Featured
Sumalatha Ambarish : ಸುಮಲತಾ ಅಂಬರೀಷ್ ಬಯೋಪಿಕ್ ಸಿನಿಮಾ ಬರುತ್ತಾ.? : EXCLUSIVE
ರೈಸಿಂಗ್ ಕನ್ನಡ :- ಭಾರತದಲ್ಲಿ ಫೇಮಸ್ ವ್ಯಕ್ತಿಗಳ ಬಯೋಪಿಕ್ ಸಿನಿಮಾ ಆಗೋದು ಹೊಸತೇನಲ್ಲ. ಸಿನಿಮಾ ತಾರೆಯರು, ರಾಜಕೀಯ ವ್ಯಕ್ತಿಗಳು, ಕ್ರೀಡಾ ಪಟುಗಳ ಬಯೋಪಿಕ್ ಬರುತ್ತಲೇ ಇರುತ್ವೆ. ಅದ್ರಲ್ಲೂ ಇತ್ತೀಚೆಗೆ ವೆಬ್ ಸಿರೀಸ್, ಓಟಿಟಿ ಶುರುವಾದ ಮೇಲಂತೂ ಬಯೋಪಿಕ್ ಸಿನಿಮಾಗಳ ಸಂಖ್ಯೆ ಜಾಸ್ತಿ ಆಗುತ್ತಲೇ ಇದೆ.
ಇದೀಗ ಕರ್ನಾಟಕದಲ್ಲೇ ಅಲ್ಲದೆ, ಇಡೀ ದೇಶದಲ್ಲಿ ಸಂಚಲನ ಮೂಡಿಸಿ ಚುನಾವಣೆ ಗೆದ್ದ ನಟಿ, ಸಂಸದೆ ಸುಮಲತಾ ಅವರ ಬಯೋಪಿಕ್ ಬಗ್ಗೆ ಚರ್ಚೆ ಆಗ್ತಿದೆ. ಯೆಸ್, ಬಲ್ಲ ಮೂಲಗಳ ಪ್ರಕಾರ ಸುಮಲತಾ ಅಂಬರೀಷ್ ಬಯೋಪಿಕ್ ಸಿನಿಮಾ ಮಾಡೋದ್ರ ಬಗ್ಗೆ ಚರ್ಚೆ ಆಗ್ತಿದೆಯಂತೆ.
ರೈಸಿಂಗ್ ಕನ್ನಡಗೆ ಸಿಕ್ಕ ಮಾಹಿತಿ ಪ್ರಕಾರ ಈಗಾಗ್ಲೇ ನಿರ್ದೇಶಕ ಗುರುದೇಶ ಪಾಂಡೆ, ಸುಮಲತಾ ಜೊತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಬಹುಭಾಷಾ ತಾರೆಯಾಗಿ, ಬಹುತೇಕ ಎಲ್ಲಾ ಸೌತ್ ಸಿನಿಮಾದ ಸ್ಟಾರ್ಗಳ ಜೊತೆ ಸುಮಲತಾ ನಟಿಸಿದ್ದಾರೆ. ರಜಿನಿಕಾಂತ್, ಚಿರಂಜೀವಿ, ವಿಷ್ಣುವರ್ಧನ್, ಅಂಬರೀಷ್, ಮೋಹನ್ ಬಾಬು.. ಹೀಗೆ ಹೇಳುತ್ತಾ ಹೋದ್ರೆ ಪಟ್ಟಿ ದೊಡ್ಡದಾಗುತ್ತೆ. ಇಂತಹ ಘಟಾನುಘಟಿ ನಟರ ಜೊತೆ ಸ್ಕ್ರೀನ್ ಶೇರ್ ಮಾಡಿಕೊಂಡವರು ಸುಮಲತಾ. ಬಳಿಕ ಕನ್ನಡದ ರೆಬಲ್ ಸ್ಟಾರ್ ಅಂಬಿ ಜೊತೆ ಮದ್ವೆಯಾಗಿ, ನಟನೆ ಜೊತೆ ಕುಟುಂಬದಲ್ಲೂ ಸೈ ಎನಿಸಿಕೊಂಡವರು ಸುಮಲತಾ.
ಇದೀಗ ಲೇಟೆಸ್ಟ್ ನ್ಯೂಸ್ ಏನಪ್ಪ ಅಂದ್ರೆ, ಸುಮಲತಾ ಬಯೋಪಿಕ್ ಸಿನಿಮಾ. ಅಂಬರೀಷ್ ನಿಧನದ ಬಳಿಕ ರಾಜಕೀಯದಲ್ಲಿ ಸುಮಲತಾ ಸಕ್ಸಸ್ ಆಗಿದ್ದು ಹೇಗೆ ಅನ್ನೋದು ಸಿನಿಮಾದ ಕಥಾವಸ್ತು ಅನ್ನೋ ಮಾಹಿತಿ ಬರ್ತಿದೆ. ಅಂಬಿ ನಿಧನದ ಬಳಿಕ ಮಂಡ್ಯ ಕ್ಷೇತ್ರದ ಸಂಸದೆ ಆಗಿದ್ದು ಹೇಗೆ.? ಸುಮಲತಾ ಅನುಭವಿಸಿದ ಕಷ್ಟಗಳು, ಸವಾಲುಗಳು ಏನು..? ಯಾರೆಲ್ಲಾ ಸುಮಲತಾಗೆ ಕಷ್ಟ ಕೊಟ್ರು.. ಯಾರು ಜೊತೆಯಾಗಿ ನಿಂತ್ರು ಅನ್ನೋ ಅಂಶಗಳು ಸಿನಿಮಾದಲ್ಲಿ ಇರುತ್ತೆ ಅನ್ನೋ ಮಾತು ಕೇಳಿ ಬರ್ತಿದೆ.
ಕನ್ನಡದ ಸ್ಟಾರ್ ನಟರಾದ ದರ್ಶನ್, ಯಶ್ ಹೇಗೆ ಸುಮಲತಾ ಪರವಾಗಿ ಕೊನೆಯವರೆಗೂ ನಿಂತ್ರು. ಅವರ ಪ್ರಚಾರ ಹೇಗೆ ಸುಮಲತಾಗೆ ಉಪಯೋಗವಾಯ್ತು. ನಟಿಯಾಗಿದ್ದ ಸುಮಲತಾ, ಒಂದು ರಾಜ್ಯದ ಮುಖ್ಯಮಂತ್ರಿಯನ್ನೇ ಎದುರು ಹಾಕಿಕೊಂಡು ಸಂಸದೆಯಾಗಿ ಗೆದ್ದಿದ್ದು ಹೇಗೆ ಅನ್ನೋದು ಸಿನಿಮಾದಲ್ಲಿ ಇರಲಿದೆಯಂತೆ.
ಅಲ್ಲಿಗೆ ಸುಮಲತಾ ಅವರ ಪೊಲಿಟಿಕಲ್ ಥ್ರಿಲ್ಲರ್ ಸಿನಿಮಾ ಇದಾಗಲಿದೆ. ಸಿನಿಮಾದಲ್ಲಿ ಏನೆಲ್ಲಾ ರೋಚಕ ಅಂಶಗಳು ಇರಲಿವೆ ಅನ್ನೋದು ಶೀಘ್ರವೇ ಗೊತ್ತಾಗಲಿದೆ.
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದು, ಆಗ ಸಿಎಂ ಆಗಿದ್ದ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ವಿರುದ್ಧ ಗೆದಿದ್ದು ಇತಿಹಾಸವೇ ಸರಿ. ರಾಜಕೀಯ ಥ್ರಿಲ್ಲರ್ ಆಗಿ ಸುಮಲತಾ ಸಿನಿಮಾ ಬರೋ ಸಾಧ್ಯತೆ ಇದೆ. ಸುಮಲತಾ ಸಿನಿಮಾದಲ್ಲಿ ಇನ್ನೂ ಯಾವೆಲ್ಲಾ ಅಂಶಗಳು ಇರುತ್ತೆ ಅನ್ನೋದ್ರ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಯಲಿದೆ. ಕನ್ನಡದಲ್ಲಿ ತಯಾರಾಗಿ, ತೆಲುಗು ಸೇರಿದಂತೆ ಇತರೆ ಭಾಷೆಗಳಿಗೂ ಸುಮಲತಾ ಬಯೋಪಿಕ್ ಡಬ್ ಆಗೋ ಸಾಧ್ಯತೆ ಇದೆ.
ಇದೇನಾದ್ರೂ ಆಗಿದ್ದೇ ಆದ್ರೆ, ಕನ್ನಡದಲ್ಲಿ ತಯಾರಾಗೋ ಮಹಿಳೆಯೊಬ್ಬರ ಮೊದಲ ಬಯೋಪಿಕ್ ಆಗಲಿದೆ.. ಗುಡ್ ಲಕ್ ಟು ಟೀಂ ಸುಮಲತಾ ಅಂಬರೀಷ್..
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?