Featured
“ಗಣಪತಿ ನಿನ್ನ ಮಹಿಮೆ ಅಪಾರ”..
![](https://risingkannada.com/wp-content/uploads/2020/08/ganapa.jpg)
“ವಕ್ರತುಂಡ ಮಹಾಕಾಯ ಕೊಟಿಸೂರ್ಯ ಸಮಪ್ರಭ | ನಿರ್ವಿಘ್ನಂ ಕುರುಮೇ ದೇವ ಸರ್ವಕಾರ್ಯೇಶು ಸರ್ವದಾ||
ಬರಹ: ಡಾ. ಬಸವರಾಜ ಗುರೂಜಿ. ವೈಧಿಕ ಜ್ಯೋತಿಷ್ಯರು ಮತ್ತು ವಾಸ್ತು ತಜ್ಞರು
ಬಂಧುಗಳೇ ಸರ್ವರಿಗೂ ತುಂಬಾ ಇಷ್ಟವಾದಂಥ ಮತ್ತು ಎಲ್ಲರೂ ಆಚರಿಸುವಂತ ಹಬ್ಬ ” ಗಣಪತಿ” ಹಬ್ಬ..ಒಂದು ವಿಶೇಷ ವಿಚಾರವನ್ನು ಹಿರಿಯರಿಂದ ತಿಳಿದು ನಿಮಗೂ ತಿಳಿಸೋ ಒಂದು ಪ್ರಯತ್ನ .
ಗಣಪತಿಯನ್ನು ನಾವು ಗಮನಿಸಿದಾಗ “ವಿಶೇಷವಾದ’ ಆಕಾರವಿರುವ ದೇವರೆಂದು ಕಂಡುಬರುತ್ತದೆ..ಏಕೆಂದರೆ ಬೇರೆ ದೇವರುಗಳ ಹಾಗೇ ಈತನಿಲ್ಲ. ಆನೆಯ ಮುಖ, ಸಣ್ಣ ಕಣ್ಣು, ದೊಡ್ಡಕಿವಿ, ಬಾಯಿ, ನಾಲ್ಕು ಕೈಗಳು, ಹೊಟ್ಟಗೆ ಸುತ್ತಿದ ” ಸರ್ಪ” , ವಾಹನವಾದ ಇಲಿ..ಇವೆಲ್ಲದಕ್ಕೂ ಆದ್ಯಾತ್ಮಿಕ ಅರ್ಥವಿದೆ..ಅವುಗಳನ್ನು ಒಬ್ಬೊಬ್ಬರು ಒಂದೊಂದು ರೀತಿ ವರ್ಣಿಸಿದ್ದಾರೆ..ಅದರ ಕೆಲವು ವಿಚಾರವನ್ನು ತಿಳಿಯೋಣ..
“ಸಣ್ಣಕಣ್ಣು” : ಗಣೇಶನ ಕಣ್ಣುಗಳು ಸಣ್ಣದಾಗಿವೆ..ಇದರ ಅರ್ಥ ನಾವು ಯಾವಾಗಲೂ ಪ್ರತಿಯೊಂದನ್ನೂ “ಸೂಕ್ಷ್ಮದೃಷ್ಟಿಯಿಂದ” ನೋಡಬೇಕು, ಎಂದು ಅರ್ಥ..
“ಮೊರದಂಥ ದೊಡ್ಡ ಕಿವಿಗಳು : ಮೊರದಲ್ಲಿ ನಾವು ಧಾನ್ಯವನ್ನು ಶುದ್ಧಗೊಳಿಸಿದಾಗ ಬೇಕಾಗಿರೋದನ್ನು ತೆಗೆದುಕೊಂಡು ಬೇಡವಾಗಿರೋದನ್ನು ತೆಗೆದುಹಾಕುತ್ತೇವೆ, ಹಾಗೆಯೇ ಒಳ್ಳೆಯ ವಿಚಾರವನ್ನು ಯಾವಾಗಲೂ ಕೇಳಿ, ಕೆಟ್ಟದರಿಂದ ದೂರವಿರಬೇಕು ಎಂಬುದರ ಅರ್ಥ..
” ಕೈಗಳು” : ಗಣಪತಿಯ ಕೈಯಲ್ಲಿ ಪಾಶ, ಅಂಕುಶ , ದಂತ ಮತ್ತು ಮೋದಕಗಳಿವೆ..”ಪಾಶ” ಧರ್ಮದ ಸಂಕೇತ, ನಮ್ಮ ಬದುಕು ಧರ್ಮವೆಂಬ ಪಾಶದಲ್ಲಿ ರೂಪುಗೊಳ್ಳಲಿ ಎಂಬುದು ಇದರ ಅರ್ಥ..ದಂತ ಇದು ಅನರ್ಥದ ಸಂಕೇತ , ದುಡ್ಡಿನ ಮದ ಅನರ್ಥಕ್ಕೆ ದಾರಿಯಾಗುತ್ತದೆ., ನಿನ್ನ ಮದದ ನಿಯಂತ್ರಣಕ್ಕೆ ನಿನ್ನ ಹಲ್ಲನ್ನು ಮುರಿದು ಹಿಡಿದು ಕೋ ಎಂದರ್ಥ, ಅಂದರೆ ಅಪಾಯವಾಗಬಹುದೆಂದರ್ಥ..
“ಅಂಕುಶ” : ಇದು ಕಾಮದ ಸಂಕೇತ, ಅಂದರೆ ನಿನ್ನ ಆಸೆಗೆ ಮಿತಿಯಿರಲಿ, ಅದು ನಿನ್ನ ನಿಯಂತ್ರಣದಲ್ಲಿರಲಿ ಇರಲಿ ಎಂದರ್ಥ..
“ಮೋದಕ” : ಅಭಯದ ಸಂಕೇತ, ಎಲ್ಲಾ ಭಯವನ್ನು ಮೀರಿ ನಿಂತ ಆನಂದದ ಸ್ಥಿತಿ..ದಾರಿದ್ರ್ಯ ನಿವಾರಿಸುವ ಸಂಕೇತ, ಎಂಥಾ ಕಷ್ಟದಲ್ಲೂ ಕಾಪಾಡುತ್ತೇನೆ ಎಂದು..
“ಸರ್ಪ”: ಇದು ಕಾಲದ ಸಂಕೇತ , ಕಾಲವನ್ನು ನಿಯಂತ್ರಿಸುವ ಶಕ್ತಿ ಗಣಪತಿಗೆ ಇದೆ..ಎಂತಹ ತೊಂದರೆಯಿಂದ ಬೇಕಾದರೂ ಗಣಪತಿಯು ನಮ್ಮನ್ನು ಕಾಪಾಡುತ್ತಾನೆ, ಎಂದು ಇದರ ಗೂಡಾರ್ಥ..
” ಆನೆಯ ಮುಖ” : ಆನೆಯು ಕಾಡಿನಲ್ಲಿ ಹೋಗುವಾಗ ಮರಗಿಡಗಳನ್ನೆಲ್ಲಾ ಮುರಿಯುತ್ತಾ ಸಾಗುತ್ತದೆ..ಹಾಗೆ ನಾವು ಕೂಡ ಜೀವನವೆಂಬ ಕಾಡಿನಲ್ಲಿ ಬರುವ ಸರ್ವ ಕಷ್ಟಗಳನ್ನು ಮುರಿದು ಅಂದರೆ ಎದುರಿಸಿ ಮುನ್ನುಗ್ಗಬೇಕು ಎಂಬುದು ಇದರ ಒಳ ಅರ್ಥ..
“ಮೂಷಿಕ ವಾಹನ” : ಗಣೇಶನ ವಾಹನ ಮೂಷಿಕ(ಇಲಿ).ಇದು ಮುಷ್ ಎಂಬ ಧಾತುವಿನಿಂದ ಬಂದಿದೆ..ಅಂದರೆ ಕದಿಯುವುದು ಎಂದರ್ಥ…ಇಲಿಯು ಕಳ್ಳತನದಿಂದ ವಸ್ತುಗಳ ಒಳಗೆ ಪ್ರವೇಶಿಸಿ, ಅವುಗಳನ್ನು ಒಳಗಿನಿಂದಲೇ ನಾಶ ಮಾಡುತ್ತದೆ..ಹಾಗೆಯೇ ಅಹಂಕಾರವು ನಮಗೆ ಗೊತ್ತಿಲ್ಲದೇ ನಮ್ಮನ್ನು ಪ್ರವೇಶಿಸಿ ನಮ್ಮನ್ನೇ ನಾಶ ಮಾಡುತ್ತದೆ, ಜೋಪಾನವಾಗಿರಬೇಕು ಎಂಬ ಅರ್ಥ..
ಹೀಗೆ ನಾವು ಗಣಪತಿಯನ್ನು ಸೂಕ್ಷ್ಮವಾಗಿ ಕಂಡಾಗ ಹಲವಾರು ವಿಚಾರಗಳು ಗೋಚರಿಸುತ್ತವೆ..ಗಣಪತಿಗೆ ಆಡಂಬರದ ಪೂಜೆ ಬೇಕಿಲ್ಲ..ಕೇವಲ ಗರಿಕೆಯಿಂದ ಪೂಜಿಸಿದರೆ ಸಾಕು, ಸಕಲ ಸಂಕಷ್ಟಗಳನ್ನೂ ದೂರ ಮಾಡುತ್ತಾರೆ.
ಶುಭವಾಗಲಿ..
ಜೈ ಕಾಣಿಪಾಕಂ ವಿನಾಯಕ
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?