Featured
ಪ್ರಯಾಣಿಕನ ಪಾಲಿಗೆ ಇವರೇ ಸೂಪರ್ ಸ್ಟಾರ್ಸ್..!ಪ್ರಾಮಾಣಿಕತೆ ತೋರಿದ ಚಾಲಕ, ನಿರ್ವಾಹಕರಿಗೆ ಶಹಬ್ಬಾಸ್..!
![](https://risingkannada.com/wp-content/uploads/2020/07/HBL.jpg)
ರೈಸಿಂಗ್ ಕನ್ನಡ:
ಧಾರಾವಾಡ:
ಕಲಿಯುಗದಲ್ಲಿ ಇನ್ನೊಬ್ಬರ ವಸ್ತು ಸಿಕ್ಕರೆ ತಮ್ಮದೆಂದೇ ಹೇಳಿಕೊಂಡು ಓಡಾಡುವ ಜನರೇ ಹೆಚ್ಚು. ಯಾರದ್ದೋ ಆಸ್ತಿಗೆ ಇನ್ಯಾರೋ ಬೆಲೆ ಹಾಕೋದು ಈಗ ಮಾಮೂಲಿ. ಇಂತಹದ್ದರಲ್ಲಿ ಸತ್ಯ ಹರಿಶ್ಚಂದ್ರನಂತೆ ಪ್ರಮಾಣಿಕವಾಗಿರುವವರನ್ನು ಹುಡುಕುವುದು ಕಷ್ಟ ಕಷ್ಟ. ಆದರೆ NWKSRTCಯಲ್ಲಿ ಸತ್ಯ ಹರಿಶ್ಚಂದ್ರನಿದ್ದಾರೆ. ಪ್ರಯಾಣಿಕರನ್ನು ಆತ ದೇವರೆಂದೇ ನಂಬಿದ್ದಾನೆ…! ಅವರೇ ಬಸವರಾಜ ಎನ್. ಬಾದಾಮಿ ಮತ್ತು ಗುರುಸಿದ್ಧಯ್ಯ ಜಿ ಗೌಡರ್..!
ಹುಬ್ಬಳ್ಳಿಯ ಹೊಸೂರು ಪ್ರಾದೇಶಿಕ ಬಸ್ ನಿಲ್ದಾಣದಲ್ಲಿ ಇಳಿಯುವಾಗ ಪ್ರಯಾಣಿಕರೊಬ್ಬರು ಬಸ್ಸಿನಲ್ಲಿ 15820 ರೂಪಾಯಿ ನಗದು ಹಣ ಮತ್ತು ಬೆಲೆಬಾಳುವ ದಾಖಲಾತಿಗಳನ್ನು ಬಿಟ್ಟು ಹೋಗಿದ್ದರು. ಇದನ್ನು ಗಮನಿಸಿದ ಬಸ್ ನಿರ್ವಾಹಕ ಗುರುಸಿದ್ದಯ್ಯ ಜಿ. ಗೌಡರ್ ಮತ್ತು ಚಾಲಕ ಬಸವರಾಜ ಎನ್. ಬಾದಾಮಿ ಅವುಗಳನ್ನು ಮೊದಲು ತಮ್ಮ ವಶಕ್ಕೆ ತೆಗೆದುಕೊಂಡು ಸೇಫ್ಟಿ ಮಾಡಿಕೊಂಡ್ರು. ನಂತರ ಅದರ ವಾರಸುದಾರರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದರು.
ವಾ.ಕ.ರ.ಸಾ.ಸಂಸ್ಥೆಯ ಬಾಗಲಕೋಟೆ ವಿಭಾಗದ ಗುಳೇದಗುಡ್ಡ ಘಟಕಕ್ಕೆ ಸೇರಿದ ಕೆ.ಎ.29 ಎಫ್ 1251 ಸಂಖ್ಯೆಯ ಬಸ್ಸು ಜುಲೈ 2ರಂದು ಗುಳೇದಗುಡ್ಡ ದಿಂದ ಹುಬ್ಬಳ್ಳಿಗೆ ಬರುವಾಗ, ನವಲಗುಂದದಿಂದ ಹುಬ್ಬಳ್ಳಿಗೆ ಪ್ರಯಾಣ ಮಾಡಿದ ಪ್ರಯಾಣಿಕರೊಬ್ಬರು ಹುಬ್ಬಳ್ಳಿಯ ಹೊಸೂರು ಪ್ರಾದೇಶಿಕ ಬಸ್ ನಿಲ್ದಾಣದಲ್ಲಿ ಇಳಿಯುವಾಗ ತಮ್ಮ ಪರ್ಸನ್ನು ಬಸ್ಸಿನಲ್ಲಿಯೇ ಬಿಟ್ಟು ಹೋಗಿದ್ದರು. ನಂತರ ಹುಬ್ಬಳ್ಳಿಯಿಂದ ಗುಳೇದಗುಡ್ಡಕ್ಕೆ ಹೊರಡುವುದಕ್ಕಾಗಿ ಬಸ್ಸನ್ನು ಬಸ್ ನಿಲ್ದಾಣದಲ್ಲಿ ಅಂಕಣಕ್ಕೆ ನಿಲ್ಲಿಸುವಾಗ ನಿರ್ವಾಹಕರು ಪ್ರಯಾಣಿಕರ ಆಸನದಲ್ಲಿ ಪರ್ಸ್ ಇರುವುದನ್ನು ಗಮನಿಸಿದ್ದಾರೆ.
ಪರ್ಸ್ನ್ನು ಪರಿಶೀಲಿಲಿಸಿದಾಗ ಅದರಲ್ಲಿ 15820 ರೂ. ನಗದು ಹಣದ ಜೊತೆಗೆ ಮೂರು ಎಟಿಎಂ ಕಾರ್ಡ್ ಗಳು, ಪ್ಯಾನ್ ಕಾರ್ಡ್, ಚಾಲನಾ ಪರವಾನಿಗೆ, ದ್ವಿಚಕ್ರ ವಾಹನದ ಆರ್. ಸಿ. ಪುಸ್ತಕ ಮತ್ತಿತರ ಮುಖ್ಯ ದಾಖಲೆಗಳು ಇರುವುದು ಕಂಡುಬಂದಿದೆ .ಅದರಲ್ಲಿ ಪ್ರಯಾಣಿಕರ ಹೆಸರು,ವಿಳಾಸ, ದೂರವಾಣಿ ಸಂಖ್ಯೆ ಲಭ್ಯವಿಲ್ಲದ್ದರಿಂದ ಪರ್ಸ್ ನಲ್ಲಿದ್ದ ಎಟಿಎಂ ಕಾರ್ಡ್ ಮೂಲಕ ಹುನಗುಂದದ ಬ್ಯಾಂಕಿನಲ್ಲಿ ವಿಚಾರಿಸಿದ್ದಾರೆ. ಪ್ರಯಾಣಿಕರನ್ನು ತುಮಕೂರು ಮೂಲದ ಹಾಲಿ ಹುಬ್ಬಳ್ಳಿ ನಿವಾಸಿ ಬಿ.ಎನ್. ನಟರಾಜು ಎಂಬುದಾಗಿ ಪತ್ತೆ ಮಾಡಿ ಅವರಿಗೆ ಪರ್ಸ್ ಸಿಕ್ಕಿರುವ ವಿಚಾರವನ್ನು ತಿಳಿಸಿದ್ದಾರೆ.
ಕಳೆದುಕೊಂಡಿರುವ ವಸ್ತು ವನ್ನು ನಟರಾಜು ಮತ್ತೆ ಪಡೆದುಕೊಂಡಿದ್ದಾರೆ. ಹುಬ್ಬಳ್ಳಿಯ ವಿಭಾಗೀಯ ಕಚೇರಿಗೆ ಪ್ರಯಾಣಿಕರನ್ನು ಕರೆಸಿ ನಿರ್ವಾಹಕರ ಮೂಲಕ ಅವರ ಪರ್ಸನ್ನು ಹಿಂದಿರುಗಿಸಲಾಗಿದೆ. ಪ್ರಾಮಾಣಿಕತೆ ಮೆರೆದು ಇತರರಿಗೆ ಮಾದರಿಯಾದ ಚಾಲಕ ಮತ್ತು ನಿರ್ವಾಹಕರಿಗೆ ನಗದು ಬಹುಮಾನಕ್ಕೆ ಶಿಫಾರಸ್ಸು ಮಾಡಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.
![](https://risingkannada.com/wp-content/uploads/2020/04/RISING-KANNADA-logo-150px.jpg)
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?