Featured
ವಿಜಯ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಮಾಸ್ಟರ್ ರಿಲೀಸ್ ಆಯ್ತು…
![](https://risingkannada.com/wp-content/uploads/2021/01/master.jpg)
ರೈಸಿಂಗ್ ಕನ್ನಡ :- ಕಾಲಿವುಡ್ ಖ್ಯಾತ ನಟ ದಳಪತಿ ವಿಜಯ್ ಹಾಗೂ ವಿಜಯ್ ಸೇತುಪತಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಿನಿಮಾ ಮಾಸ್ಟರ್ ಕೊನೆಗೂ ರಿಲೀಸ್ ಆಗಿದೆ. ಈ ಸಿನಿಮಾದ ಕೆಲವು ಲೆಟೆಸ್ಟ್ ಸ್ಟಿಲ್ಸ್ ಇಲ್ಲಿವೆ.
ಲಾಕ್ ಡೌನ್ ಸಡಿಲಗೊಂಡ ನಂತರ ರಿಲೀಸ್ ಆಗುತ್ತಿರುವ ಸ್ಟಾರ್ ಮೊದಲ ಸಿನಿಮಾ. ಹೀಗಾಗಿಯೇ ಈ ಸಿನಿಮಾದ ಯಶಸ್ಸಿನ ಮೇಲೆ ದಕ್ಷಿಣ ಭಾರತದ ಚಿತ್ರರಂಗದ ಗಮನ ಸೆಳೆದಿದೆ.
![](https://risingkannada.com/wp-content/uploads/2021/01/master3.jpg)
ಖೈದಿ ಸಿನಿಮಾದ ನಂತರ ಲೋಕೇಶ್ ಕನಕರಾಜ್ ನಿರ್ದೇಶನ ಮಾಡಿರುವ ಚಿತ್ರ ಈ ಮಾಸ್ಟರ್.
ಒಂದು ಕಡೆ ಲಾಕ್ ಡೌನ್ ನಂತರ ರಿಲೀಸ್ ಆಗುತ್ತಿರುವ ಸಿನಿಮಾ ಹಾಗೂ ವಿಜಯ್ ಸೇತುಪತಿ ನಟಿಸಿರುವುದು ಮತ್ತೊಂದು ಕಡೆ. ಇದರಿಂದಾಗಿ ಈ ಚಿತ್ರದ ಮೇಲೆ ದೊಡ್ಡ ಮಟ್ಟದ ನಿರೀಕ್ಷೆಯೇ ಇದೆ.
ಮಾಳವೀಕ ಮೋಹನ್ ನಾಯಕಿಯಾಗಿ ನಟಿಸಿರುವ ಈ ಚಿತ್ರಕ್ಕೆ ಅನಿರುಧ್ ರವಿಂದ್ರನ್ ಸಂಗೀತ ನೀಡಿದ್ದಾರೆ. ಕಾಲಿವುಡ್ ಹಾಗೂ ಟಾಲಿವುಡ್ ಪ್ರೇಕ್ಷಕರು ಈ ಸಿನಿಮಾ ಯಾವಾಗ ರಿಲೀಸ್ ಆಗಲಿದೆ ಎಂದು ಕಾತುರದಿಂದ ಕಾಯುತ್ತಿದ್ದರು.
ತೆಲುಗಿನಲ್ಲೂ ಸಹ ಸೋಲೊ ಬ್ರದುಕೆ ಸೋ ಬೆಟರ್ ಹಾಗೂ ರವಿತೇಜ ಅವರ ಕ್ರಾಕ್ ಸಿನಿಮಾ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈಗ ಮಾಸ್ಟರ್ ಸಹ ಚಿತ್ರಮಂದಿರಕ್ಕೆ ಲಗ್ಗೆ ಇಟ್ಟಿದೆ.
ಈ ಸಿನಿಮಾ ಇಂದು ತಮಿಳಿನ ಜೊತೆಗೆ ಕನ್ನಡ, ತೆಲುಗು, ಹಿಂದಿ ಹಾಗೂ ಮಲಯಾಳಂನಲ್ಲೂ ರಿಲೀಸ್ ಆಗಿದೆ.
![](https://risingkannada.com/wp-content/uploads/2021/01/vijay1-819x1024.jpg)
ಇಂದು ಬೆಳಗಿನ ಆಟ ನೋಡಿದ ಪ್ರೇಕ್ಷಕರು ಸಿನಿಮಾ ಚೆನ್ನಾಗಿದೆ ಎಂದು ಹೇಳಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?