Featured
ಬಾಕ್ಸಿಂಗ್ ಡೇ ಟೆಸ್ಟ್: ಮೊದಲ ದಿನ ಟೀಮ್ ಇಂಡಿಯಾ ಮೇಲುಗೈ

ರೈಸಿಂಗ್ ಕನ್ನಡ:
ನ್ಯೂಸ್ ಡೆಸ್ಕ್:
ಮೆಲ್ಬರ್ನ್ನಲ್ಲಿ ನಡೆಯುತ್ತಿರುವ ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಮೊದಲ ದಿನದಾಟದ ಪಂದ್ಯದಲ್ಲಿ ಟೀಮ್ ಇಂಡಿಯಾ ಮೇಲುಗೈ ಸಾಧಿಸಿದೆ.
ಮೆಲ್ಬರ್ನ್ ಅಂಗಳದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ದುಕೊಂಡಿತ್ತು. ಅಸಿಸ್ ಪರ ಓಪನರ್ಸ್ಗಳಾದ ಜೋ ಬರ್ನ್ ಮತ್ತು ಮ್ಯಾಥೀವ್ ವೇಡ್ ಉತ್ತಮ ಓಪನಿಂಗ್ ಕೊಡುವಲ್ಲಿ ಎಡವಿದ್ರು. ಓಪನರ್ ಜೋ ಬರ್ನ್ಸ್ ಯಾವುದೇ ರನ್ ಗಳಿಸದೇ ಬೂಮ್ರಾಗೆ ಬಲಿಯಾದ್ರು. ನಂತರ ಬಂದ ಲಾಬುಸಾನೆ ವೇಡ್ ಜೊತೆಗೂಡಿ ನಿಧಾನ ಗತಿಯ ಇನ್ನಿಂಗ್ಸ್ ಕಟ್ಟುತ್ತಿದ್ರು ಆದರೆ ಈ ವೇಳೆ ದಾಳಿಗಿಳಿದ ಅಶ್ವಿನ್, 30 ರನ್ಗಳಿಸಿದ್ದ ಮ್ಯಾಥೀವ್ ವೇಡ್ ಅವರನ್ನ ಬಲಿ ಪಡೆದ್ರು.
ನಂತರ ಬಂದ ರನ್ ಮಷೀನ್ ಸ್ಟೀವ್ ಸ್ಮಿತ್ ಗು ಅಶ್ವಿನ್ ಪೆವಿಲಿಯನ್ಗೆ ಅಟ್ಟಿದ್ರು. ಮಿಡ್ಲ್ ಆರ್ಡರ್ನಲ್ಲಿ ಬಂದ ಟ್ರಾವೇಸ್ ಹೆಡ್, ಮಾರ್ನಸ್ ಲಾಬುಸಾನೆಗೆ ಒಳ್ಳೆಯ ಸಾಥ್ ಕೊಟ್ಟು 86 ರನ್ಗಳ ಜೊತೆಯಾಟ ನೀಡಿದ್ರು. ಮತ್ತೆ ದಾಳಿಗಿಳಿದ ಬೂಮ್ರಾ 38 ರನ್ಗಳಿಸಿದ್ದ ಟ್ರಾವೆಸ್ ಹೆಡ್ ಅನ್ನ ಬಲಿ ಪಡೆದ್ರು.
ಇದಾದ ಕೆಲವೇ ಹೊತ್ತಲ್ಲಿ 48 ರನ್ಗಳಿಸಿ ಅರ್ಧ ಶತಕದತ್ತ ಮುನ್ನಗುತ್ತಿದ್ದ ಲಾಬುಸಾನೆ ಡೆಬ್ಯುಟೆಂಟ್ ಸಿರಾಜ್ಗೆ ವಿಕೆಟ್ ಒಪ್ಪಿಸಿದ್ರು. ಇದರೊಂದಿಗೆ ವೇಗಿ ಸಿರಾಜ್ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯದಲ್ಲೆ ವಿಕೆಟ್ ಪಡೆದ ಸಾಧನೆ ಮಾಡಿದ್ರು. ನಂತರ ಬಂದ ಕ್ಯಾಮರಾನ್ ಗ್ರೀನ್ 12, ಟಿಮ್ ಪೇನ್ 13, ಮಿಚೆಲ್ ಸ್ಟಾರ್ಕ್ 7, ನಾಥನ್ ಲಿಯಾನ್ 20 , ಹೆಜ್ಲ್ವುಡ್ ಅಜೇಯ 4 ರನ್ಗ ಳಿಸಿದ್ರು. ಇದರೊಂದಿಗೆ ಆಸ್ಟ್ರೇಲಿಯಾ ತಂಡ ಮೊದಲ ಇನ್ನಿಂಗ್ಸ್ ನಲ್ಲಿ 195 ರನ್ಗಳಿಗೆ ಸರ್ವ ಪತನ ಕಂಡಿತು.
ಟೀಮ್ ಇಂಡಿಯಾ ಪರ ಬುಮ್ರಾ 4, ಅಶ್ವಿನ್ 3, ಮೊಹ್ಮದ್ ಸಿರಾಜ್ 2, ಜಡೇಜಾ 1 ವಿಕೆಟ್ ಪಡೆದ್ರು. ದಿನದಾಟದ ಅಂತ್ಯದಲ್ಲಿ ಇನ್ನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಓಪನರ್ ಮಯಾಂಕ್ ಅಗರ್ವಾಲ್ ಅವರ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿತು.
ಶುಭಮನ್ ಗಿಲ್ ಅಜೇಯ 28, ಚೇತೇಶ್ವರ ಪೂಜಾರ ಅಜೇಯ 7 ರನ್ಗಳಿಸಿ ಎರಡನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಭಾರತ ಮೊದಲ ಇನ್ನಿಂಗ್ಸ್ನಲ್ಲಿ 1 ವಿಕೆಟ್ ನಷ್ಟಕ್ಕೆ 36 ರನ್ಗಳಿಸಿದೆ.
You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?
















