Featured
ಡಿಬಾಸ್ ವರ್ಸಸ್ ಕಿಚ್ಚ..! ಸ್ಯಾಂಡಲ್ವುಡ್ನಲ್ಲಿ ಇದೆಂಥಾ ಸ್ಟಾರ್ ವಾರ್..? ಬೇಕಾ ಇದೆಲ್ಲಾ..?
![](https://risingkannada.com/wp-content/uploads/2019/09/IMG-20190917-WA0000.jpg)
ರೈಸಿಂಗ್ ಕನ್ನಡ ಸಿನಿಮಾ : ಇಬ್ಬರೂ ಸ್ಟಾರ್ಗಳು. ಕೋಟ್ಯಂತರ ಅಭಿಮಾನಿಗಳಿರೋ ಸ್ಟಾರ್ ನಟರು. ಒಂದು ಕಾಲದಲ್ಲಿ ಕುಚುಕು ಗೆಳೆಯರು. ಒಬ್ಬರನ್ನ ಒಬ್ಬರು ಬಿಟ್ಟು ಇರಲಾರದಷ್ಟು ಆತ್ಮೀಯರು. ಆದ್ರೀಗ, ದ್ವೇಷ, ಅಸೂಯೆ ಮಾತ್ರ ಕಾಣ್ತಿದೆ. ಇಲ್ಲಿ ಯಾರದ್ದು ತಪ್ಪು, ಯಾರು ಸರಿ ಅನ್ನೋ ಮಾತೇ ಇಲ್ಲ. ಇಬ್ಬರದ್ದು ತಪ್ಪು.. ಇಬ್ಬರೂ ಸರಿ. ಎಲ್ಲವೂ ಅಹಂ ಮಯಂ ಅಂದ್ರೆ ತಪ್ಪಲ್ಲ.
ಯೆಸ್, ನಾವ್ ಹೇಳ್ತಿರೋದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಎಂಬ ಸ್ನೇಹಿತರು ವೈರಿಗಳಾಗಿರೋ ಕಥೆ. ಕಳೆದ ಮೂರು ತಿಂಗಳಿಂದ ಈ ಇಬ್ಬರು ಸ್ಟಾರ್ಗಳ ಮಧ್ಯೆ, ವಾರ್ ನಡೆಯುತ್ತಲೇ ಇದೆ. ಬಹಿರಂಗ ಹೇಳಿಕೆಗಳಿಂದ ಹಿಡಿದು, ಸೋಶಿಯಲ್ ಮೀಡಿಯಾ ಸ್ಟೇಟಸ್ ಸೇರಿದಂತೆ ಆರೋಪ, ಪ್ರತ್ಯಾರೋಪಗಳು ಜೋರಾಗಿಯೇ ನಡೀತಿವೆ.
ಬಹುಶಃ ಕನ್ನಡ ಚಿತ್ರರಂಗದಲ್ಲಿ ಈ ಮಟ್ಟಿಗೆ ಸ್ಟಾರ್ ವಾರ ನಾವು ಕಂಡಿಲ್ಲ ಅನ್ಸುತ್ತೆ. ಶೀತಲ ಸಮರವನ್ನ ನಾವು ನೋಡಿದ್ದೇವೆ. ಆದ್ರೆ, ಬಹಿರಂಗವಾಗಿ ಈ ರೀತಿಯ ಸ್ಟಾರ್ ವಾರ್ ಈಗ ಕಾಣ್ತಿದ್ದೇವೆ. ಒಬ್ಬ ಸ್ಟಾರ್ ನಟನ ಸಿನಿಮಾ ಬಗ್ಗೆ ನೆಗೆಟಿವ್ ಕಾಮೆಂಟ್ ಹಾಕುವುದು. ಸಿನಿಮಾ ಚೆನ್ನಾಗಿದ್ರೂ, ಪ್ರೇಕ್ಷಕರೇ ಇಲ್ಲ. ಜನರೇ ಇಲ್ಲ. ಸಿನಿಮಾ ಕೆಟ್ಟದಾಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಮಿಂಬಿಸುವುದು ಪೈಲ್ವಾನ್ ಸಿನಿಮಾದಿಂದ ಶುರುವಾದಂತೆ ಕಾಣ್ತಿದೆ.
HeartFelt Thanks to allllll my loving frnzz for ur unconditional support n luv. U all make me feel rich. Thanks to each n every one who choose theaters to pirated copies. Ur luv n support Wil be remembered forever. Thanks to my media frnzz for ur kind words n support🥰 #Pailwaan pic.twitter.com/4VWwZ617ZJ— Kichcha Sudeepa (@KicchaSudeep) September 15, 2019
ಪೈಲ್ವಾನ್ ಸಿನಿಮಾ ಬಗ್ಗೆ ನೆಗೆಟಿವ್ ಪ್ರಚಾರ, ನೆಗೆಟಿವ್ ಕಾಮೆಂಟ್ಗಳನ್ನ ದರ್ಶನ್ ಅಭಿಮಾನಿಗಳು ಮಾಡಿದ್ರು ಅನ್ನೋದು ಸುದೀಪ್ ಅಭಿಮಾನಿಗಳ ವಾದ. ಆದ್ರೆ, ಇದಕ್ಕೆ ದರ್ಶನ್ ಅಭಿಮಾನಿಗಳು ಕೊಡ್ತಿರೋ ಉತ್ತರ, ನಮಗೆ ಅದರ ಅನಿವಾರ್ಯ ಇಲ್ಲ. ನಾವು ಅಂತಹ ನೀಚ ಕೆಲಸ ಮಾಡಲ್ಲ ಎಂದು. ಇದಕ್ಕೆ ಮತ್ತಷ್ಟು ಮುಂದೆ ಹೋಗಿರೋ ಸ್ವತಃ ದರ್ಶನ್ ಕೂಡ ಟ್ವೀಟ್ ಮಾಡಿ ಅಭಿಮಾನಿಗಳ ಬೆಂಬಲಕ್ಕೆ ನಿಂತಿದ್ದಾರೆ. ನನ್ನ ಅಭಿಮಾನಿಗಳು, ದೇವರುಗಳು, ಸೆಲಬ್ರೆಟಿಗಳಿಗೆ ಯಾರು ಅಪಮಾನ ಮಾಡುವಂತಿಲ್ಲ ಎಂದು ಪರೋಕ್ಷವಾಗಿ ಸುದೀಪ್ ಹಾಗೂ ಸುದೀಪ್ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಸದ್ಯಕ್ಕೆ ನಾನು ಬೆಂಗಳೂರಿನಲ್ಲಿ ಇಲ್ಲ, ಶೂಟಿಂಗ್ ಅಲ್ಲಿ ಬ್ಯುಸಿಯಾಗಿದ್ದೇನೆ. ಸದ್ಯಕ್ಕೆ ಕೇಳಿ ಬರುತ್ತಿರುವ ಕೆಲವು ವ್ಯಕ್ತಿಗಳ ಬಗ್ಗೆ ಒಂದು ಕಿವಿಮಾತು – ನನ್ನ ಅನ್ನದಾತರು, ಸೆಲೆಬ್ರಿಟಿಗಳನ್ನು ಕೆಣಕಲು/ಪ್ರಚೋದಿಸಲು ಬರದಿರಿ 😊— Darshan Thoogudeepa (@dasadarshan) September 17, 2019
ಇದಕ್ಕೂ ಮುನ್ನ ಇತ್ತೀಚೆಗಷ್ಟೇ ಸುದೀಪ್ ಕೂಡ ಟ್ವೀಟ್ ಮಾಡಿದ್ರು. ಯಾರು ಎಷ್ಟೇ ನೆಗೆಟಿವ್ ಪ್ರಮೋಷನ್ ಮಾಡಿದ್ರೂ, ಒಳ್ಳೇ ಸಿನಿಮಾ ಗೆದ್ದೇ ಗೆಲ್ಲುತ್ತೆ. ಅಭಿಮಾನಿಗಳು, ಕನ್ನಡ ಜನತೆಗೆ ಧನ್ಯವಾದಗಳೂ ಎಂದು ಟ್ವೀಟ್ ಮಾಡಿದ್ರು.
Be happy about all those who spread bad… Coz what I see is they r still taking time out n putting efforts to spk about #Pailwaan… On the other hand,,
Ques) – why n when would anyone wanna spread bad,??
Ans) – only when we r doing great.
Right!! 😊
So njoy this moment🙏🏼🤗 https://t.co/ZBqxceaCad— Kichcha Sudeepa (@KicchaSudeep) September 14, 2019
ಇಷ್ಟೆಲ್ಲಾ ಆದ್ರೂ, ಸುದೀಪ್ ಮತ್ತು ದರ್ಶನ್ ಫ್ಯಾನ್ಸ್ ನಡುವೆ ವಾರ್ ಮಾತ್ರ ನಿಂತಿಲ್ಲ. ಅವರ ವಿರುದ್ಧ ಇವರು, ಇವರ ವಿರುದ್ಧ ಅವರು ಕಿತ್ತಾಡುತ್ತಲೇ ಇದ್ದು, ಸೋಶಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ಟ್ವೀಟ್, ಪೋಸ್ಟ್ ಹಾಕುತ್ತಲೇ ಇದ್ದಾರೆ. ಇದು ಕನ್ನಡ ಸಿನಿಮಾ ಮಟ್ಟಿಗೆ ಕೆಟ್ಟ ಬೆಳವಣಿಗೆ ಅಂದ್ರೆ ತಪ್ಪಲ್ಲ.
Well sir….. @sharanuhullur1…
Winning against odds is what a Battle is all about. 🤗.. https://t.co/VdzfMkMBnV— Kichcha Sudeepa (@KicchaSudeep) September 15, 2019
ಇದೇ ರೀತಿಯ ಬೆಳವಣಿಗೆ ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಇತ್ತು. ಆದ್ರೀಗ ಅಲ್ಲೂ ಕೂಡ ಕಡಿಮೆ ಆಗಿದೆ. ಆದ್ರೆ, ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ವಾರ್ ಹೀಗೆ ಬಹಿರಂಗವಾಗಿ ನಡೀತಿರೋದು ಚಿತ್ರರಂಗ ಹಾಗೂ ಅಭಿಮಾನಿಗಳು ಹಾಗೂ ಸಿನಿಮಾ ಪ್ರೇಕ್ಷಕರಿಗೆ ಒಳ್ಳೇದಂತೂ ಅಲ್ಲವೇ ಅಲ್ಲ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆ
ಅಶ್ವಿನಿ ಪುನೀತ್ ಕುರಿತ ಪೋಸ್ಟ್ ನೋಡಿ ಬೇಸರಗೊಂಡ ದರ್ಶನ್
Kaatera Aradhana | ಕಾಟೇರಾ ಬೆಡಗಿ ಆರಾಧನಾ ರಾಮ್ ಹಾಟ್ ಫೋಟೋಶೂಟ್