ಕ್ರೀಡೆ
CSK vs RCB ಪಂದ್ಯದ ಟಿಕೆಟ್ ಕೊಡಿಸುವಂತೆ ಮನವಿ ಮಾಡಿದ ಟೀಂ ಇಂಡಿಯಾ

Cricket : ಅನೇಕರಿಗೆ ಆನ್ ಲೈನ್ ನಲ್ಲಿಯೂ ಟಿಕೆಟ್ ಗಳು ಲಭ್ಯವಾಗುತ್ತಿಲ್ಲ. ಇದರ ನಡುವೆ ಭಾರತ ತಂಡದ ಸ್ಟಾರ್ ಬೌಲರ್ ಒಬ್ಬರು ಚೆನ್ನೈ ಮತ್ತು ಆರ್ಸಿಬಿ ಪಂದ್ಯದ ಟಿಕೆಟ್ ಕೊಡಿಸುವಂತೆ ಟ್ವಿಟರ್ ಮೂಲಕ ಮನವಿ ಮಾಡಿದ್ದಾರೆ.
ಮಾರ್ಚ್ 22ರಂದು ಐಪಿಎಲ್ 2024, 17ನೇ ಆವೃತ್ತಿ ಅದ್ಧೂರಿಯಾಗಿ ಆರಂಭವಾಗಲಿದೆ. ಈ ಮೆಗಾ ಟೂರ್ನಿಯ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸೆಣಸಾಡಲಿದ್ದು, ಪಂದ್ಯವು ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿದೆ.
ಈ ಹೈವೋಲ್ಟೇಜ್ ಪಂದ್ಯದ ಟಿಕೆಟ್ ಗಳು ಬಿಸಿ ದೋಸೆಯಂತೆ ಸೋಲ್ಡ್ ಔಟ್ ಆಗುತ್ತಿದೆ. ಅನೇಕರಿಗೆ ಆನ್ ಲೈನ್ ನಲ್ಲಿಯೂ ಟಿಕೆಟ್ ಗಳು ಲಭ್ಯವಾಗುತ್ತಿಲ್ಲ. ಇದರ ನಡುವೆ ಭಾರತ ತಂಡದ ಸ್ಟಾರ್ ಬೌಲರ್ ಒಬ್ಬರು ಚೆನ್ನೈ ಮತ್ತು ಆರ್ಸಿಬಿ ಪಂದ್ಯದ ಟಿಕೆಟ್ ಕೊಡಿಸುವಂತೆ ಟ್ವಿಟರ್ ಮೂಲಕ ಮನವಿ ಮಾಡಿದ್ದಾರೆ.
ಭಾರತದ ಪರ 500 ಟೆಸ್ಟ್ ವಿಕೆಟ್ ಪಡೆದಿರುವ ಸ್ಟಾರ್ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಕೂಡ ಐಪಿಎಲ್ ಟಿಕೆಟ್ ಪಡೆಯಲು ಸಹಾಯ ಕೇಳುತ್ತಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನ 17ನೇ ಸೀಸನ್ ಮಾರ್ಚ್ 22 ರಿಂದ ಪ್ರಾರಂಭವಾಗುತ್ತಿದೆ. ಐಪಿಎಲ್ 2024ರ ಮೊದಲ ಪಂದ್ಯಕ್ಕೆ ರವಿಚಂದ್ರನ್ ಅಶ್ವಿನ್ ಟಿಕೆಟ್ ಕೇಳುತ್ತಿದ್ದಾರೆ.
ಐಪಿಎಲ್ 2024 ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದೊಂದಿಗೆ ಟೂರ್ನಿ ಪ್ರಾರಂಭವಾಗುತ್ತಿದೆ. ರವಿಚಂದ್ರನ್ ಅಶ್ವಿನ್ ಅವರ ತವರು ಚೆನ್ನೈನಲ್ಲಿ ಈ ಪಂದ್ಯ ನಡೆಯುತ್ತಿದೆ. ಈ ಪಂದ್ಯದ ಬಗ್ಗೆ ಅಶ್ವಿನ್ ಟ್ವೀಟ್ ಮಾಡಿದ್ದು, ಈ ಕುರಿತು ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಅಶ್ವಿನ್ ಬರೆದುಕೊಂಡಿದ್ದಾರೆ, ‘CSK vs RCB ಪಂದ್ಯದ ಟಿಕೆಟ್‌ಗಳಿಗೆ ಬೇಡಿಕೆ ತುಂಬಾ ಹೆಚ್ಚಾಗಿದೆ.
ನನ್ನ ಮಕ್ಕಳು ಕೂಡ ಐಪಿಎಲ್‌ನ ಉದ್ಘಾಟನಾ ಸಮಾರಂಭ ಮತ್ತು ಮೊದಲ ಪಂದ್ಯವನ್ನು ನೋಡಲು ಬಯಸುತ್ತಿದ್ದಾರೆ. ಹೀಗಾಗಿ ಟಿಕೆಟ್ ಕೊಡಿಸುವಂತೆ ಮನವಿ ಮಾಡಿದ್ದಾರೆ. ಸಧ್ಯ ಅಶ್ವಿನ್ ಅವರ ಈ ಬೇಡಿಕೆ ಎಲ್ಲಡೆ ಸಖತ್ ವೈರಲ್ ಆಗುತ್ತಿದ್ದು, ಚೆನ್ನೈ ಮತ್ತು ಆರ್ಸಿಬಿ ಪಂದ್ಯದ ಕ್ರೇಜ್ ಎಷ್ಟಿದೆ ಎಂದರೆ ಸ್ಟಾರ್ ಕ್ರಿಕೆಟರ್ಗೂ ಸಹ ಟಿಕೆಟ್ ಸಿಗುತ್ತಿಲ್ಲ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?