Featured
ತಿರುವಳ್ಳೂರಿನ ಫಾರ್ಮ್ ಹೌಸ್ನಲ್ಲಿ ಎಸ್ಪಿಬಿ ಅಂತ್ಯಕ್ರಿಯೆ: ಅಭಿಮಾನಿಗಳಿಂದ ಭಾವಪೂರ್ಣ ನಮನ
![](https://risingkannada.com/wp-content/uploads/2020/09/indian-express.jpg)
ರೈಸಿಂಗ್ ಕನ್ನಡ:
ನ್ಯೂಸ್ ಡೆಸ್ಕ್:
ಗಾನ ಗಾರುಡಿಗ ಎಸ್ಪಿ ಬಾಲಸುಬ್ರಹ್ಮಣ್ಯಂ (74)ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿದೆ.
ತಿರುವಳ್ಳೂರು ಜಿಲ್ಲೆಯ ತಾಮರೈಪಾಕ್ಕಂನ ರೆಡ್ ಹಿಲ್ಸ್ ಬಳಿಯ ಎಸ್ಪಿಬಿ ಅವರ ತೋಟದ ಮನೆಯಲ್ಲಿ ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಪುರೋಹಿತರ ತಂಡ ದ ನೆರವಿನಿಂದ ಪುತ್ರ ಎಸ್.ಪಿ ಚರಣ್ ಅಂತಿಮ ವಿಧಿ ವಿಧಾನಗಳನ್ನ ಪೂರೈಸಿದರು.
ಪೊಲೀಸರು ಮೂರು ಸುತ್ತಿನ ಕುಶಾಲುತೋಪು ಹಾರಿಸಿ ಅಂತಿಮ ಗೌರವ ಸಲ್ಲಿಸಿದರು.
ಅಂತಿಮ ವಿಧಿವಿಧಾನಕ್ಕೂ ಮುನ್ನ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಕೊರೊನಾ ಭೀತಿ ನಡುವೆಯೂ ಅಭಿಮಾನಿಗಳು, ಗಣ್ಯರು ಮತ್ತು ಸಿನಿಮಾ ಕಲಾವಿದರು ಫಾರ್ಮ್ ಹೌಸ್ಗೆ ಆಗಮಿಸಿ ಅಂತಿಮ ನಮನ ಸಲ್ಲಿಸಿದರು.
ಅಹಿತಕರ ಘಟನೆ ನಡೆಯದಂತೆ ಭಾರೀ ಸಂಖ್ಯೆಯಲ್ಲಿ ಪೊಲೀಸರನ್ನ ನಿಯೋಜಿಸಲಾಗಿತ್ತು.
ಸ್ಟಾರ್ ನಟರಾದ ರಜನೀಕಾಂತ್,ಕಮಲ್ ಹಾಸನ್, ಚಿರಂಜೀವಿ, ಅರ್ಜುನ್ ಸರ್ಜಾ, ವಿಜಯ್ ದರ್ಶನ ಪಡೆದರು.
ತಿರುವಳ್ಳರ ಡಿಸಿ ಮಗೇಶ್ವರಿ ರವಿಕುಮಾರ್, ಆಂಧ್ರಪ್ರದೇಶ ನೀರಾವರಿ ಸಚಿವ ಅನಿಲ್ ಕುಮಾರ್ ಯಾದವ್, ಸಂಗೀತಾ ನಿರ್ದೇಶಕ ದೇವಿಶ್ರಿ ಪ್ರಸಾದ್, ಹಾಸ್ಯ ನಟ ಮಯಿಲ್ ಸಾಮಿ ಆಗಮಿಸಿ ನಮನ ಸಲ್ಲಿಸಿದರು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?