ರೈಸಿಂಗ್ ಕನ್ನಡ:
ನ್ಯೂಸ್ ಡೆಸ್ಕ್:
“ಮನೆ ನಂಬರ್ 13” ಕನ್ನಡ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಈ ಭಯಾನಕ ಚಿತ್ರದ ಒಳ ನೋಟವನ್ನು ನೀಡುವ 1ನಿಮಿಷದ
ಟೀಸರ್ ವೀಡಿಯೊವನ್ನು ಚಿತ್ರ ತಂಡದವರು ಶುಕ್ರವಾರ ಅನಾವರಣಗೊಂಡಿದೆ.
ಈ ಟೀಸರ್ ನಮ್ಮನ್ನು ಭಯದ ರೋಲರ್-ಕೋಸ್ಟರ್ ರೈಡ್, ಸಸ್ಪೆನ್ಸ್ ಮತ್ತು ಥ್ರಿಲ್ ಮೂಲಕ ನಮ್ಮೆಲ್ಲರನ್ನೂ ನಮ್ಮ ಆಸನಗಳ ಅಂಚಿನಲ್ಲಿರಿಸುತ್ತದೆ.
ಅಲೌಕಿಕ ಶಕ್ತಿಗಳು ಮತ್ತು ಭೂತ ಆತ್ಮಗಳ ಮಧ್ಯೆ ಮನೆ ನಂಬರ್ 13 ರಲ್ಲಿ ಸಿಲುಕಿರುವ ಐದು ಜನ ಒಳ್ಳೆಯ ಸ್ನೇಹಿತರು ಭಯಾನಕ ಮನೆಯಿಂದ ಹೊರಬರಲು ಹೆಣಗಾಡುತ್ತಿರುವಾಗ ಏನಾಗುತ್ತದೆಎಂದು ತಿಳಿಯಲು ಸಿದ್ಧರಾಗಿ.
ವಿವೈಕತಿರೆಸನ್ ನಿರ್ದೇಶಿಸಿದ ಮತ್ತು ಕೃಷ್ಣ ಚೈತನ್ಯ ಅವರ ಸ್ವರ್ಣಲತಾ ಪ್ರೊಡಕ್ಷನ್ಸ್ ನಿರ್ಮಿಸಿರುವ ಈ ಚಿತ್ರದಲ್ಲಿ ಸಂಜೀವ್, ಚೇತನ್ ಗಂಧರ್ವ, ಐಶ್ವರ್ಯ ಗೌಡ, ಪ್ರವೀಣ್ ಪ್ರೇಮ್ ಮತ್ತು ವರ್ಷಾ ಬೊಲ್ಲಮ್ಮಪ್ರಮುಖ ಪಾತ್ರಗಳಲ್ಲಿದ್ದಾರೆ.
ಅಮೇಜಾನ್ ಪ್ರೈಮ್ ನಲ್ಲಿ ಇದೇ ನವೆಂಬರ್ 26 ರಂದು ಈ ಚಿತ್ರ ಬಿಡುಗಡೆಯಾಗಲಿದೆ.ಭಯಂಕರವಾದ ದೆವ್ವದ ಮನೆಗೆ ಸ್ವಾಗತಿಸುವ ಮನೆ ನಂಬರ್ 13 ರೋಮಾಂಚನಕಾರಿ ಚಿತ್ರವಾಗಿದೆ.
ಡ್ಯಾನಿಶ್ ಸೇಠ್ ಅಭಿನಯದ ಫ್ರೆಂಚ್ ಬಿರಿಯಾನಿ, ಮತ್ತು ಅರವಿಂದ್ ಅಯ್ಯರ್ ಮತ್ತು ಆರೋಹಿ ನಾರಾಯಣ್ ಅಭಿನಯದ ಕೌಟುಂಬಿಕ ಚಲನಚಿತ್ರ ಭೀಮಸೇನ ನಳಮಹಾರಾಜದ ಯಶಸ್ಸಿನ ನಂತರ, ಅಮೆಜಾನ್ ಪ್ರೆöಮ್ ವಿಡಿಯೋ ನಿಗೂಢ ಮತ್ತು ಭಯಪಡಿಸುವ ಕನ್ನಡ ಚಲನಚಿತ್ರ ಮನೆ ನಂಬರ್13ರೊಂದಿಗೆ ಪ್ರೇಕ್ಷಕರನ್ನು ಆಕರ್ಷಿಸಲು ಸಜ್ಜಾಗಿದೆ.
ಭಾರತ ಮತ್ತು 200ದೇಶಗಳು ಮತ್ತು ಪ್ರಾಂತ್ಯಗಳಲ್ಲಿನವೆಂಬರ್ 26ರಿಂದ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ವೀಕ್ಷಣೆಗೆ ಸಿದ್ಧವಿದೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?