Featured
ತಾನಿದ್ದಲ್ಲಿಗೇ ಟ್ರೈನ್ ಕರೆಸಿಕೊಂಡ್ರಾ ಸುಮಲತಾ.? ವಿವಾದದ ಬಗ್ಗೆ ಸುಮಲತಾ ಹೀಗಂದ್ರು.!

ಮಂಡ್ಯ : ಮಂಡ್ಯ ಸಂಸದೆ ಸುಮಲತಾ ಅಂಬರೀಶ್, ಮೆಮೋ ರೈಲಿನಲ್ಲಿ ಮಹಿಳೆಯರಿಗಾಗಿ ವಿಶೇಷ ಎರಡು ಬೋಗಿಗಳಿಗೆ ಚಾಲನೆ ನೀಡಿದ್ರು. ಗುರುವಾರ ಮಂಡ್ಯದಲ್ಲಿ ಈ ವಿಶೇಷ ಮಹಿಳಾ ಬೋಗಿಗಳಿಗೆ ಚಾಲನೆ ನೀಡಿದ್ರು. ಈ ವೇಳೆ, ರೈಲನ್ನು ತಾವಿದ್ದಲ್ಲಿಗೇ ಕರೆಸಿಕೊಂಡ್ರು ಎಂದು ಸಾಕಷ್ಟು ಚರ್ಚೆ ಜೊತೆ ವಿವಾದವೂ ಆಗಿತ್ತು. ಇದಕ್ಕೆಲ್ಲಾ ಸುಮಲತಾ ಇವತ್ತು ಸ್ಪಷ್ಟನೆ ನೀಡಿದ್ದು, ಕಾರ್ಯಕ್ರಮದಲ್ಲಿ ಯಾವುದೇ ತಪ್ಪಾಗಿಲ್ಲ ಎಂದಿದ್ದಾರೆ.
ಮಂಡ್ಯದಲ್ಲಿ ಮಾತ್ನಾಡಿದ ಸುಮಲತಾ, ಗುರುವಾರ ರೈಲು ಬೋಗಿಗಳಿಗೆ ಚಾಲನೆ
ನೀಡಿದ ವಿಚಾರವಾಗಿ ನನ್ನ ವಿರುದ್ಧ ತಪ್ಪು ಸುದ್ದಿ ಪ್ರಸಾರ ಮಾಡಲಾಗಿದೆ. ನನ್ನ ವಿರುದ್ಧ ಮಾಧ್ಯಮಗಳು
ಸುದ್ದಿ ಮಾಡಬಾರದು ಎಂದು ನಾನು ಹೇಳುತ್ತಿಲ್ಲ. ಆದ್ರೆ, ನಿನ್ನೆಯ ಸುದ್ದಿ ಪ್ರಸಾರ ನನಗೆ ಬೇಸರ ತರಿಸಿದೆ
ಎಂದ್ರು.
ಇದೇ ವೇಳೆ ವಿವಾದಕ್ಕೆ ಸ್ಪಷ್ಟನೆ ನೀಡಿದ ಸುಮಲತಾ, ನಾನು ನಿಂತ ಸ್ಥಳದಲ್ಲೇ
ಚಾಲನೆ ನೀಡಬೇಕು ಎಂದು ಮೊದಲೇ ನಿಗದಿಯಾಗಿತ್ತು. ಅಧಿಕಾರಿಗಳು ಕೂಡ ರೈಲು ಇಲ್ಲಿಗೆ ಬಂದಾಗಲೇ ಚಾಲನೆ
ನೀಡಬೇಕು ಎಂದು ತಿಳಿಸಿದ್ದರು. ಹೀಗಾಗಿ, ನಾನು ಆ ಸ್ಥಳದಲ್ಲೇ ನಿಂತಿದ್ದೆ. ರೈಲು ಅಲ್ಲಿಗೆ ಬಂದ ಮೇಲೆ
ಚಾಲನೆ ಕೊಟ್ಟೆ ಅಷ್ಟೇ. ಇದರಲ್ಲಿ ನನ್ನ ತಪ್ಪು ಅಥವಾ ಪ್ರಮಾದ ಏನೂ ಇಲ್ಲ. ಇದನ್ನೇ ವಿವಾದ ಮಾಡಿದ್ದು
ಬೇಸರ ತಂದಿದೆ ಎಂದು ಸುಮಲತಾ ಹೇಳಿದ್ರು.
ಇಷ್ಟೇ ಅಲ್ಲದೆ, ಮಂಡ್ಯ ಚುನಾವಣೆ ವೇಳೆ ಮಹಿಳೆಯರಿಗೆ ಪ್ರತ್ಯೇಕ ಬೋಗಿ ವ್ಯವಸ್ಥೆ ಮಾಡೋದಾಗಿ ಭರವಸೆ ನೀಡಿದ್ದೆ. ಈಗ ಆ ಭರವಸೆ ಈಡೇರಿಸಿದಂತೆ ಆಗಿದೆ. ತುಂಬಾ ಖುಷಿಯಾಗಿದೆ ಎಂದು ಸುಮಲತಾ ಹೇಳಿದ್ರು. ಈ ವಿಚಾರವಾಗಿ ರೈಲ್ವೆ ಸಚಿವರಾದ ಪಿಯೂಷ್ ಗೋಯಲ್ ಮತ್ತು ಸುರೇಶ್ ಅಂಗಡಿ ಅವರಲ್ಲಿ ಮನವಿ ಮಾಡಿದ್ದೆ ಎಂದು ಸುಮಲತಾ ಹೇಳಿದ್ರು.
You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?















