Featured
ಅರ್ಜುನ್ ಜನ್ಯ ಹೃದಯಘಾತಕ್ಕೆ ಕಾರಣವಾಯ್ತಾ ಒತ್ತಡದ ಕೆಲಸ..?

ರೈಸಿಂಗ್ ಕನ್ನಡ :- ಸ್ಯಾಂಡಲ್ ವುಡ್ ನಲ್ಲಿ ಬಿಗ್ ಬಜೆಟ್ ಸಿನಿಮಾ ಹಾಗೂ ದೊಡ್ಡ ಸ್ಟಾರ್ ಸಿನಿಮಾಗಳಿಗೆ ಕೆಲಸ ಮಾಡಿ ಸೈ ಎನಿಸಿಕೊಂಡಿರುವ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಈಗ ಚಾಲೆಂಜಿಗ್ ಸ್ಟಾರ್ ದರ್ಶನ್ ಅವರ ರಾಬರ್ಟ್ ಚಿತ್ರಕ್ಕೆ ಕೆಲಸ ಮಾಡುತ್ತಿದ್ದಾರೆ . ಈ ಸಿನಿಮಾಗಾಗಿ ಒತ್ತಡದಲ್ಲಿ ಕೆಲಸ ಮಾಡುತ್ತದ್ದರು ಅರ್ಜುನ್ ಜನ್ಯ.

ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಹಿಟ್ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿರುವ ಅರ್ಜುನ್ ಜನ್ಯ ಅವರು ಲಘು ಹೃದಯಘಾತದಿಂದಾಗಿ ಆಸ್ಪತ್ರೆಗೆ ಸೇರಿದ್ದಾರೆ. 39 ವರ್ಷದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರಿಗೆ ಕೆಲಸದ ಒತ್ತಡದಿಂದ ಲಘು ಹೃದಯಘಾತವಾಗಿದೆ ಅನ್ನೋ ಮಾತು ಕೇಳಿ ಬರುತ್ತದೆ.
ಬಿಗ್ ಬಜೆಟ್ , ಬಿಗ್ ಸ್ಟಾರ್ ಸಿನಿಮಾಗೆ ಕೆಲಸ ಮಾಡಿ ಸೈ ಎನಿಸಿಕೊಂಡಿರುವ ಅರ್ಜುನ್ ಜನ್ಯ , ದರ್ಶನ್ ಅಭಿನಯದ ರಾಬರ್ಟ್ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದರು. ಈ ಚಿತ್ರ ಏಪ್ರಿಲ್ 9 ಕ್ಕೆ ಬಿಡುಗಡೆಯಾಗಬೇಕಿತ್ತು. ಅದಕ್ಕೂ ಮುನ್ನ ಅರ್ಜುನ್ ಜನ್ಯ ಹಾಡುಗಳನ್ನು ಸಿದ್ದಗೊಳಿಸಬೇಕಿತ್ತು. ಚಿತ್ರದಲ್ಲಿ 5 ಹಾಡುಗಳಿದ್ದು , ಅದಕ್ಕೆ ಮ್ಯೂಸಿಕ್ ಕಾಂಪೋಸ್ ಮಾಡಬೇಕಿದ್ದ ಅರ್ಜುನ್ ಜನ್ಯ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮಾರ್ಚ್ 21 ಕ್ಕೆ ರಾಬರ್ಟ್ ಚಿತ್ರ ಆಡಿಯೋ ಲಾಂಚ್ ಆಗಬೇಕಿತ್ತು , ಮಾರ್ಚ್ 21 ಕ್ಕೆ ಅರ್ಜುನ್ ಜನ್ಯ ಅವರ ನೈಟ್ಸ್ ನೊಂದಿಗೆ ರಾಬರ್ಟ್ ಸಿನಿಮಾದ ಆಡಿಯೋ ಲಾಂಚ್ ಮಾಡಬೇಕಿದ್ದ ಚಿತ್ರತಂಡ ,ಮಾರ್ಚ್ 20 ಕ್ಕೆ ಫೈನಲ್ ಕಂಟೆಟ್ ಕೊಡುವುದಾಗಿ ಅರ್ಜುನ್ ಜನ್ಯ ಅವರು ರಾಬರ್ಟ್ ಸಿನಿಮಾದ ನಿರ್ಮಾಪಕರಾದ ಉಮಾಪತಿಗೆ ಭರವಸೆಯನ್ನು ಕೊಟ್ಟಿದ್ದರಂತೆ.
ಅರ್ಜುನ್ ಜನ್ಯ ಈಗಾಗಲೆ ಹಿಂದೆ ದರ್ಶನ್ ಅಭಿನಯದ ಒಡೆಯ ಸಿನಿಮಾಗೂ ಕೆಲಸ ಮಾಡಿದ್ದು , ಅದರಲ್ಲಿ ಹಾಡುಗಳು ಹಿಟ್ ಆಗಲಿಲ್ಲ ಎಂದು ದಚ್ಚು ಅಭಿಮಾನಗಳು ಅರ್ಜುನ್ ಜನ್ಯನ ಮೇಲೆ ಸಿಟ್ಟಾಗಿದ್ದರು.
You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?















