Featured
ವಿಜಯಪುರದಲ್ಲಿ ಭಾರೀ ಮಳೆ: 10 ಹೆಚ್ಚು ಮನೆ ಕುಸಿತ: ರಾತ್ರಿಯಿಡೀ ಜನರ ಪರದಾಟ
![](https://risingkannada.com/wp-content/uploads/2020/09/vijaypura-rain-2.jpg)
ರೈಸಿಂಗ್ ಕನ್ನಡ:
ವಿಜಯಪುರ:
ವಿಜಯಪುರ ಜಿಲ್ಲಾದ್ಯಂತ ಕಳೆದ ಇಡಿರಾತ್ರಿ ಬಿಟ್ಟು ಬಿಡದೇ ಮಳೆಯಾಗಿದೆ. ವಿಜಯಪುರ ನಗರ, ತಾಲೂಕಿನಾದ್ಯಂತ, ಮುದ್ದೇಬಿಹಾಳ, ತಾಳಿಕೋಟೆ, ಸಿಂದಗಿ, ಬಸವನಬಾಗೇವಾಡಿ, ಬಬಲೇಶ್ವರ ಸೇರಿದಂತೆ ಹಲವೆಡೆ ಭಾರೀ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ರಾತ್ರಿಯಿಡೀ ಸುರಿದ ಮಳೆಗೆ ಜಿಲ್ಲೆಯ ಆಲಮೇಲ ತಾಲೂಕಿನ ತಾರಾಪುರ ಗ್ರಾಮದಲ್ಲಿ 10ಕ್ಕೂ ಅಧಿಕ ಮನೆಗಳು ಕುಸಿದು ಬಿದ್ದಿವೆ. ಇದರಿಂದಾಗಿ ರಾತ್ರಿ ಇಡೀ ಗ್ರಾಮಸ್ಥರು ಪರದಾಟ ಬೇಕಾಯಿತು.
ಭಾಗಶಃ ಮನೆಗಳ ಗೋಡೆಗಳು ಕುಸಿದು ಬಿದ್ದಿವೆ. ಯಾವುದೇ ಪ್ರಾಣಹಾನಿ ಇಲ್ಲಯಾಗಿಲ್ಲ. ಕಲಬುರ್ಗಿ ಜಿಲ್ಲೆ ಸೊನ್ನ ಬ್ಯಾರೇಜ್ ಹಿನ್ನಿರಿಗೆ ಒಳಪಡುವ ತಾರಾಪುರ ಗ್ರಾಮ ಪ್ರತಿಬಾರಿ ಮುಳಗಡೆ ಭೀತಿ ಎದುರಿಸುತ್ತಲೇ ಇದೆ. ಈ ಹಿಂದೆಯೇ ಸ್ಥಳಾಂತರವಾಗಬೇಕ್ಕಿದ್ದ ತಾರಾಪೂರ ಗ್ರಾಮದಲ್ಲಿ ಈಗ ಭಯದ ವಾತಾವರಣ ನಿರ್ಮಾಣವಾಗಿದೆ.
ಜಾಹೀರಾತು
ರಾತ್ರಿ ಸುಮಾರು 3 ಗಂಟೆಗಳ ಕಾಲ ಮಳೆ ಸುರಿದಿದೆ. ಇದರಿಂದಾಗಿ ತಾರಾಪುರ ಗ್ರಾಮಸ್ಣರು ಮನೆಯಿಂದ ಹೊರಗಡೆ ಬಂದು ರಾತ್ರಿ ಕಳೆದಿದ್ದಾರೆ. ಪ್ರತಿ ವರ್ಷ ಭೀಮಾನದಿಗೆ ಪ್ರವಾಹ ಉಂಟಾದಲ್ಲಿ ತಾರಾಪೂರ ಗ್ರಾಮವನ್ನು ಹಿನ್ನೀರು ಸುತ್ತುವರೆಯುವದು ಸಾಮಾನ್ಯಯಾಗಿದೆ. ಕಳೆದ 16 ವರ್ಷಗಳಿಂದ ಸ್ಥಳಾಂತರವಾಗದೇ ಗ್ರಾಮಸ್ಥರು ಪ್ರತಿ ವರ್ಷ ನರಕ ಯಾತನೆ ಅನುಭವಿಸುತ್ತಿದ್ದಾರೆ.
ಸದ್ಯ ತಾರಾಪೂರ ಗ್ರಾಮಸ್ಥರಿಗೆ ಮತ್ತೆ ಪ್ರವಾಹ ಭೀತಿ ಎದುರಾಗಿದೆ. ಸ್ಥಳಕ್ಕೆ ಬಾರದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?