Featured
ಸೋನು ಸೂದ್ ಹುಟ್ಟುಹಬ್ಬಕ್ಕೆ ಅಭಿಮಾನಿಯಿಂದ ಭರ್ಜರಿ ಗಿಫ್ಟ್ – 50 ಸಾವಿರ ರೂಪಾಯಿಯಲ್ಲಿ ರಸ್ತೆ ರಿಪೇರಿ..!
![](https://risingkannada.com/wp-content/uploads/2020/07/sonu-sood-fan-1.jpg)
ರೈಸಿಂಗ್ ಕನ್ನಡ
ದುರ್ಗೇಶ್ ಮಂಗಿಹಾಳ, ಯಾದಗಿರಿ:
ಬಾಲಿವುಡ್ ನಟ ಹಾಗೂ ವಿಲನ್ ಸೋನು ಸೂದ್ ಗುರುವಾರ ಹುಟ್ಟು ಆಚರಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಕೂಡ ಸೋನು ಸೂದ್ ಅಭಿಮಾನಿಗಳು ಅಲ್ಲಲ್ಲಿ ಕೇಕ್ ಕೆತ್ತರಿಸಿ ತಮ್ಮ ನೆಚ್ಚಿನ ಸ್ಟಾರ್ಗೆ ಹುಟ್ಟು ಹಬ್ಬದ ಶುಭಾಶಯಗಳು ಕೋರಿದ್ದಾರೆ.
ಆದರೆ ಯಾದಗಿರಿ ಜಿಲ್ಲೆಯಲ್ಲಿ ಅಭಿಮಾನಿಯೊಬ್ಬ ತಮ್ಮೂರಿನ ರಸ್ತೆ ದುರಸ್ತಿ ಕಾರ್ಯ ಮಾಡಿ ವಿಶಿಷ್ಟವಾಗಿ ಶುಭ ಕೋರಿದ್ದಾನೆ.
![](https://risingkannada.com/wp-content/uploads/2020/07/sonu-sood-fan.jpg)
ನಟ ಸೋನು ಸೂದ್ ಇತ್ತಿಚೆಗೆ ಹಲವು ಸಾಮಾಜಿಕ ಕಾರ್ಯದಲ್ಲಿ ತೊಡಗಿರುವುದು ಎಲ್ಲರಿಗೆ ಗೊತ್ತಿರುವ ವಿಚಾರ, ಸಿಂಪಲ್ ಸರಳವಾಗಿ ಸುದ್ದಿ ಸದ್ದಿಲ್ಲದೆ ಜನರ ಪ್ರೀತಿಗೆ ಪಾತ್ರವಾಗಿರುವ ನಟನಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ.
ಯಾದಗಿರಿ ಜಿಲ್ಲೆಯ ಗುರುಮೀಠಕಲ್ ತಾಲೂಕಿನ ಎಂಪ್ಟಿಪಲ್ಲಿ ಗ್ರಾಮದ ಭೀಮು ಎನ್ನುವ ಅಭಿಮಾನಿ, ಸೋನು ಸೂದ್ ಹುಟ್ಟು ಹಬ್ಬದ ದಿನ 5 ಕಿ.ಮೀ. ರಸ್ತೆಗೆ 50 ಸಾವಿರ ರೂಪಾಯಿ ಖರ್ಚು ಮಾಡಿ ಸೀಮೆಂಟ್ ಮತ್ತು ಮಣ್ಣು ಹಾಕಿ ತಗ್ಗು ದಿನ್ನಿಗಳನ್ನು ಮುಚ್ವಿದ್ದಾರೆ. ಭೀಮು ಎಂಪ್ಟಿಪಲ್ಲಿ ಸ್ವತಃ ತಾನೇ ರಸ್ತೆಗುಂಡಿಗಳನ್ನು ಮುಚ್ಚಿ ಹುಟ್ಟು ಹಬ್ಬದ ಶುಭ ಕೋರಿದ್ದಾನೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?