್ರಿಕೆಟಿಗರ ಭಾರತ ತಂಡದಿಂದ ದೂರ ಮಾಡಿದೆ. ಅವರಲ್ಲಿ ಅನೇಕ ದೊಡ್ಡ ಆಟಗಾರರಾಗಿದ್ದರು. ಆದರೆ ಇದೀಗ ಅವರುಗಳು ಟೀಂ ಇಂಡಿಯಾದಿಂದ ದೂರವಿದ್ದರೂ ಐಪಿಎಲ್ ಮೂಲಕ ಕಂಬ್ಯಾಕ್ ಮಾಡಬಹುದಾಗಿದೆ.
ಈ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ ಮಾರ್ಚ್ 22 ರಿಂದ ಆರಂಭವಾಗಲಿದೆ. ಟೂರ್ನಿಯ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಮುಖಾಮುಖಿ ಆಗಲಿದೆ. ಈ ಐಪಿಎಲ್ ಸೀಸನ್ ಕೆಲವು ಭಾರತೀಯ ಕ್ರಿಕೆಟಿಗರಿಗೆ ಬಹಳ ಮಹತ್ವದ್ದಾಗಿದೆ.
ಹೌದು, ಬಿಸಿಸಿಐ ಈ ಬಾರಿ ಹಲವಾರು ಸ್ಟಾರ್ ಕ್ರಿಕೆಟಿಗರ ಹೆಸರನ್ನು ತಮ್ಮ ಪಟ್ಟಿಯಲ್ಲಿ ಇಟ್ಟುಕೊಂಡಿಲ್ಲದ ಪರಿಣಾಮವಾಗಿ, ಅವರಲ್ಲಿ ಅನೇಕ ದೊಡ್ಡ ಹೆಸರುಗಳು ಈ ವರ್ಷ ಉತ್ತಮ ಪ್ರದರ್ಶನ ನೀಡುವ ಮೂಲಕ ಟೀಮ್ ಇಂಡಿಯಾದಲ್ಲಿ ತಮ್ಮ ಸ್ಥಾನವನ್ನು ಮರಳಿ ಪಡೆಯಲು ಸಜ್ಜಾಗಿದ್ದಾರೆ.
ಪ್ರತಿ ವರ್ಷದ ಐಪಿಎಲ್ ಬಳಿಕ ಅನೇಕ ಯುವ ಪ್ರತಿಭೆಗಳು ಭಾರತೀಯ ತಂಡಕ್ಕೆ ಸೇರಿಕೊಳ್ಳುತ್ತಾರೆ. ಅದೇ ರೀತಿ ಅನೇಕ ಆಟಗಾರರು ಮತ್ತೆ ಭಾರತ ತಂಡಕ್ಕೆ ಕಂಬ್ಯಾಕ್ ಮಾಡಲು ಐಪಿಎಲ್ ಸಹಾಯಕವಾಗಿದೆ. ಕಳೆದ ಸೀಸನ್ ಬಳಿಕ ಹಾರ್ದಿಕ್ ಪಾಂಡ್ಯ ಭಾರತ ತಂಡಕ್ಕೆ ಮತ್ತಷ್ಟು ಬಲಿಷ್ಠವಾಗಿ ಮರಳಿದ್ದರು.
![](https://risingkannada.com/wp-content/uploads/2024/03/cricket-1024x1024.png)
ಅಲ್ಲದೇ ಈ ವರ್ಷ ಐಪಿಎಲ್ ಬಳಿಕ ಟಿ20 ವಿಶ್ವಕಪ್ ಇರುವುದರಿಂದ ಐಪಿಎಲ್ ಎಲ್ಲಾ ಆಟಗಾರರಿಗೆ ಅತ್ಯಂತ ಮಹತ್ವದ್ದಾಗಿದ್ದು, ಇಲ್ಲಿ ಮಿಂಚಿದರೆ ಮಾತ್ರ ಟೀಂ ಇಂಡಿಯಾ ಬಾಗಿಲು ತೆರೆಯಲಿದೆ. ಅದರಲ್ಲಿಯೂ ಈಗಾಗಲೇ ತಂಡದಲ್ಲಿ ಕಾಣಿಸಿಕೊಂಡು ಇದೀಗ ದೂರವಾಗಿರುವ ಆಟಗಾರರಿಗೆ ಇದು ಲಾಸ್ಟ್ ಚಾನ್ಸ್ ಎನ್ನುವಂತಾಗಿದೆ.
ಪೃಥ್ವಿ ಶಾ ರಾಷ್ಟ್ರೀಯ ತಂಡದ ಜೆರ್ಸಿಯಲ್ಲಿ ಎಲ್ಲಾ ಮೂರು ಮಾದರಿಗಳಲ್ಲಿ ಆಡಿದ್ದಾರೆ. ಅವರು 17 ಡಿಸೆಂಬರ್ 2020ರಂದು ಆಸ್ಟ್ರೇಲಿಯಾ ವಿರುದ್ಧ ತಮ್ಮ ಕೊನೆಯ ಅಂತರಾಷ್ಟ್ರೀಯ ಟೆಸ್ಟ್ ಪಂದ್ಯವನ್ನು ಆಡಿದರು. ODI ಪಂದ್ಯವನ್ನು 5 ಫೆಬ್ರವರಿ 2020ರಂದು ನ್ಯೂಜಿಲೆಂಡ್ ವಿರುದ್ಧ ಆಡಿದ್ದರು. ಪೃಥ್ವಿ 2021ರಲ್ಲಿ ಶ್ರೀಲಂಕಾ ವಿರುದ್ಧ ಒಂದು ಟಿ20 ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದರು. ಆ ನಂತರ ಟೀಂ ಇಂಡಿಯಾದಲ್ಲಿ ಸ್ಥಾನ ಸಿಗಲಿಲ್ಲ. ಐಪಿಎಲ್ 2024ರಲ್ನ ಅವರ ಪ್ರದರ್ಶನದಿಂದ ಮಾತ್ರ ಅವರು ರಾಷ್ಟ್ರೀಯ ತಂಡಕ್ಕೆ ಮರಳುವುದನ್ನು ಖಚಿತಪಡಿಸಬಹುದು.
ಭಾರತ ತಂಡದ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಕಳೆದ ವರ್ಷ ಆಗಸ್ಟ್ 13ರಂದು ವೆಸ್ಟ್ ಇಂಡೀಸ್ ವಿರುದ್ಧ ಟೀಮ್ ಇಂಡಿಯಾ ಜೆರ್ಸಿಯಲ್ಲಿ ಕೊನೆಯ ಪಂದ್ಯವನ್ನು ಆಡಿದ್ದರು. ಆ ಬಳಿಕ ರಾಷ್ಟ್ರೀಯ ತಂಡದಲ್ಲಿ ಆಡುವ ಅವಕಾಶ ಸಿಗಲಿಲ್ಲ. ಯುಜುವೇಂದ್ರ ಅವರು ಐಪಿಎಲ್‌ನಲ್ಲಿ ಪ್ರದರ್ಶನ ನೀಡಿವ ಮೂಲಕ ಮತ್ತೆ ಭಾರತ ತಂಡಕ್ಕೆ ಕಂಬ್ಯಾಕ್ ಮಾಡಲು ಸಜ್ಜಾಗಿದ್ದಾರೆ.
![](https://risingkannada.com/wp-content/uploads/2020/04/RISING-KANNADA-logo-150px.jpg)
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?