Featured
ಕೈ ಮುಗಿತೀವಿ ಮನೆಯೊಳಗೆ ಇರಿ..! ಕರೋನಾ ದೂರ ಮಾಡಲು ಹೆಲ್ಪ್ಮಾಡಿ..!
ರೈಸಿಂಗ್ ಕನ್ನಡ:
ರಾಯಚೂರು:
ಕೊರೊನಾ ಮನೆಯ ಬಾಗಿಲು ಮುಂದೆ ಬಂದು ನಿಂತಿದೆ. ಪ್ರತಿದಿನ ಪಾಸಿಟಿವ್ ಕೇಸ್ಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರಾಯಚೂರಿನಲ್ಲಿ ಶನಿವಾತರವೂ 41 ಪಾಸಿಟಿವ್ ಕೇಸ್ಗಳು ದಾಖಲಾಗಿವೆ. ಇಷ್ಟಾದ್ರೂ ರಾಯಚೂರು ಜನರಿಗೆ ಕರೋನಾದ ಭಯ ಇನ್ನೂ ಸರಿಯಾಗಿ ಆಗಿಲ್ಲ. ಭಾನುವಾರದ ಲಾಕ್ಡೌನ್ ವೇಳೆ ಯಾರೂ ಮನೆಯಿಂದ ಹೊರಗೆ ಬರಬೇಡಿ ಅಂತ ಪೊಲೀಸರು ಅನೌನ್ಸ್ ಮಾಡಿದ್ದರೂ ಜನ ಕೇಳ್ತಿಲ್ಲ. ಕರೋನಾ ದೂರ ಮಾಡಲು ಹೆಲ್ಪ್ ಮಾಡಿ ಅಂತ ಹೇಳಿದ್ರೂ ರಾಯಚೂರಿನ ಜನ ಕಿವಿಗೆ ಹಾಕಿಕೊಂಡಂತಿಲ್ಲ.
ರಾಯಚೂರು ಜಿಲ್ಲೆಯಲ್ಲಿ ಅಂಗಡಿ ಮುಂಗಟ್ಟುಗಳನ್ನ ಬಂದ್ ಮಾಡಲಾಗಿದ್ದರೂ ಸಾರ್ವಜನಿಕರ ಓಡಾಟ ಮಾತ್ರ ಕಮ್ಮಿಆಗಿಲ್ಲ. ಜೊತೆಗೆ ಪೌರ ಕಾರ್ಮಿಕರು ಭಯದ ವಾತವರಣದಲ್ಲಿ ನಗರ ಸ್ವಚ್ಚತಾ ಕಾರ್ಯದಲ್ಲಿ ತೊಡಗಿದ್ದಾರೆ. ನಗರಸಭೆ ಅಧಿಕಾರಿಗಳು ಪೌರ ಕಾರ್ಮಿಕರಿಗೆ ಹ್ಯಾಂಡ್ ಗ್ಲೌಸ್, ಮಾಸ್ಕ್ ನೀಡದೆ ಕೆಲಸ ಮಾಡಿಸುತ್ತಿದ್ದಾರೆ.
ಇನ್ನೂ ಕ್ಯಾಮೆರಾ ನೋಡುತ್ತಿದ್ದಂತೆ ಜೇಬಿನಲ್ಲಿದ್ದ ಮಾಸ್ಕ್ ತೆಗೆದು ಹಾಕಿಕೊಂಡು ಕೆಲಸದಲ್ಲಿ ನಿರತರಾದರು. ಗ್ಲೌಸ್ ಬಗ್ಗೆ ಕೇಳಿದರೆ ನಮಗೆ ನಿಡಿಲ್ಲ ಎನ್ನುತ್ತಾರೆ. ಇದರ ಜೊತೆಯಲ್ಲಿ ಇಂದು ರಾಯಚೂರು ಜಿಲ್ಲೆಯಲ್ಲಿ ಲಾಕ್ ಡೌನ್ ನಿಯಮಗಳು ಸರಿಯಾಗಿ ಪಾಲನೆ ಆಗುತ್ತಿಲ್ಲ. ರಾಯಚೂರು ನಗರದಲ್ಲಿ ಜನ ಸಂಚಾರ ಎಂದಿನಂತೆ ಇದೆ. ಆಟೊ ಸಂಚಾರ, ಬೈಕ್ ಸಂಚಾರ ಸೇರಿದಂತೆ ಖಾಸಗಿ ವಾಹನಗಳು ಎಂದಿನಂತೆ ಒಡಾಡುತ್ತಿವೆ.
ಪೊಲೀಸರು ಕೆಲವು ಕಡೆ ಬ್ಯಾರಿಕೇಡ್ ಹಾಕಿ ಜನ ಸಂಚಾರ ನಿಯಂತ್ರಣ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?