Connect with us

ಬೆಂಗಳೂರು

ದೃಶ್ಯ ಸಿನಿಮಾ ಸ್ಟೈಲ್ನಲ್ಲಿ ನಡೆದಿತ್ತು ಕೊಲೆ: ಹೇಗಿತ್ತು ಗೊತ್ತಾ ಹತ್ಯೆಯ ಪ್ಲ್ಯಾನ್

ಬೆಂಗಳೂರು : ಆತ ವಿಜಯವಾಡದಲ್ಲಿ ಬಿ. ಟೆಕ್ ವ್ಯಾಸಂಗ ಮಾಡುತ್ತಿದ್ದ. ಪದೇ ಪದೇ ಬೆಂಗಳೂರಿನ ಮಾವನ ಮನೆಗೆ ಬಂದು ಹೋಗುತ್ತಿದ್ದ. ಅತ್ತೆಯ ಜೊತೆ ಸಲುಗೆಯಿಂದ ಇರುತ್ತಿದ್ದ ಅವ್ನು ಇತ್ತೀಚೆಗೆ ಹಲ್ಲು ನೋವಿಗೆ ಚಿಕಿತ್ಸೆಗೆಂದು ಮಾವನ ಮನೆಗೆ ಬಂದಿದ್ದ. ಆತ ಬಂದ ವಾರಕ್ಕೆ ಮುದ್ದಿನ ಅತ್ತೆ ನಾಪತ್ತೆ. ಅಷ್ಟಕ್ಕೂ ಮಿಸ್ ಆದ ಮುದ್ದಿನ ಅತ್ತೆ ಏನಾದ್ಲು ಗೊತ್ತಾ?

ಆಕೆಯ ಹೆಸರು ಸುಕನ್ಯಾ. ಬೆಂಗಳೂರಿನ ದೊಡ್ಡತೊಗೂರಿನಿಂದ ಕಾಣೆಯಾಗಿದ್ದ ಈಕೆ ಬರ್ಬರವಾಗಿ ಕೊಲೆಯಾಗಿ ಹೋಗಿದ್ದಾಳೆ. ಬೆಂಗಳೂರು ಹೊರವಲಯದ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಪೋಡು ಗ್ರಾಮದ ಬಳಿ ಸುಕನ್ಯಾ ದೇಹ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ತನ್ನ ಪತಿ ಅಕ್ಕನ ಮಗನಿಂದಲೇ ಬರ್ಬರವಾಗಿ ಕೊಲೆಯಾಗಿದ್ದಾಳೆ. ವಿಜಯವಾಡದಲ್ಲಿ ಬಿ ಟೆಕ್ ವ್ಯಾಸಂಗ ಮಾಡುತ್ತಿದ್ದ ಪತಿಯ ಅಕ್ಕನ ಮಗ ಜಸ್ವಂತ್ ಕೊಲೆಗೈದ ಪಾಪಿ ಅಳಿಯ.

ಆಂಧ್ರದಿಂದ ವಲಸೆ ಬಂದಿದ್ದ ಸುಕನ್ಯಾ ಕುಟುಂಬ ದೊಡ್ಡ ತೊಗೂರಿನಲ್ಲಿ ನೆಲೆಸಿತ್ತು. ಪತಿ ಎಲೆಕ್ಟ್ರಿಕ್ ಪ್ಯಾನಲ್ ಬೋರ್ಡ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ ಸುಕನ್ಯಾ ಇಬ್ಬರು ಮಕ್ಕಳನ್ನು ಪೋಷಣೆ ಮಾಡುತ್ತಿದ್ದಳು. ಇದರ ನಡುವೆ ಆಗಿಂದಾಗ್ಗೆ ಬೆಂಗಳೂರಿಗೆ ಬರುತ್ತಿದ್ದ ಆರೋಪಿ ಜಶ್ವಂತ್ ಅತ್ತೆ ಸುಕನ್ಯಾ ಜೊತೆ ಸಲುಗೆಯಿಂದ ಇರುತ್ತಿದ್ದ, ತನಗೆ ಬೇಕಾದ ಆಡುಗೆ ಕೇಳಿ ಮಾಡಿಸಿಕೊಳ್ಳುತ್ತಿದ್ದ. ಇತ್ತೀಚಿಗೆ ಸಹ ಹಲ್ಲು ನೋವು ಎಂದು ಚಿಕಿತ್ಸೆಗೆ ಮಾವನ ಮನೆಗೆ ಬಂದಿದ್ದ ಆರೋಪಿ ಅತ್ತೆ ಬಳಿ ಹಣ ಕೇಳಿದ್ದ, ಮಾತ್ರವಲ್ಲದೆ ಗೋಲ್ಡ್ ಚೈನ್ ಗೆ ಲಾಕೆಟ್ ಸಹ ಕೇಳಿದ್ದವನಿಗೆ ಅತ್ತೆ ನಿರಾಸೆ ಮಾಡಿದ್ದಾಳೆ. ಇದಾದ ಒಂದು ವಾರಕ್ಕೆ ಕಾಣೆಯಾದ ಅತ್ತೆ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.

ಇನ್ನೂ ಇದೇ ತಿಂಗಳು 11ನೇ ತಾರೀಖು ಅದೇ ಮೊದಲ ಬಾರಿಗೆ ಅಪಾರ್ಟ್ ಮೆಂಟ್ನಲ್ಲಿ ಹೌಸ್ ಕೀಪಿಂಗ್ ಕೆಲಸಕ್ಕೆ ಹೋಗಿದ್ದ ಸುಕನ್ಯಾ ನಾಪತ್ತೆಯಾಗಿದ್ದಳು. ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪತಿ ಮಿಸ್ಸಿಂಗ್ ಕೇಸ್ ದಾಖಲಿಸಿದ್ದಾರೆ. ತನಿಖೆಗಿಳಿದ ಪೊಲೀಸರಿಗೆ ಪ್ರಕರಣ ತಲೆನೋವಾಗಿ ಪರಿಣಮಿಸಿತ್ತು. ಈ ನಡುವೆ ಬನ್ನೇರುಘಟ್ಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪರಿಚಿತ ಮಹಿಳೆ ರುಂಡ ಸಿಕಿತ್ತು. ಆದ್ರೆ ಯಾವುದೇ ಕ್ಲೂ ಸಿಕ್ಕಿರಲಿಲ್ಲ. ಟೆಕ್ನಿಕಲ್ ಎವಿಡೆನ್ಸ್ ಮೇಲೆ ಆರೋಪಿ ಜಶ್ವಂತ್ ನನ್ನು ಕರೆಸಿ ನಾಲ್ಕು ದಿನ ವಿಚಾರಣೆ ನಡೆಸಿದರೂ ಸಣ್ಣ ಸುಳಿವು ಪೊಲೀಸರಿಗೆ ಸಿಕ್ಕಿರಲಿಲ್ಲ. ಕೊನೆಗೆ ತಮ್ಮ ಸ್ಟೈಲ್ ನಲ್ಲಿ ವಿಚಾರಣೆ ನಡಸಿದಾಗ ದೃಶ್ಯ ಸಿನಿಮಾ ಸ್ಟೈಲ್ನಲ್ಲಿ ಸ್ವಂತ ಅತ್ತೆಯನ್ನ ಕೊಂದು ಮುಗಿಸಿದ ಕಥೆ ಬಾಯಿ ಬಿಟ್ಟಿದ್ದಾನೆ.

ಹೌದು ಅತ್ತೆ ಸುಕನ್ಯಾಳ ಜೊತೆ ಸಲುಗೆ ಬೆಳೆಸಿಕೊಂಡಿದ್ದ ಆರೋಪಿ ಜಶ್ವಂತ್ ಕಾರಿನ ರಿಪೇರಿಗಾಗಿ ಹಣ ಕೇಳಿದ್ದ, ಹಣ ಕೊಡದಿದ್ದಾಗ ಕುತ್ತಿಗೆಯಲ್ಲಿರುವ ಚೈನ್ ಕೇಳಿದ್ದ. ನೀಡದಿದ್ದಾಗ ಚೈನ್ ಲಾಕೆಟ್ ಕೇಳಿದ್ದಾನೆ ಕೊಡದಿದ್ದಾಗ ಆಕ್ರೋಶಗೊಂಡ ಅಸಾಮಿ ದೃಶ್ಯ ಸ್ಟೈಲ್ನಲ್ಲಿ ಕೊಲೆ ಮಾಡಲು ಮಾಸ್ಟರ್ ಪ್ಲಾನ್ ಮಾಡಿದ್ದಾನೆ. ಕೊಲೆಗೂ ಮೊದಲು ವಿಜಯವಾಡಗೆ ತೆರಳಿ ಕಾರು ತಂದಿದ್ದ ಜಶ್ವಂತ್ ಅತ್ತೆ ಕೆಲಸ ಮುಗಿಸಿ ಬರುವುದನ್ನೆ ಕಾದಿದ್ದ. ನಿಮ್ಮ ಸಹಾಯ ಬೇಕು ಎಂದು ಕಾರು ಹತ್ತಿಸಿಕೊಂಡಿದ್ದ. ಬಳಿಕ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಪೋಡು ಗ್ರಾಮದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಮೃತದೇಹವನ್ನು ಸುಡಲು ತಮಿಳುನಾಡಿನ ಹೊಸೂರಿಗೆ ತೆರಳಿ ಪೆಟ್ರೋಲ್ ಖರೀದಿಸಿ ತಂದು ಬೆಂಕಿ ಹಚ್ಚಿ ಗೋಲ್ಡ್ ಚೈನ್ ಸಮೇತ ಗೋವಾಕ್ಕೆ ಎಸ್ಕೇಪ್ ಆಗಿದ್ದ. ಅಲ್ಲಿಯೇ ಪೆಬ್ರವರಿ 14 ರಂದು ತನ್ನ ಲವ್ವರ್ ಜೊತೆ ವ್ಯಾಲಂಟೈನ್ಸ್ ಡೇ ಆಚರಿಸಿದ್ದು, ಇದೀಗ ಎಲೆಕ್ಟ್ರಾನಿಕ್ ಸಿಟಿ ಪೊಲೀಸರ ಅತಿಥಿಯಾಗಿದ್ದಾನೆ.

ಸದ್ಯ ಎಲೆಕ್ಟ್ರಾನಿಕ್ ಸಿಟಿ ಪೊಲೀಸರ ಅತಿಥಿಯಾಗಿರುವ ದೃಶ್ಯ ಸಿನಿಮಾದ ರಿಯಲ್ ಹೀರೋ ಈ ಹಿಂದೆ ಅತ್ತಿಬೆಲೆ ಮತ್ತು ಆಂಧ್ರಪ್ರದೇಶದ ತಿರುಪತಿಯಲ್ಲಿ ಬೈಕ್ ಕಳ್ಳತನ ಕೇಸ್ ನಲ್ಲಿ ಲಾಕ್ ಆಗಿದ್ದ. ಆದ್ರೆ ಇವನ ಹಿನ್ನೆಲೆ ತಿಳಿಯದ ಮಾವ ನರಸಿಂಹ ರೆಡ್ಡಿ ಕುಟುಂಬ ಇದೀಗ ಪತ್ನಿಯನ್ನು ಕಳೆದುಕೊಂಡು ರೋಧಿಸುತ್ತಿರುವುದು ನಿಜಕ್ಕೂ ದುರಂತ.

Advertisement

ಬೆಂಗಳೂರು8 months ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು8 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್8 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು8 months ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು8 months ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು8 months ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು8 months ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು8 months ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು8 months ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು8 months ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured4 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured5 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured4 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured2 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ6 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured5 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured5 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured5 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured11 months ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured2 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ