Connect with us

Uncategorized

ಸರ್ಕಾರದ ವಿರುದ್ಧ ಸಿಡಿದೆದ್ದ ಸಿದ್ದರಾಮಯ್ಯ – ಕೊರೊನಾ ವಿಚಾರದಲ್ಲಿ ಬಿಎಸ್‌ವೈ ಸೋತಿದ್ದಾರೆ ಎಂದ ಮಾಜಿ ಸಿಎಂ

ರೈಸಿಂಗ್ ಕನ್ನಡ :

ಬೆಂಗಳೂರು :

ಕೊರೊನಾ ವಿಚಾರದಲ್ಲಿ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮಕೈಗೊಳ್ಳುತ್ತಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.  ಕೋವಿಡ್-19 ದೇಶ ಹಾಗೂ ರಾಜ್ಯದಲ್ಲಿ ದಿನೇ ದಿನೇ ಆತಂಕ ಹೆಚ್ಚಿಸುತ್ತಲೇ ಇದೆ. ಆದ್ರೆ, ರಾಜ್ಯ ಸರ್ಕಾರ ಮಾತ್ರ ಕಳೆದ 5 ತಿಂಗಳಿಂದ ಕೇವಲ ಚರ್ಚೆ ಮಾಡುತ್ತಲೇ ಇದೆ ಎಂದಿದ್ದಾರೆ. ಲಾಕ್‌ಡೌನ್‌ಗೂ ಮೊದಲು ಭಾರತದಲ್ಲಿ ಸೋಂಕಿತರ ಸಂಖ್ಯೆ ಯುರೋಪ್ ಹಾಗೂ ಅಮೆರಿಕಾ ದೇಶಗಳಿಗಿಂತ ಕಡಿಮೆ ಇತ್ತು, ಭಾರತದಲ್ಲಿ ಸಿದ್ಧತೆ ಮಾಡಿಕೊಳ್ಳೋಕೆ ಸೂಕ್ತ ಸಮಯವೂ ಇತ್ತು. ವೆಂಟಿಲೇಟರ್, ಮಾಸ್ಕ್, ಸ್ಯಾನಿಟೈಸರ್‌ ಹಾಗೆ ಬೆಡ್‌ಗಳ ವಿಚಾರದಲ್ಲಿ ಆಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬಹುದಿತ್ತು. ಇವರುಗಳ ತಪ್ಪು ನಿರ್ಧಾರದಿಂದಾಗಿ ಇವತ್ತು ನಾವು ಜಗತ್ತಿನಲ್ಲಿ ನಾಲ್ಕನೇ ಸ್ಥಾನದಲ್ಲಿ ಇದ್ದೀವಿ ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. 

ದೇಶದಲ್ಲಿ ಸೋಂಕಿತರ ಸಂಖ್ಯೆ 6 ಲಕ್ಷ ದಾಟಿದೆ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಸರಿಯಾಗಿ ಕೆಲಸ ಮಾಡಿದ್ರೆ ಇವತ್ತು ಇಂತ ಪರಿಸ್ಥಿತಿ ಬರ್ತಾ ಇರಲಿಲ್ಲ ಅಂತ ಬೇಸರ ವ್ಯಕ್ತಪಡಿಸಿದ್ದಾರೆ. ಕೊರೊನಾಗೆ ನಿರ್ದಿಷ್ಟವಾದ ಚಿಕಿತ್ಸೆ ಇಲ್ಲ, ಈ ರೋಗ ಲಕ್ಷಣಗಳು ಕೆಲವರಿಗೆ ಕಾಣಿಸಿಕೊಂಡೇ ಇಲ್ಲ, ಶವ ಸಂಸ್ಕಾರ ಮಾಡೋಕು ಹಿಂದು ಮುಂದು ನೋಡ್ತಾ ಇದ್ದಾರೆ. ಸರ್ಕಾರದ ವತಿಯಿಂದಲೇ ಅಮಾನುಷವಾಗಿ ಮನುಕುಲಕ್ಕೆ ಅಗೌರವ ತೋರಲಾಗುತ್ತಿದೆ, ಇದು ಸರ್ಕಾರದ ಬೇಜವಾಬ್ದಾರಿ ಅಲ್ಲದೇ ಇನ್ನೇನು ಅಂತ ಪ್ರಶ್ನಿಸಿದ್ದಾರೆ.

Advertisement

ಇನ್ನೂ ಶವ ಸಂಸ್ಕಾರದ ಗೈಡ್ ಲೈನ್ ಬಗ್ಗೆ ಯಾಕೆ ತಿಳುವಳಿಕೆ ನೀಡುತ್ತಿಲ್ಲ, ಹೆಲ್ತ್ ಮಿನಿಸ್ಟರ್ ಜಿಲ್ಲೆಯಲ್ಲೇ ಆ ರೀತಿ ಆಗ್ತಾ ಇದೆ, ಆರು ಜನ‌ರನ್ನ ಸಸ್ಪೆಂಡ್ ಮಾಡಿದ್ರೆ ಅದು ಪರಿಹಾರನಾ ಅಂತ ಪ್ರಶ್ನಿಸಿದ್ದಾರೆ. ಸಿಎಂ ಯಡಿಯೂರಪ್ಪ ಕೈಯಲ್ಲಿ ಏನೂ ಆಗ್ತಾ ಇಲ್ಲ, ಸಚಿವರುಗಳ ನಡುವೆಯೇ ಮನಸ್ತಾಪವಿದೆ. ಅಶೋಕ್ ಹಾಗೂ ಸುಧಾಕರ್ ನಡುವೆ ಜಗಳಾ ನಡೆಯುತ್ತಿದೆ.  ಸಚಿವ ಸುಧಾಕರ್ ಮೆಡಿಕಲ್ ಓದಿರೋದ್ರಿಂದ ಸ್ವಲ್ಪ ತಿಳುವಳಿಕೆ ಇರುತ್ತೆ, ಹೀಗಾಗಿ ಸುಧಾಕರ್‌ಗೆ ಸಂಪೂರ್ಣ ಇನ್‌ಚಾರ್ಜ್‌ ಕೊಡಬೇಕು ಎಂದಿದ್ದಾರೆ.

ಇನ್ನೂ ಕೊರೊನಾ ಸಂದರ್ಭದಲ್ಲಿ ಸರ್ಕಾರ ಜನರಿಗೆ ಸರಿಯಾಗಿ ಮಾಹಿತಿ ಕೊಡ್ತಿಲ್ಲ ಅಂತ ಸಿದ್ದರಾಮಯ್ಯ ಆರೋಪಿಸಿದ್ದಾರೆ.  ವಿರೋಧ ಪಕ್ಷದವರಿಗೂ ಏನೂ ತಿಳಿಯುತ್ತಿಲ್ಲ, ಸರ್ಕಾರದಲ್ಲೇ ಸಮನ್ವಯತೆ ಇಲ್ಲ ಎಂದು ಟೀಕಿಸಿದ್ದಾರೆ.  ಮಡಿವಾಳ. ನೇಕಾರ. ಟ್ಯಾಕ್ಸಿ ಡ್ರೈವರ್‌ಗಳಿ ಇನ್ನೂ ಒಂದು ರೂಪಾಯಿ ಕೂಡ ಕೊಟ್ಟಿಲ್ಲ, ಏಳೂವರೆ ಲಕ್ಷ ಜನಕ್ಕೆ ಕೊಡ್ತೀನಿ ಅಂತ ಹೇಳದ್ರು, ಲಾಕ್‌ ಡೌನ್ ಸಮಯದಲ್ಲೇ ಕೊಡಬೇಕಾಗಿತ್ತು, ಇನ್ನೂ ಕೊಟ್ಟಿಲ್ಲ ನಾವು ಎರಡುಮೂರು ಬಾರಿ ಭೇಟಿಯಾಗಿ ಸಿಎಂಗೆ ಹೇಳಿದ್ದೀವಿ ಆದ್ರೆ, ಒಂದು ಕೆಲಸವೂ ಆಗಿಲ್ಲ ಅಂತ ಟೀಕಿಸಿದ್ದಾರೆ.

Advertisement

ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ