Connect with us

Featured

ಗಡಿನಾಡಿನ ನಿಸ್ವಾರ್ಥ ಸೇವಕ- ಸಮಾಜಸೇವೆಯಲ್ಲೇ ಖುಷಿ ಕಾಣುವ ಮಹಾನುಭಾವ

ರೈಸಿಂಗ್​ ಕನ್ನಡ:

ವಿಶ್ವಕುಮಾರ್​​, ಬೀದರ್​​:

Advertisement

ನಿಸ್ವಾರ್ಥ ಸಮಾಜ ಸೇವೆ ಯಾರಿಗೂ ಬರಲ್ಲ, ಸಮಾಜ ಸೇವೆ ಹೆಸರಿನಲ್ಲಿ ಅದೆಷ್ಟೋ ಜನ ಲಾಭ ಪಡೆಯುತ್ತಿದ್ದಾರೆ. ಆದರೆ ಇಲ್ಲೊಬ್ಬ ಯುವಕ ಯಾವ ಲಾಭಕ್ಕೂ,ಯಾವ ಪ್ರಚಾರಕ್ಕೂ  ಆಸೆಪಡದೆ ನಿಸ್ವಾರ್ಥಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬರದ ನಾಡಿನಲ್ಲೊಬ್ಬ ಯುವಕ ಜನಪ್ರತಿನಿಧಿಗಳಿಗಿಂತ ಹೆಚ್ಚಾಗಿ ಸಮಾಜಸೇವೆಗೆ ಮುಂದಾಗಿದ್ದಾರೆ.

ಬೀದರ್ ಜಿಲ್ಲೆಯ  ಭಾಲ್ಕಿ ತಾಲೂಕಿನಲ್ಲಿ ಒಂದು‌ಬಡ ಕುಟುಂಬದಲ್ಲಿ ಹುಟ್ಟಿದ ಆ ಯುವಕ ತಾನು ಕಷ್ಟದಲ್ಲಿದ್ದರು ಜನರ ಸೇವೆ ಮಾಡುತ್ತಾ  ಅದೇಷ್ಟೋ ಜನರ ಮನಸಿನಲ್ಲಿ ಅಚ್ಚಳಿಯದೆ ಉಳಿದಿದ್ದಾನೆ.  ಭಾಲ್ಕಿ ತಾಲೂಕಿನ ಬಸವರಾಜ್ ವಾಲೇ ಹಾಗೂ ಸುಶೀಲಾ ವಾಲೇ ಅವರ ಪುತ್ರ ಸತೀಶ್ ವಾಲೇ ಚಿಕ್ಕವಯಸ್ಸಿನಿಂದಲೇ ಬಡವರ ಬಂಧುವಾಗಿದ್ದಾರೆ. 31 ವರ್ಷದ ಸತೀಶ್​ ವಾಲೆ ಚಿಕ್ಕಂದಿನಿಂದಲೇ ಬಡತನದಲ್ಲೇ ಬೆಳೆದವರು. ತಂದೆ ತಾಯಿ ಅನಕ್ಷರಸ್ಥ ರಾಗಿದ್ದು ಉಳುಮೆ ಮಾಡಲು ಸ್ವಂತ ಜಮೀನು ಇಲ್ಲದಿದ್ದರು ಬೆರೆಯವರ ಜಮೀನಿನಲ್ಲಿ ಕೆಲಸ‌ಮಾಡುತ್ತಿದ್ದ ಬಸವರಾಜ್ ವಾಲೇ, ತನ್ನ ಮಗನನ್ನ ವಿದ್ಯಾವಂತನನ್ನಾಗಿ ಮಾಡಿದ್ರು.

ಕಷ್ಟದಲ್ಲೆ ಬೆಳೆದ ಸತೀಶ್ ವಾಲೆ ಪದವಿ‌ಪಡೆದರು. ಕಂಪ್ಯೂಟರ್ ನಲ್ಲಿ ಪರಿಣಿತಿ ಪಡೆದ ಸತಿಶ್ ವಾಲೆ ಆರ್ಥಿಕ ಮತ್ತು ಸಾಂಖಿಕ‌ ಇಲಾಖೆಯಲ್ಲಿ  ಸೇವೆ ಸಲ್ಲಿಸುತ್ತಾ, ಬಂದ ಆದಾಯದಲ್ಲೇ ಬಡ ಜನರಿಗೆ ತನ್ನ ಕೈಲಾದಷ್ಟು ಸಹಾಯ ಮಾಡುತ್ತಾ ತನ್ನ ಸೇವೆ ಮುಂದುವರೆಸಿದರು. ನಂತರ ಡಿಸ್ಟಿಕ್ ಪ್ರಾಜೆಕ್ಟ್ ಮ್ಯಾನೆಜರ್ ಆಗಿ ಸೇವೆ ಸಲ್ಲಿಸುತ್ತ ತಮ್ಮ ಸಂಪಾದನೆಯಲ್ಲಿ ಅನಾಥ ಮಕ್ಕಳಿಗೆ ಮತ್ತು ನಿರ್ಗತಿಕ ಮಕ್ಕಳ ಪೊಷಣೆಗೆ ಮುಂದಾದರು, ಹೀಗೆ ಮಕ್ಕಳಿಗಾಗಿ ಅಪ್ನಾಘರ್ ಆಶ್ರಮ ಎಂಬ ಹೆಸರಿನಲ್ಲಿ ಒಂದು ಸಣ್ಣ ಅನಾಥಾಶ್ರಮ ಆರಂಭಿಸಿದರು. ಸರಿ ಸುಮಾರು 30ಕ್ಕೂ ಹೆಚ್ಚು ಅನಾಥ‌ಮಕ್ಕಳಿಗೆ ಅಪ್ನಾ ಘರ್ ಆಶ್ರಮದ ಮೂಲಕ ಆಶಯ ನೀಡುತ್ತಿದ್ದಾರೆ. ಅಷ್ಟೇ ಅಲ್ಲಾ ಮಕ್ಕಳ ವಿದ್ಯಾಭ್ಯಾಸ ಕೂಡ ತಮ್ಮ ಸ್ವಂತ ಖರ್ಚಿನಲ್ಲಿ ನೋಡಿಕೊಳ್ಳುತ್ತಿದ್ದಾರೆ.

Advertisement

ಸತೀಶ್ ವಾಲೇ ಅವರ ಈ ಸಮಾಜಿಕ ಕಳಕಳಿ ಹಾಗೂ ಸಮಾಜ ಸೇವೆಗೆ ಜಿಲ್ಲೆಯ ಕೆಲ ಸಂಘ ಸಂಸ್ಥೆಗಳು ಸಹ ಸಾಥ್ ನೀಡುತ್ತಿವೆ. ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕಾರ್ಯನಿವರ್ವಹಿಸುತ್ತಾ ತಮಗೆ ಬರುವ ಆದಾಯದಲ್ಲೇ ಸಮಾಜ ಸೇವೆಮಾಡುತ್ತಿದ್ದಾರೆ. ಪರರ ವಸ್ತು ಪಾಷಣಕ್ಕೆ ಸಮ ಎನ್ನುವ ಹಾಗೆ ತಾವು ಲಾಭವನ್ನ ಬಯಸದೆ  ಬರುವ ಸಂಬಳದಲ್ಲೇ ಜನ ಸೇವೆ ನಡೆಸುತ್ತಿದ್ದಾರೆ. ಅಷ್ಟೆ ಅಲ್ಲಾ ಜಿಲ್ಲೆಯಲ್ಲಿ ಸಾಕಷ್ಟು ಜ‌ನ ಅಲೆಮಾರಿ ಜನಾಗದವರು ವಾಸವಿದ್ದಾರೆ, ಕೋರೊನಾ ಮಹಾಮಾರಿ ಹೊಡೆತಕ್ಕೆ ಸಿಲುಕಿರುವ ಅಲೇಮಾರಿ ಸಮುದಾಯದ ಜನ ಸರಿಯಾದ ಸೂರು ಇಲ್ಲದೆ ಒಂದೊತ್ತು  ಕೂಳು ಸಿಗದೆ ಅಲೆಯುತ್ತಿರುವ  ಅಲೆಮಾರಿ ಸಮುದಾಯಕ್ಕೆ ಆಹಾರ ಕಿಟ್ ವಿತರಣೆ ಮಾಡುತ್ತಾ ಅಲೆಮಾರಿ ಸಮಾಜಕ್ಕೂ ಬಡವರ ಬಂದುವಾಗಿದ್ದಾರೆ. ಇನ್ನು ಸಮಾಜದಲ್ಲಿ ಮಂಗಳಮುಖಿಯರಿಗೂ ಸರ್ಕಾರ ಸಹಾಯಸ್ತ ಮಾಡುತ್ತಿರುವ ಬೆನ್ನಲ್ಲೆ ಸಮಾಜ ಸೇವಕ ಯುವಕ ಸತೀಶ್ ವಾಲೇ ಮಂಗಳ‌ಮುಖಿಯರಿಗೆ ಒಂದು ನೆಲೆ ದೊರಕಿಸಿ ಕೊಡುವ ನಿಟ್ಟಿನಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ಅವರಿಗೆ ಆಧಾರ್ ಕಾರ್ಡ್ ಹಾಗೂ ರೆಷನ್ ಕಾರ್ಡ್ ಹಾಗೂ ಆರೋಗ್ಯ ಕಾರ್ಡ್   ಮಾಡಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. 

Advertisement

ಗೋವು, ಹಸುಗಳಿಗೂ ಮೇವು ವಿತರಣೆ ಮಾಡುತ್ತಿದ್ದು, ಸಮಾಜದಲ್ಲಿ ಎಲ್ಲಾ ಧರ್ಮ ವರ್ಗದ ಮಕ್ಕಳನ್ನ ಒಗ್ಗೂಡಿಸಿಕೊಂಡು ಜಾತಿ ಭೇದ ವಿಲ್ಲದೆ ಎಲ್ಲರನ್ನ ಸರಿಸಮಾನಾಗಿ ನೋಡುತ್ತ ಸಹಾಯ ಮಾಡುತ್ತಿದ್ದಾರೆ. ಜೀವನದಲ್ಲಿ ಚಿಕ್ಕ ವಸಯ್ಸಿನಿಂದ ತಾವು ಪಟ್ಟ ಕಷ್ಟ ಇನ್ನೊಬ್ಬರಿಗೆ ಬರದಿರಲಿ, ಎನ್ನುವ ದೃಷ್ಠಿಯಿಂದ ತನ್ನ ಕೈಲಾದ ಸಹಾಯ ಮಾಡುತ್ತಾ  ಬರುತ್ತುದ್ದಾರೆ, ಸದ್ಯ ಬೀದರ್ ಜಿಲ್ಲಾ ಕೇಂದ್ರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸತೀಶ್ ವಾಲೆಯವರ ಸಮಾಜ ಸೇವೆಗೆ ಸಮಾಜಿಕ ಕಳಕಳಿಗೆ ಮೆಚ್ಚಿ ಜಿಲ್ಲಾಧಿಕಾರಿ ಆರ್.ರಾಮಚಂದ್ರ ಹಾಗೂ ಎಡಿಸಿ ರುದ್ರರೇಶ್ ಘಾಳೆ ಅವರು ಸಹ ಸತೀಶ್ ವಾಲೇಯವರ ಕಾರ್ಯಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ, ಜತೆಗೆ ಜಿಲ್ಲೆಯ ಕೆಲ ಸಂಘ ಸಂಸ್ಥೆಗಳು ಸತೀಶ್ ವಾಲೆಯವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡೆಸಿ ಸಂಘಸಂಸ್ಥೆಗಳು ಸತೀಶ್ ವಾಲೆಯವರ ಸಮಾಜ ಸೇವೆಗೆ ಕೈ ಜೊಡಿಸಿವೆ..ಒಟ್ಟರೆ ಜಿಲ್ಲೆಯಾದ್ಯಂತ ಸತೀಶ್ ವಾಲೇಯವರ ಸಮಾಜ ಸೇವೆಗೆ ಜನ ಹರ್ಷ ವ್ಯಕ್ತಪಡೆಸುತ್ತಿದ್ದಾರೆ.

Advertisement
ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ