Featured
ಜಡಿಮಳೆಯಲ್ಲೂ ಪೊಲೀಸರ ಬೆವರಿಳಿಸಿದ ಭೂಪ- ಕಳ್ಳ-ಪೊಲೀಸ್ ಆಟದಲ್ಲಿ ಗೆದ್ದ ಪೊಲೀಸರು..!
ರೈಸಿಂಗ್ ಕನ್ನಡ:
ಕಾರಾವಾರ:
ಕಾರವಾರ ನಗರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ವಿಚಿತ್ರ ಘಟನೆ ನಡೆದಿದೆ. ಆಸ್ಪತ್ರೆಯ ಕೋವಿಡ್- 19 ವಾರ್ಡ್ನಿಂದ ಸೋಂಕಿತನೊಬ್ಬ ಪರಾರಿಯಾಗಿದ್ದ. ಇದರ ಪರಿಣಾಮ ಕೆಲ ಕಾಲ ಎಲ್ಲರಲ್ಲಿ ಆತಂಕ ಮನೆಮಾಡಿತ್ತು. ಧಾರವಾಡ ಮೂಲದ 38 ವರ್ಷದ ಕಳವು ಆರೋಪಿಯನ್ನು ಶಿರಸಿಯ ಉಪ ಬಂಧಿಖಾನೆಯಲ್ಲಿ ಇಡಲಾಗಿತ್ತು. ಆತನಿಗೆ ಸೋಂಕಿನ ಲಕ್ಷಣ ಇದ್ದ ಕಾರಣ ಪರೀಕ್ಷಿಸಿದಾಗ, ಕೋವಿಡ್- 19 ಸೋಂಕು ದೃಢಪಟ್ಟಿತ್ತು. ಶಿರಸಿಯ ಉಪ ಬಂಧೀಖಾನೆಯಿಂದ ಆತನನ್ನು ಕಾರವಾರದ ಕೋವಿಡ್ ವಾರ್ಡ್ಗೆ ದಾಖಲಿಸಲಾಗಿತ್ತು. ಆದರೆ, ಬೆಳಿಗ್ಗೆ 6 ಗಂಟೆಯ ಸುಮಾರಿಗೆ ಸೋಂಕಿತ ವಾರ್ಡ್ ನ ಗಾಜು ಒಡೆದು ಪರಾರಿಯಾಗಿಬಿಟ್ಟ.
ಪರಾರಿಯಾಗುವ ಸುಮ್ಮನೆ ಪರಾರಿಯಾಗಿರಲಿಲ್ಲ. ಬದಲಿಗೆ ವಾರ್ಡ್ನಲ್ಲಿ ಇದ್ದ ಕರೋನಾ ಸೊಂಕಿತರ ಎರಡು ಮೊಬೈಲ್ ಕಳವು ಮಾಡಿದ್ದ. ತಕ್ಷಣ ವಿಷಯ ಅರಿತ ಪೊಲೀಸರು ಸೋಂಕಿತ ಕಳ್ಳನ್ನು ಹುಡುಕಲು ಶುರುಮಾಡಿದ್ರು. ಕೊನೆಗೂ ಸೋಂಕಿತ ಕಳ್ಳ ಕಾರವಾರದ ಕದ್ರಾ ಬಳಿ ಸೆರೆ ಸಿಕ್ಕಿದ. ಈ ಮಹಾನುಭಾವನ ಕಾಟಕ್ಕೆ ಒಂದು ಕಡೆ ಪೊಲೀಸರು, ಇನ್ನೊಂದು ಕಡೆ ಆಸ್ಪತ್ರೆಯ ಸಿಬ್ಬಂದಿಗಳು ಮಳೆಗಾಲದಲ್ಲೂ ಬೆವರು ಒರೆಸಿಕೊಳ್ಳುವಂತಾಗಿತ್ತು. ಈಗ ಸೋಂಕಿತ ಕಳ್ಳನನ್ನು ಮತ್ತೆ ಕೋವಿಡ್ ಆಸ್ಪತ್ರೆಗೆ ಸೇರಿಸಲಾಗಿದೆ.
ಕಾರವಾರ ಮೆಡಿಕಲ್ ಕಾಲೇಜಿನಲ್ಲಿ ಕೋವಿಡ್ ಚಿಕಿತ್ಸೆಗೆ ದಾಖಲಾಗಿದ್ದ ಖೈದಿ ಕೋವಿಡ್ ಚಿಕಿತ್ಸಾ ಘಟಕ ದಿಂದ ತಪ್ಪಿಸಿ ಕೊಂಡವನಿಗೆ ಮೇಲಾಧಿಕಾರಿಗಳ ಆದೇಶ ದಂತೆ ಕದ್ರಾ ಠಾಣೆಯ ಸಿ.ಪಿ.ಸಿ. 1025, ಮಹೇಶ ಸಾವಸಂಗಿ. ಈತನು ಸೆಂಟ್ರಿ ಕರ್ತವ್ಯ ದಲ್ಲಿದ್ದವನು ತಮ್ಮ ಕರ್ತವ್ಯ ಪ್ರಜ್ಞೆ ಯಿಂದ ತಕ್ಷಣ ಸಾಕಳಿ ಚೆಕ್ ಪೋಸ್ಟ್ ಬಳಿ ಬಂದು KSRTC ಬಸ್ನ್ನು ಚೇಸ್ ಮಾಡಿ ಕೋವಿಡ್ ಖೈದಿ ಯನ್ನು ಸಾಮಾಜಿಕ ಅಂತರ ಕಾಪಾಡಿಕೊಂಡು ತಡೆಹಿಡಿದು ಉತ್ತಮ ಕರ್ತವ್ಯ ನಿರ್ವಹಿಸಿರುತ್ತಾರೆ ಸಿ. ಪಿ.ಸಿ. 1025 ರವರ ಕರ್ತವ್ಯ ಶ್ಲಾಘನೀಯ ವಾಗಿದ್ದು. ಉಪವಿಭಾಗ ದಿಂದಾ ಅವರ ಕಾರ್ಯಕ್ಕೆ ಅಭಿನಂದನೆ ಸಲ್ಲಿಸುತ್ತೇನೆ.
- ಅರವಿಂದ ಕಲ್ಲಗುಜ್ಜಿ, ಡಿವೈಎಸ್ ಪಿ