ರಾಜ್ಯ
ಸುದೀಪ್ ಪೈಲ್ವಾನ್ ಪೈರಸಿ ಮಾಡಿದ್ದ ಆರೋಪಿಗಳು ಕೊನೆಗೂ ಅರೆಸ್ಟ್ : ದರ್ಶನ್ ಫ್ಯಾನ್ಸ್ ಬಂಧನ..!
![](https://risingkannada.com/wp-content/uploads/2019/09/pilwan.jpg)
ಬೆಂಗಳೂರು : ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ವಾರ್ಗೆ ಕಾರಣವಾಗಿದ್ದ ಪೈಲ್ವಾನ್ ಸಿನಿಮಾದ ಪೈರಸಿ ಮಾಡಿದ್ದ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಬಂಧಿನ ರಾಕೇಶ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಫ್ಯಾನ್ ಅನ್ನೋದು ಗೊತ್ತಾಗಿದೆ. ನೆಲಮಂಗಲದ ನಿವಾಸಿಯಾದ ರಾಕೇಶ್ ವಿರಾಟ್, ತನ್ ಫೇಸ್ಬುಕ್ನಲ್ಲಿ ದರ್ಶನ್ ಫ್ಯಾನ್, ಡಿಬಾಸ್ ಫ್ಯಾನ್ ಎಂದು ಬರೆದುಕೊಂಡಿದ್ದು, ಸುದೀಪ್ ಪೈಲ್ವಾನ್ ಸಿನಿಮಾ ಕೂಡ ಅಪ್ಲೋಡ್ ಮಾಡಿದ್ದ.
ಸುದೀಪ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ಪೈಲ್ವಾನ್ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣ್ತಿದೆ. ಆದ್ರೆ, ಬಿಡುಗಡೆಯಾದ ದಿನವೇ ಪೈಲ್ವಾನ್ಗೆ ಪೈರಸಿ ಕಾಟ ಶುರುವಾಗಿತ್ತು. ಈ ಸಂಬಂಧ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ವಾರ್ಗೂ ಕಾರಣವಾಗಿತ್ತು. ಇದೀಗ ಬೆಂಗಳೂರು ಸಿಸಿಬಿ ಪೊಲೀಸರು, ಪೈಲ್ವಾನ್ ಪೈರಸಿ ಮಾಡಿದ್ದ ಆರೋಪಿಗಳನ್ನ ಬಂಧಿಸಿದ್ದಾರೆ.
ಪೈಲ್ವಾನ್ ಪೈರಸಿ ಮಾಡಿದ್ದ ಆರೋಪಿಗಳನ್ನ ರಾಕೇಶ್ ಎಂದು ಗುರುತಿಸಲಾಗಿದೆ. ನೆಲಮಂಗಲದ ಇಮಚೇನಹಳ್ಳಿ ಗ್ರಾಮದಲ್ಲಿ ನಿನ್ನೆ ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಪೈಲ್ವಾನ್ ಪೈರಸಿ ಮಾಡಿ ನಕಲು ಮಾಡಿ, ಕಳ್ಳತನವಾಗಿ ಮಾರುಕಟ್ಟೆಗೆ ಬಿಟ್ಟಿದ್ರು. ಈ ಕುರಿತಾಗಿ ಪೈಲ್ವಾನ್ ನಿರ್ಮಾಪಕರು ಪೊಲೀಸರಿಗೆ ದೂರು ನೀಡಿದ್ರು. ಇದೀಗ ಕೊನೆಗೂ ಪೈರಸಿ ಮಾಡಿದ್ದ ಆರೋಪಿಗಳು ಅರೆಸ್ಟ್ ಆಗಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?