Featured
ಕೊರೊನಾ ವಾರಿಯರ್ಸ್ಗೆ ಶ್ರೀರಾಮುಲು ಸಲಾಂ – ಆಶಾ ಕಾರ್ಯಕರ್ತೆಯರಿಗೆ ಆರೋಗ್ಯ ಸಚಿವರಿಂದ ಮೆಚ್ಚುಗೆ
![](https://risingkannada.com/wp-content/uploads/2020/07/SRI-ramaulu1.jpg)
ಮಂಗಳೂರು:
ಕೊರೊನಾ ಮಹಾಸಂಕಷ್ಟದ ಕಾಲದಲ್ಲಿ ಆಶಾ ಕಾರ್ಯಕರ್ತೆಯರು ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಪ್ರತಿನಿತ್ಯ ಕಾಲ್ನಡಿಗೆಯಲ್ಲೇ ಹಲವು ಮನೆಗಳಿಗೆ ಬೇಟಿ ನೀಡಿ ಸರಕಾರಕ್ಕೆ ಜನರ ಆರೋಗ್ಯದ ಬಗ್ಗೆ ವರದಿ ನೀಡುತ್ತಿದ್ದಾರೆ. ಮಳೆ, ಬಿಸಿಲು, ಗಾಳಿ ಹೀಗೆ ಹವಾಮಾನದಲ್ಲಿ ಯಾವುದೇ ರೀತಿಯ ಬದಲಾವಣೆ ಆದರೂ ಆಶಾ ಕಾರ್ಯಕರ್ತೆಯರು ಸರಕಾರಕ್ಕೆ ಒಂಚೂರು ಮುಜುಗರವಾಗದಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೊರೊನದಂತಹ ಸಂಕಷ್ಟದ ಸಮಯದಲ್ಲಿ ಆಶಾ ಕಾರ್ಯಕರ್ತೆಯರು, ವೈದ್ಯಕೀಯ ಸಿಬ್ಬಂದಿ ಪ್ರತಿ ಹಳ್ಳಿಹಳ್ಳಿಗಳಿಗೆ ತೆರಳಿ ಅವಿರತವಾಗಿ ಕಾರ್ಯ ನಿರ್ವಹಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. 1/3 pic.twitter.com/YHRwt6TU6T— B Sriramulu (@sriramulubjp) July 7, 2020
ತಾಲೂಕು ಕೇಂದ್ರಗಳಿಂದ ಸಾಕಷ್ಟು ದೂರದಲ್ಲಿರುವ ಕುಗ್ರಾಮಗಳಿಗೆ ತೆರಳಿ ಪ್ರತಿನಿತ್ಯ ನೂರಾರು ಅಡೆತಡೆಗಳನ್ನು ಎದುರಿಸಿ ಕಾರ್ಯಕರ್ತೆಯರು, ವೈದ್ಯಕೀಯ ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದಾರೆ. ನಕ್ಸಲ್ ಪೀಡಿತ ಗ್ರಾಮವಾದ ಬೆಳ್ತಂಗಡಿ ತಾಲೂಕಿನ ಸುಲ್ಕೇರಿಯ ಕೊರಗ ಕಾಲೊನಿಗೆ ಆಶಾ ಕಾರ್ಯಕರ್ತೆಯರು ತೆರಳುವುದೇ ಮಹಾ ಸವಾಲು. ರಭಸದಿಂದ ಹರಿಯುವ ಹೊಳೆಯನ್ನು ,ಜೀವ ಕೈಯಲ್ಲಿ ಹಿಡಿದು ದಾಟಿ ಆಶಾ ಕಾರ್ಯಕರ್ತೆ ಯರು ಸೇವೆ ಸಲ್ಲಿಸುತ್ತಿದ್ದಾರೆ. ಕೊರಗ ಕಾಲೋನಿಯಲ್ಲಿ 40 ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದೆ...ಕೆಲ ಕುಟುಂಬಗಳಿಗೆ ಡೆಂಗ್ಯೂ ಸೇರಿದಂತೆ ಜ್ವರದ ಲಕ್ಷಣಗಳೂ ಕಾಣಿಸಿಕೊಂಡಿದೆ.ಮಳೆಯ ನಡುವೆ ರಭಸದಿಂದ ಹರಿಯುವ ಹೊಳೆಯನ್ನು ದಾಟಿ ಚಿಕಿತ್ಸೆ ಹೋಗೋದು ಅಸಾಧ್ಯವಾಗಿರೋದ್ರಿಂದ ಆಶಾ ಕಾರ್ಯಕರ್ತೆ ಯರು ಪ್ರತಿದಿನ ಆ ಭಾಗಗಕ್ಕೆ ತೆರಳಿ ಚಿಕಿತ್ಸೆ ನೀಡುತ್ತಿದ್ದಾರೆ..ಕಾರ್ಯಕರ್ತೆ ಯರ ನಿಸ್ವಾರ್ಥ ಸೇವೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
3/3
ರಭಸವಾಗಿ ಹರಿಯುವ ನದಿಯನ್ನು ಕಿರಿದಾದ ಕಾಲುಸೇತುವೆಯ ಮೂಲಕ ಜೀವ ಕೈಯಲ್ಲಿ ಹಿಡಿದುಕೊಂಡು ದಾಟಿ ಅವರಿಗೆ ಚಿಕಿತ್ಸೆ ನೀಡಿದ್ದಾರೆ. ಅಲ್ಲದೆ ರೋಗಗಳ ಕುರಿತು ಮುಂಜಾಗ್ರತೆ ವಹಿಸುವಂತೆ ಅರಿವು ಮೂಡಿಸಿ ಬಂದಿದ್ದಾರೆ.
ಅವರ ಕರ್ತವ್ಯ ನಿಷ್ಠೆ, ನಿಸ್ವಾರ್ಥ ಸೇವೆ ನಿಜಕ್ಕೂ ಮೆಚ್ಚುವಂಥದ್ದು.#SaluteCoronaWarriors— B Sriramulu (@sriramulubjp) July 7, 2020
ಆರೋಗ್ಯ ಸಚಿವ ಬಿ ಶ್ರೀರಾಮುಲು ಈ ಕಾರ್ಯಕರ್ತೆಯರ ಸೇವೆಯನ್ನು ಗಮನಿಸಿಸಿ ಅವರಿಗೆ ಟ್ವೀಟರ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
2/3
ನಕ್ಸಲ್ ಪೀಡಿತ ಪ್ರದೇಶವಾದ ಬೆಳ್ತಂಗಡಿ ತಾಲ್ಲೂಕಿನ ಕೊರಗ ಕಾಲೋನಿಯಲ್ಲಿ ವಾಸಿಸುವ ಸುಮಾರು 40 ಕ್ಕೂ ಹೆಚ್ಚಿನ ಕುಟುಂಬಗಳಲ್ಲಿ ಕೆಲವರಿಗೆ ಡೆಂಗ್ಯೂ ಸೇರಿದಂತೆ ಜ್ವರದ ಲಕ್ಷಣಗಳು ಕಾಣಿಸಿಕೊಂಡಿವೆ. ಆ ಭಾಗದಲ್ಲಿ ಸುರಿಯುತ್ತಿರುವ ಮಳೆಯ ನಡುವೆ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಿಬ್ಬಂದಿ,— B Sriramulu (@sriramulubjp) July 7, 2020
You may like
Modi Gift to Nation : ದೇಶದ ಎಲ್ಲಾ ಜನತೆಗೆ ಕೊರೋನಾ ಲಸಿಕೆ ಉಚಿತ : ಹರ್ಷವರ್ಧನ್ ಘೋಷಣೆ
ಯಾದಗಿರಿಯಲ್ಲಿ ಕೊರೊನಾ ವಾರಿಯರ್ ಸಾವು: ಆರೋಗ್ಯ ಸಚಿವ ಶ್ರೀರಾಮುಲು ಸಂತಾಪ
ದಾವಣಗೆರೆಯಲ್ಲಿ ಕೊರೊನಾ ಸೋಂಕಿಗೆ ಅಂಬ್ಯುಲೆನ್ಸ್ ಚಾಲಕ ಬಲಿ
ಕೊರೊನಾದಿಂದ ಸಚಿವ ಶ್ರೀರಾಮುಲು ಗುಣಮುಖ:ಆಸ್ಪತ್ರೆಯಿಂದ ಡಿಸ್ಚಾರ್ಜ್
ಆರೋಗ್ಯ ಸಚಿವರಿಗೆ ಕೊರೊನಾ ಪಾಸಿಟಿವ್- ಸರ್ಕಾರಿ ಆಸ್ಪತ್ರೆಗೆ ದಾಖಲಾದ ಶ್ರೀರಾಮುಲು
ಜನತಾ ರಕ್ಷಣೆ ಆಗದಿದ್ರೆ, ಅಧಿಕಾರದಲ್ಲಿ ಯಾಕಿದ್ದೀರಾ ? ಸಚಿವ ಶ್ರೀರಾಮುಲುಗೆ, ಸಿದ್ದರಾಮಯ್ಯ ಸವಾಲ್..!