Featured
ಡ್ರಗ್ಸ್ ಮಾಫಿಯಾ:ಮಾಜಿ ಸಿಎಂ ಸಿದ್ದರಾಮಯ್ಯ,ನಿರ್ದೇಶಕ ಇಂದ್ರಜಿತ್ ವಿರುದ್ಧ ಕಿಡಿಕಾರಿದ ಪ್ರಮೋದ್ ಮುತಾಲಿಕ್
![](https://risingkannada.com/wp-content/uploads/2020/09/pramod-mutalik.jpg)
ರೈಸಿಂಗ್ ಕನ್ನಡ :
ದಾವಣಗೆರೆ :
ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮಗ ರಾಕೇಶ್ ಸಿದ್ದರಾಮಯ್ಯ ಸಾನವಪ್ಪಿದ್ದು ಡ್ರಗ್ ನಿಂದಲೇ ಎನ್ನುವುದು ಗೊತ್ತಿದೆ ಎಂದು ದಾವಣಗೆರೆಯಲ್ಲಿ ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಸ್ಯಾಂಡಲ್ವುಡ್ನಲ್ಲಿ ನಡೆದಿದೆ ಎನ್ನಲಾಗುತ್ತಿರುವ ಡ್ರಗ್ಸ್ ದಂಧೆ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ಹೇಳಿಕೆಗಳನ್ನ ಖಂಡಿಸಿದರು.
ಸಿದ್ದರಾಮಯ್ಯನವರಿಗೆ ಯುವ ಜನತೆಯೆ ಬಗ್ಗೆ ಕಾಳಜಿ ಇದ್ದಿದ್ದರೆ ಈ ರೀತಿ ಮಾಡ್ತಾ ಇರ್ಲಿಲ್ಲ. ಅವರ ಮಗ ರಾಕೇಶ್ ಸಿದ್ದರಾಮಯ್ಯ ಸಾನವಪ್ಪಿದ್ದು ಡ್ರಗ್ ನಿಂದಲೇ ಎನ್ನುವುದು ಗೊತ್ತಿದೆ ಎಂದು ತಿರುಗೇಟು ಕೊಟ್ಟರು.
ಇಂದ್ರಜಿತ್ ಲಂಕೇಶ್ ಗೆ ಕೌಂಟರ್ ನೀಡಿದ ಮುತಾಲಿಕ್, ಗೌರಿ ಲಂಕೇಶ್ ಹತ್ಯೆಯಲ್ಲಿ ನಮ್ಮ ಕೈವಾಡ ಇಲ್ಲ.ಕೇವಲ ಆರೋಪ ಮಾಡುತ್ತಿದ್ದಾರೆ, ಇಂದ್ರಜಿತ್ ಲಂಕೇಶ್ ರವರೆ ಇದನ್ನು ವಾಪಸ್ಸು ತೆಗೆದುಕೊಳ್ಳಿ.ಅವರ ಹತ್ಯೆಯಲ್ಲಿ ಯಾವುದೇ ಹಿಂದೂ ಸಂಘಟನೆಗಳು ಕೂಡ ಕೈವಾಡವಿಲ್ಲ. ಇವೆಲ್ಲವುಗಳನ್ನು ಬಿಟ್ಟು ಗೌರಿ ಲಂಕೇಶ್ ಅವರು ಡ್ರಗ್ ಅಡಿಟ್ ಆಗಿದ್ರೋ ಇಲ್ಲವೋ ಹೇಳಿ ಎಂದರು.
![Puranik Full](https://risingkannada.com/wp-content/uploads/2020/07/full-plate.jpg)
ಅದಕ್ಕೆ ಮೊದಲು ಸ್ಪಷ್ಟನೆ ನೀಡಿ ನೀವು ಗೌರಿ ಲಂಕೇಶ್ ಎಲ್ಲಿ ಹೋಗ್ತಾ ಇದ್ರು ? ಎಲ್ಲಿ ಡ್ರಗ್ ಸೇವನೆ ಮಾಡ್ತಾ ಇದ್ರು, ಯಾವ ಪಬ್ ಗೆ ಹೋಗ್ತಾ ಇದ್ರು ಎನ್ನುವುದನ್ನು ನಾನು ಸಾಬೀತು ಮಾಡ್ತಿನಿ. ಇತ್ತಿಚಿನ ದಿನಗಳಲ್ಲಿ ಡ್ರಗ್ಸ್ ಹೆಸರು ಕೇಳಿಬರುತ್ತಿದೆ.ಇದೊಂದು ಡ್ರಗ್ ಜಿಹಾದ್ ಎಂದೇ ಹೇಳಬಹುದು ಎಂದರು.
ಮುಸ್ಲಿಂಮರಿಂದ ಬಹು ದೊಡ್ಡ ಕಾರ್ಯ ದಂಧೆ ನಡೆಯುತ್ತಿದೆ.ಯುವ ಜನತೆಯನ್ನು ದುರ್ಬಲ ಮಾಡಬೇಕು ಎನ್ನುವುದು ಅವರ ಉದ್ದೇಶ.ಪೊಲೀಸರಿಗೆ ಹಾಗೂ ಡ್ರಗ್ ಮಾಫಿಯಾದವರುಗೆ ಲಿಂಕ್ ಇದೆ.ಎಲ್ಲೇಲ್ಲಿ ಡ್ರಗ್ ಮಾರಾಟ ಮಾಡುತ್ತಿದ್ದಾರೆ ಎನ್ನುವುದು ಗೊತ್ತಿದೆ.ಆದರೆ ರಾಜಕೀಯ ಶಕ್ತಿಗಳು ಇವರ ಕೈ ಕಟ್ಟಿಹಾಕುತ್ತಿದ್ದಾರೆ.
ಕರ್ನಾಟಕ ಪೊಲೀಸ್ ಇಲಾಖೆಯ ಬೇಹುಗಾರಿಕೆ ವಿಫಲವಾಗಿದೆ.ಇದನ್ನು ತಡೆಯಲು ಎಲ್ಲಾ ಪಕ್ಷದವರು ವಿಫಲಾವಾಗಿದ್ದಾರೆ.2009 ರಲ್ಲಿ ಪಬ್ ಗಲಾಟೆಯಾದಾಗ ಇದನ್ನು ತಡೆಗಟ್ಟಬಹುದಿತ್ತು ಎಂದರು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?