Featured
ಗುದ್ದಲಿ ಹಿಡಿದು ಕೆಲಸ ಮಾಡಿ, ಸರಳತೆ ಮೆರೆದ ಗವಿಸಿದ್ದೇಶ್ವರ ಸ್ವಾಮೀಜಿ
ರೈಸಿಂಗ್ ಕನ್ನಡ
ನಾಗರಾಜ್. Y. ಕೊಪ್ಪಳ:
ಕಾರ್ಮಿಕರಂತೆ ಗುದ್ದಲಿ ಹಿಡಿದು, ಕೆಲಸ ಮಾಡಿ ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಸರಳತೆ ಮೆರೆದಿದ್ದಾರೆ. ಕೊಪ್ಪಳದ ಗವಿಮಠದ ಆವರಣದಲ್ಲಿನ ಸಸಿಗೆ ನೀರು ನಿಲ್ಲಿಸಲು ಕಾರ್ಮಿಕರೊಂದಿಗೆ ಕೆಲಸ ಮಾಡಲು ಸ್ವತಃ ಸ್ವಾಮೀಜಿಯೇ ಮುಂದಾಗಿದ್ದು, ಎಲ್ರಿಗೂ ಮಾದರಿಯಾಗಿದ್ದಾರೆ. ಪೋಟೋ, ವಿಡಿಯೋ ಪ್ರಚಾರ ಬಯಸದ ಶ್ರೀಗಳು ಪ್ರತಿನಿತ್ಯ ಕಾಯಕವೇ ಕೈಲಾಸ ಎನ್ನುವಂತೆ ಸಾಮಾನ್ಯರಂತೆ ಕೆಲಸ ನಿರ್ವಹಿಸುತ್ತಾರೆ.
ಲಕ್ಷ ವೃಕ್ಷೋತ್ಸವ ಘೋಷವಾಕ್ಯದಡಿ ಸಸಿ ನೆಟ್ಟಿರೋ ಶ್ರೀಗಳು, ತಾವೇ ಸಸಿಗಳ ಆರೈಕೆ ಜೊತೆ ಪೋಷಿಸುತ್ತಿದ್ದಾರೆ. ಶ್ರೀಗಳ ಮಾದರಿ ಕಾರ್ಯದ ಬಗ್ಗೆ ಶ್ರೀಗಳಿಗೆ ಗೊತ್ತಿಲ್ಲದ ಹಾಗೇ ಮೊಬೈಲ್ ನಲ್ಲಿ ಸೆರೆ ಹಿಡಿದಿರೋ ಭಕ್ತರು, ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?