ರೈಸಿಂಗ್ ಕನ್ನಡ :
ಮ್ಯಾಂಚೆಸ್ಟರ್:
ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಟೆಸ್ಟ್ ಆವೃತ್ತಿಯಲ್ಲಿ 500 ವಿಕೆಟ್ ಪಡೆದು ಹೊಸ ಇತಿಹಾಸ ಬರೆದಿದ್ದಾರೆ.ಈ ಮೂಲಕ ಈ ಸಾಧನೆ ಮಾಡಿದ ವಿಶ್ವದ 7ನೇ ಬೌಲರ್ ಮತ್ತು ಇಂಗ್ಲೆಂಡ್ನ 2ನೇ ಬೌಲರ್ ಎನಿಸಿದ್ದಾರೆ.
ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ 3ನೇ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ನಲ್ಲಿ ಕ್ರೆಗ್ ಬ್ರಾಥ್ವೇಟ್ ಅವರ ವಿಕೆಟ್ ಪಡೆಯುವ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಹೊಸ ಮೈಲುಗಲ್ಲು ಮುಟ್ಟಿದರು.
ಸ್ಟುವರ್ಟ್ ಬ್ರಾಡ್ 140 ಟೆಸ್ಟ್ ಪಂದ್ಯಗಳಿಂದ 501 ವಿಕೆಟ್ ಪಡೆದಿದ್ದಾರೆ. 500 ವಿಕೆಟ್ ಪಡೆಯುವ ಮೂಲಕ ವಿಶ್ವದ 7ನೇ ಬೌಲರ್ ಮತ್ತು ನಾಲ್ಕನೆ ವೇಗಿ ಎಂಬ ಗೌರವ ಪಡೆದಿದ್ದಾರೆ.
ಸ್ಟುವರ್ಟ್ ಬ್ರಾಡ್ ಅವರ ಸಾಧನೆ ಕುರಿತು ವೆಸ್ಟ್ ಇಂಡೀಸ್ ದಂತ ಕತೆ ಕರ್ಟ್ನಿ ವಾಲ್ಶ್ , 500 ವಿಕೆಟ್ ಪಡೆದ ಸ್ಟುವರ್ಟ್ ಬ್ರಾಡ್ಗೆ ಅಭಿನಂದನೆಗಳು ನಿಮ್ಮ ಪರಿಶ್ರಮ ಕೆಲಸ ಮಾಡಿದೆ. ನನಗೆ ಈಗಲೂ ನೆನಪಿದೆ ನೀನು ಮತ್ತು ನನ್ನ ಮಗ ಚಿಕ್ಕ ಮಕ್ಕಳಾಗಿದ್ದಾಗ ಬ್ರಿಸ್ಟಲ್ನಲ್ಲಿ ನೀನು ನನ್ನ ಮಗನಿಗೆ ಬೌಲಿಂಗ್ ಹಾಕುತ್ತಿದ್ದೆ. ವೆಲ್ ಡನ್, ಆಕಾಶಕ್ಕೆ ಮಿತಿ ಇಲ್ಲ ಮುಂದಿನ ಹೆಜ್ಜೆ 600 ಎಂದು ಬರೆದಿದ್ದಾರೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?