Featured
SSLC ಪರೀಕ್ಷೆ ಮುನ್ನ ಟೀಚರ್ಗಳಿಗೆ ಟ್ರೇನಿಂಗ್- ವಿದ್ಯಾರ್ಥಿಗಳು ಬರೋ ಮುನ್ನ ಶಿಕ್ಷಕರು ಏನೇನು ಮಾಡ್ಬೇಕು..?

ರೈಸಿಂಗ್ ಕನ್ನಡ:
ಭರತ್ ಕುಮಾರ್, ಚಿಕ್ಕಮಗಳೂರು
ಕೊರೋನ ಆತಂಕದಿಂದ ಸ್ಥಗಿತಗೊಂಡಿದ್ದ ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನ ನಡೆಸಲು ಸರ್ಕಾರ ಮುಂದಾಗಿದ್ದು, ಸುಸೂತ್ರ ಪರೀಕ್ಷೆ ಹಾಗೂ ಮಕ್ಕಳ ಹಿತದೃಷ್ಠಿಯಿಂದ ಎಲ್ಲಾ ಮುಂಜಾಗೃತ ಕ್ರಮಗಳೊಂದಿಗೆ ಸರ್ಕಾರ ಪರೀಕ್ಷೆ ನಡೆಸಲು ಮುಂದಾಗಿದೆ. ಚಿಕ್ಕಮಗಳೂರು ಜಿಲ್ಲಾಡಳಿತ ಎಲ್ಲಾ ಕ್ರಮಕೈಗೊಂಡು ಮಕ್ಕಳನ್ನ ಯಾವ ರೀತಿ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಬೇಕೆಂದು ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ಬೇಲೂರು ರಸ್ತೆಯ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢ ಶಾಲೆಯಲ್ಲಿ ಸರ್ಕಾರ ಎಲ್ಲಾ ಸಿದ್ಧತೆ ಮಾಡಿದೆ.
ವಿದ್ಯಾರ್ಥಿಗಳು ಶಾಲಾ ಕಾಂಪೌಂಡ್ ಒಳ ಪ್ರವೇಶಿಸುತ್ತಿದ್ದಂತೆ ಹೇಗೆ ನಿಲ್ಲಬೇಕು, ಎಲ್ಲಿ ನಿಲ್ಲಬೇಕು, ಹೇಗೆ ಸಾಗಬೇಕು ಹೀಗೆ ಪ್ರತಿಯೊಂದನ್ನು ಶಿಕ್ಷಕರಿಗೆ ತರಬೇತಿ ನೀಡಿದ್ದು,ಪರೀಕ್ಷಾ ದಿನ ಶಿಕ್ಷಕರು ಮಕ್ಕಳನ್ನ ಅದೇ ರೀತಿ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಬೇಕಿದೆ. ಈಗಾಗಲೇ ಥರ್ಮಲ್ ಸ್ಕ್ರೀನಿಂಗ್ ಹಾಗೂ ಸ್ಯಾನಿಟೈಸರ್ ಬಳಿಕ ವಿದ್ಯಾರ್ಥಿಗಳು ಹೋಗುವ ಪ್ರತಿಯೊಂದು ರೂಮಿನ ಬಾಗಿಲವರೆಗೂ ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಬಾಕ್ಸ್ಗಳನ್ನ ಹಾಕಲಾಗಿದೆ. ಇಂದು ಶಿಕ್ಷಕರಿಗೆ ಅದೇ ರೀತಿ ತರಬೇತಿ ನೀಡಲಾಗಿದೆ.
You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?















