Featured
ಕೊರೊನಾ ಕಂಟ್ರೋಲ್ಗೆ ಫೈನಲ್ ಪ್ಲಾನ್- ಲಾಕ್ಡೌನ್ ಜೊತೆಗೆ ಟೆಸ್ಟಿಂಗ್ ಕೂಡ ಹೆಚ್ಚಳ- ಪಶ್ಚಿಮ ವಲಯದಲ್ಲಿ ಪ್ರತಿದಿನ 1000 ಟೆಸ್ಟ್
ರೈಸಿಂಗ್ ಕನ್ನಡ:
ಬೆಂಗಳೂರು:
ಬೆಂಗಳೂರಿನಲ್ಲಿ ಹಬ್ಬುತ್ತಿರುವ ಕೊರೊನಾವನ್ನು ಕಂಟ್ರೋಲ್ ಮಾಡಲು ಸರ್ಕಾರ ಒಂದು ವಾರದ ಲಾಕ್ಡೌನ್ ಹೇರಿದೆ. ಈ ನಡುವೆ ಬಿಬಿಎಂಪಿ ಪಶ್ಚಿಮ ವಲಯದಲ್ಲಿ ಕೋವಿಡ್ ಶಂಕಿತರ ಮಾದರಿ ಪರೀಕ್ಷೆ ಸದ್ಯ ದಿನಕ್ಕೆ 250 ಆಗುತ್ತಿದ್ದು ಅದನ್ನು 1,000 ಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಇರೋಫಿನ್ಸ್ ಕ್ಲಿನಿಕಲ್ ಜೆನಟಿಕ್ಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಸುಧಾಂಷು ಶ್ರೀವಾಸ್ತವ ಜೊತೆ ಮಾತುಕತೆ ನಡೆಸಿದ ಅಶ್ವಥ್ನಾರಾಯಣ್ ಕೋವಿಡ್ ಪರೀಕ್ಷೆಯನ್ನು ಪ್ರತಿದಿನ 250ರಿಂದ 1000ಕ್ಕೆ ಏರಿಸಲು ತೀರ್ಮಾನಿಸಿದ್ದಾರೆ. ಶುಕ್ರವಾರದಿಂದಲೇ ಬಿಬಿಎಂಪಿ ಪಶ್ಚಿಮವಲಯದಲ್ಲಿ ಪ್ರತಿದಿನ 1000 ಕೋವಿಡ್ ಮಾದರಿ ಟೆಸ್ಟ್ ನಡೆಯಲಿದೆ.
ಬಿಬಿಎಂಪಿ ಪಶ್ಚಿಮ ವಲಯದಲ್ಲಿ 6 ವಿಧಾನಸಭಾ ಕ್ಷೇತ್ರಗಳಿವೆ. ಎಲ್ಲಾ ವಿಧಾನಸಭಾ ಕ್ಷೇತ್ರದಿಂದ ತಲಾ 150 ಗಂಟಲು ದ್ರವ ಮಾದರಿಗಳನ್ನು ಪರೀಕ್ಷೆ ಮಾಡಲಾಗುತ್ತದೆ. ಇದು ಕೋವಿಡ್ ಚಿಕಿತ್ಸೆಗೆ ನೆರವಾಗಲಿದೆ ಎಂದು ಅಶ್ವಥ್ ನಾರಾಯಣ್ ತಿಳಿಸಿದರು.
You may like
ಬಿಬಿಎಂಪಿ 8 ವಲಯಗಳಲ್ಲಿ ತೆರಿಗೆ ಬಾಕಿ: ಕೋಟಿ ಕುಳಗಳೇ ಕಟ್ಟಿಲ್ಲ ತೆರಿಗೆ
ಪಾಕಿಸ್ತಾನ ಜಿಂದಾಬಾದ್ ಘೋಷಣೆಗೆ ಹುಬ್ಬಳ್ಳಿ ಎಬಿವಿಪಿ ಆಕ್ರೋಶ
ಕರ್ನಾಟಕದಲ್ಲಿ ಕೆಆರ್ ಕೆ ಸಂಸ್ಥೆಯಿಂದ ಪ್ರಭಾಸ್ ಆದಿಪುರುಷ್ ಬಿಡುಗಡೆ
ಸಿಎಂ ಬಸವರಾಜ್ ಬೊಮ್ಮಾಯಿಗೆ ಕೊರೋನಾ ಪಾಸಿಟಿವ್
ಕೋವಿಡ್-19 ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದ ಸಿ.ಎಂ. ಯಡಿಯೂರಪ್ಪ
ಬ್ರಿಟನ್ ಕೊರೋನಾಗೆ ಕರ್ನಾಟಕವೇ ಹಾಟ್ ಸ್ಪಾಟ್ ಆಗುತ್ತಾ.? : ರೂಪಾಂತರಿ ಅಟ್ಟಹಾಸ..!