Connect with us

Featured

ಮಗು ಹುಟ್ಟುವ ಮುನ್ನ ಗರ್ಭಾವಸ್ಥೆಯಲ್ಲಿ ಯಾವ ಮನಃಸ್ಥಿತಿಯಲ್ಲಿ ಇರುತ್ತದೆ..?

ಲೇಖಕರು: ಗಜೇಂದ್ರ ಜೋಷಿ, ಜಾತಕ ವಿಮರ್ಷಕರು ಮತ್ತು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಆರಾಧಕರು:

ಮಗು ಹುಟ್ಟುವ ಮುನ್ನ ಗರ್ಭಾವಸ್ಥೆಯಲ್ಲಿ ಯಾವ ಮನಃಸ್ಥಿತಿಯಲ್ಲಿ ಇರುತ್ತದೆ: ಭಾಗವತದ ಈ ನಿಗೂಢ ರಹಸ್ಯ ಕದರ್ಮ ಮಹರ್ಷಿಗಳ ಮಗನಾದ, ಸಾಕ್ಷಾತ್ ವಿಷ್ಣು ಸಂಭೂತನಾದ ಕಪಿಲ ಮಹರ್ಷಿಯು ತನ್ನ ತಾಯಿಯಾದ ದೇವಹೂತಿಗೆ ಗರ್ಭದ ಬೆಳವಣಿಗೆಯ ಬಗ್ಗೆ ತಿಳಿಸಿದರು.

Advertisement

ಆಹಾರದ ಮೂಲಕ ಪುರುಷನ ದೇಹದಲ್ಲಿ ವೀರ್ಯವು ಉತ್ಪತ್ತಿಯಾಗುತ್ತದೆ. ಸ್ತ್ರೀ-ಪುರುಷರ ಸಮಾಗಮದ ಬಳಿಕ ವೀರ್ಯವು ಸ್ತ್ರೀಯ ಗರ್ಭವನ್ನು ಸೇರಿಕೊಳ್ಳುತ್ತದೆ. ಜೀವಿಯು ಪಾಪ ಪುಣ್ಯಗಳನ್ನು ಸ್ವರ್ಗ ಮತ್ತು ನರಕದಲ್ಲಿ ಅನುಭವಿಸಿದರೂ ದೇಹ ಸಂಬಂಧವನ್ನುಂಟುಮಾಡುವ ಕರ್ಮಗಳು ಸದಾ ಉಳಿದಿರುತ್ತದೆ. ಅದು ಸ್ತ್ರೀ ಯೋನಿಯನ್ನು ಪ್ರವೇಶಿಸಿ ಸ್ತ್ರೀಯ ರಜಸ್ಸಿನಲ್ಲಿ(ಅಂಡಾಶಯ) ಕಲೆತು ಕಲಲ ರೂಪವನ್ನು ತಾಳುತ್ತದೆ. ಇದು ರಾತ್ರಿಗಳಲ್ಲಿ ಪಕ್ವವಾಗಿ ಗುಳ್ಳೆಯ ಆಕಾರವನ್ನು ಹೊಂದುತ್ತದೆ. ಇದನ್ನು ಬುದ್ಭುದ ರೂಪವೆನ್ನುತ್ತಾರೆ.

ಹತ್ತು ದಿನಗಳ ಬಳಿಕ ಬೋರೆಯ ಹಣ್ಣಿನ ರೂಪವನ್ನು ಪಡೆದು ಕೆಲವು ದಿನಗಳಲ್ಲಿ ಮಾಂಸಖಂಡವಾಗಿ ಏರ್ಪಟ್ಟು ಮೊಟ್ಟೆಯ ಆಕಾರವನ್ನು ಪಡೆಯುತ್ತದೆ.  ಒಂದು ತಿಂಗಳ ಒಳಗೆ ಆ ಮಾಂಸಪಿಂಡದಲ್ಲಿಯೇ ತಲೆಯ ರಚನೆಯಾಗುತ್ತದೆ.ಎರಡು ತಿಂಗಳಲ್ಲಿ ಕೈ-ಕಾಲು ಮುಂತಾದ ಅಂಗಗಳ ಉತ್ಪತ್ತಿಯಾಗುತ್ತದೆ. ಮೂರನೇ ತಿಂಗಳಲ್ಲಿ ಉಗುರು, ಮೈಕೂದಲು, ಎಲುಬು, ಚರ್ಮ, ಸ್ತ್ರೀ-ಪುರುಷರನ್ನು ಸೂಚಿಸುವ ಲಿಂಗಗಳು ಮತ್ತು ನವದ್ವಾರಗಳು ರಚನೆಯಾಗುತ್ತದೆ.

Advertisement

ನಾಲ್ಕನೆಯ ತಿಂಗಳಲ್ಲಿ ಮಾಂಸ ಮತ್ತು ಸಪ್ತಧಾತುಗಳು ಹುಟ್ಟಿಕೊಳ್ಳುತ್ತದೆ. ಐದನೆಯ ತಿಂಗಳಲ್ಲಿ ಹಸಿವು, ಬಾಯಾರಿಕೆ ಉಂಟಾಗುತ್ತದೆ. ಆರನೆಯ ತಿಂಗಳಲ್ಲಿ ಗರ್ಭದ ಚೀಲದೊಳಗಡೆ ಬಿಗಿಯಾಗಿ ಬಿಗಿಯಾಗಿ ಆವರಿಸಲ್ಪಟ್ಟು, ಶಿಶುವು ಕೋಶದ ಬಲಭಾಗಕ್ಕೆ ತಿರುಗುತ್ತದೆ. ಆಗ ಗರ್ಭವತಿಯು ಉಣ್ಣುವ, ಕುಡಿಯುವ ಆಹಾರ ಪಾನೀಯಗಳಿಂದ ಎಲ್ಲಾ ಧಾತುಗಳ ಪೋಷಣೆಗೊಳ್ಳುತ್ತದೆ. ಹಾಗೆಯೇ ಕ್ರಿಮಿಕೀಟಗಳು ಸೃಷ್ಟಿಸಲ್ಪಡುವ ಮಲಮೂತ್ರ ಸ್ಥಾನದಲ್ಲಿರುತ್ತದೆ.

ಆ ಸಮಯದಲ್ಲಿ ಗರ್ಭವಾಸವಾಗಿರುವ ಶಿಶುವನ್ನು ಅನೇಕ ಕ್ರಿಮಿಕೀಟಗಳು ಕಚ್ಚುತ್ತದೆ. ಸುಮದಂತೆ ಕೋಮಲವಾಗಿರುವ ಚರ್ಮವನ್ನು ಕಚ್ಚುವಾಗ ಮಗುವಿಗೆ ನೋವಾಗುತ್ತದೆ. ಆ ಘಳಿಗೆಯಲ್ಲಿ ಮಗುವು ನೋವನ್ನು ತಾಳಲಾರದೆ ಮೂರ್ಛೆ ಹೋಗುತ್ತದೆ. ಕೆಲವೊಮ್ಮೆ ಚೇತರಿಸಿಕೊಳ್ಳುತ್ತದೆ. ಅಮ್ಮನ ರುಚಿಗನುಸಾರವಾಗಗಿ ಸೇವಿಸಲ್ಪಡುವ ಕಹಿ, ಖಾರ, ಹುಳಿ, ಉಪ್ಪು ಮೊದಲಾದ ಪದಾರ್ಥಗಳಿಂದ ಅದು ನರಳಬೇಕಾಗುತ್ತದೆ. ಈ ಹಿಂಸೆಯು ಅಸಹನೀಯವಾಗಿದ್ದರೂ ಗರ್ಭಸ್ಥ ಮಗುವಿನ ರೋದನವನ್ನು ಕೇಳುವವರು ಯಾರು? ಆಗ ಶಿಶುವಿಗೆ ಜನ್ಮಾಂತರದಲ್ಲಿ ಮಾಡಿದ ದುಷ್ಕರ್ಮಗಳ ಅರಿವು ಉಂಟಾಗಿ ಪಶ್ಚಾತಾಪದಿಂದ ನಿಟ್ಟುಸಿರು ಬಿಡುತ್ತದೆ. ಹಾಗಾಗಿ ಆ ವೇಳೆಯಲ್ಲಿ ನೆಮ್ಮದಿ ಇರುವುದಿಲ್ಲ.

Advertisement

ಏಳನೆಯ ತಿಂಗಳಲ್ಲಿ ಜ್ಞಾನಶಕ್ತಿಯು ಉಂಟಾಗುತ್ತದೆ. ತಾನು ಹಿಂದಿನ ಜನ್ಮಗಳಲ್ಲಿ ಮಾಡಿದ ಪಾಪಕ್ಕಾಗಿ ಕ್ಷಮಿಸಲು ಭಗವಂತನನ್ನು ಪ್ರಾರ್ಥಿಸುತ್ತದೆ. ದೇಹಧಾರಿಯಾದ ಜೀವವು ಶಿಶುವಿನ ರೂಪದಲ್ಲಿ , ಎಂಟು ಮತ್ತು ಒಂಬತ್ತನೆಯ ತಿಂಗಳಲ್ಲಿ ಗರ್ಭಕೋಶದೊಳಗಿದ್ದು, ಮಲಮೂತ್ರದ ನಡುವೆ ಬಿದ್ದುಕೊಂಡು ಸಮಯವನ್ನು ಕಳೆಯುತ್ತದೆ. ಅತ್ತಿಂದಿತ್ತ, ಇತ್ತಿಂದತ್ತ ಹೊಟ್ಟೆಯೊಳಗಡೆ ಚಲಿಸುತ್ತಾ ತಾಯಿಯ ಉದರದಿಂದ ಹೊರಬರಲು ಸಮಯವನ್ನು ಕಾಯುತ್ತಿರುತ್ತದೆ.

ಮಗುವು ಹುಟ್ಟುವ ಮುನ್ನ ಗರ್ಭಾವಸ್ಥೆಯಲ್ಲಿ ಯಾವ ಮನಃಸ್ಥಿತಿಯಲ್ಲಿ ಇರುತ್ತದೆ ಎನ್ನುವುದು ಇಂದಿನ ವಿಜ್ಞಾನಿಗಳಿಗೂ ವಿವರಿಸಲು ಸಾಧ್ಯವಿಲ್ಲ. ಗರ್ಭದ ಬೆಳವಣಿಗೆಯ ಬಗ್ಗೆ ವಿಜ್ಞಾನಿಗಳು ವಿವರಿಸಬಹುದೇ ಹೊರತು, ಗರ್ಭದಲ್ಲಿರುವ ಮಗುವಿನ ಮನಃಸ್ಥಿತಿ ಹೇಗಿರುತ್ತದೆ ಎನ್ನುವುದನ್ನು ಸಹಸ್ರಾರು ವರ್ಷಗಳ ಹಿಂದೆ ವೇದವ್ಯಾಸರು ಸಂಕಲಿಸಿದ ಭಾಗವತದಲ್ಲಿ ವಿವರಿಸಲಾಗಿದೆ. ಈ ವಿಚಾರ ಇಂದಿಗೂ ವಿಜ್ಞಾನಿಗಳ ಪಾಲಿಗೆ ಸವಾಲಾಗಿ ಪರಿಣಮಿಸಿದೆ.

Advertisement

ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ