Featured
SP ಕೈಗೆ ಸಿಕ್ಕ ಟ್ರಾಫಿಕ್ ಪೊಲೀಸ್‌ಗೂ ಬಿತ್ತು 34 ಸಾವಿರ ರೂ ದಂಡ

ಜಾರ್ಖಾಂಡ್ ( ರಾಂಚಿ) : ಸಂಚಾರಿ ನಿಯಮ ಉಲ್ಲಂಘನೆ ದಂಡ ಎಲ್ಲರಿಗೂ ಹೆದರಿಕೆ ಹುಟ್ಟಿಸುತ್ತಿದೆ, ಪ್ರತಿದಿನವೂ ಒಂದೊಂದು ಸುದ್ದಿ ಕುತೂಹಲದ ಜೊತೆ ಭಯ ಇಮ್ಮಡಿಗೊಳಿಸುತ್ತಿವೆ. ರಾಂಚಿಯಲ್ಲಿ ದಂಡ ಹಾಕಿ ಬೀಗುವ ಟ್ರಾಫಿಕ್ ಪೇದೆಗೇ ಬರೊಬ್ಬರಿ 34 ಸಾವಿರ ರೂಪಾಯಿ ದಂಡ ಹಾಕಲಾಗಿದೆ.
ರಾಂಚಿಯ ಪ್ಲಾಜಾಚೌಕ್‌ನಲ್ಲಿ ಹೆಲ್ಮೆಟ್ ಇಲ್ಲದೇ ಬೈಕ್ ಓಡಿಸುತ್ತಿದ್ದ ರಾಕೇಶ್ ಕುಮಾರ್ ಹಾಗೂ ಬೈಕ್ ಹಿಂದೆ ಹೆಲ್ಮೆಟ್ ಇಲ್ಲದೇ ಕುಳಿತಿದ್ದ ಟ್ರಾಫಿಕ್ ಇನ್ಸ್‌ಪೆಕ್ಟರ್ ಪರಮೇಶ್ವರ ರಾಂಚಿ ಟ್ರಾಫಿಕ್ ಸೂಪರಿಯೆಂಟೆಂಡ್ ಅಜಿತ್ ಪೀಟರ್ ಕೈಗೆ ಸಿಕ್ಕಿಹಾಕಿಕೊಂಡರು. ಹೆಲ್ಮೆಟ್ ಇಲ್ಲ ಎಂದು ಗಾಡಿ ತಡೆದ ಮೇಲೆ ದಾಖಲೆಗಳನ್ನೂ ಕೇಳಲಾಯ್ತು. ಆದರೆ ಪೊಲೀಸರೇಕೆ ದಾಖಲೆ ಇಟ್ಟುಕೊಂಡು ಓಡಾಡ್ತಾರೆ..? ಇವರೂ ಹಾಗೇಯೇ ಆರಾಮಾಗಿ ಸುತ್ತುತ್ತಿದ್ದರು
. ಲೈಸೆನ್ಸ್ ಇಲ್ಲ, ದಾಖಲೆ ಇಲ್ಲ, ಹೊಗೆ ಮಾಲೀನ್ಯ ದಾಖಲೆ ಇಲ್ಲವೇ ಇಲ್ಲ, ಪೊಲೀಸರೇ ಕಾಯ್ದೆಗಳನ್ನ ಪರಿಪಾಲನೆ ಮಾಡದ ತಪ್ಪಿಗೆ ಪೇದೆ ರಾಕೇಶ್‌ಗೆ ಬರೊಬ್ಬರಿ 34 ಸಾವಿರ ರೂಪಾಯಿ ದಂಡ ವಿಧಿಸಲಾಯ್ತು. ಹಾಗೂ ಇನ್ಸ್‌ಪೆಕ್ಟರ್ ಮೇಲೆ ಇಲಾಖೆ ತನಿಖೆ ನಡೆಸಿ ಕ್ರಮಕ್ಕೆ ಆದೇಶ ನೀಡಲಾಯ್ತು.
You may like
ನೋಯ್ಡಾ ಪೊಲೀಸರು ಒಂದು ನಿಮಿಷದ ಅಂತರದಲ್ಲಿ ಎರಡು ಬಾರಿ ದಂಡದ ಚಲನ್ ಕಳಿಸಿದ್ರು ಓದಿ
ಝೀಬ್ರಾ ಕ್ರಾಸಿಂಗ್ ಮೀರಿ ನಿಂತಿದ್ದ ಪಿಸಿಆರ್ ವಾಹನ : ಫೋಟೋ ತೆಗೆದು ಟ್ವೀಟ್ ಮಾಡಿ ದಂಡ ಹಾಕಿಸಿದರು.
ರಾಜ್ಯದಲ್ಲಿ ದುಬಾರಿ ದಂಡಕ್ಕೆ ಬ್ರೇಕ್ : ಜನಾಕ್ರೋಶಕ್ಕೆ ಮಣಿದ ಯಡಿಯೂರಪ್ಪ ಸರ್ಕಾರ
ದಂಡಕ್ಕೆ ಹೆದರಿ ಕಾರಿನಲ್ಲೂ ಹೆಲ್ಮೆಟ್ ಹಾಕಿಕೊಂಡ ಮಹಾನುಭಾವ..! ಅಚ್ಚರಿಯಾದ್ರೂ ಸತ್ಯ..!
ಯಾರಿಗೆ ಹೇಳೋದು..? ನನ್ನ ಕಾರಿಗೂ ಓವರ್ಸ್ಪೀಡ್ ಅಂತ ದಂಡ ಹಾಕಿದ್ರು..! ಗಡ್ಕರಿ
ಸವಾರರಿಗೆ ದುಬಾರಿ ದಂಡ : ಸಚಿವ ಶ್ರೀರಾಮುಲು ವಿರೋಧ..!