Featured
ಸಿದ್ದರಾಮಯ್ಯಗೆ ಮತ್ತೆ ಮುಖ್ಯಮಂತ್ರಿ ಯೋಗ..! : ಕೋಡಿ ಶ್ರೀ ಭವಿಷ್ಯ ನಿಜವಾಗುತ್ತಾ..?
ಹಾಸನ : ಮಧ್ಯಂತರ ಚುನಾವಣೆ, ಬಿಜೆಪಿ ಸರ್ಕಾರ ಮೂರು ನಾಲ್ಕು ತಿಂಗಳಲ್ಲಿ ಪತನ ಅಂತ ಭವಿಷ್ಯ ನುಡಿದಿರೋ ಕೋಡಿ ಮಠದ ಶ್ರೀ, ಇದೀಗ ಸಿದ್ದರಾಮಯ್ಯಗೆ ಶುಭ ಸುದ್ದಿ ನೀಡಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಶೀಘ್ರವೇ ಶುಭ ಸುದ್ದಿ ಕಾದಿದೆ ಎಂದು ಕೋಡಿ ಶ್ರೀ ಭವಿಷ್ಯ ನುಡಿದಿದ್ದಾರೆ. ಸಿದ್ದರಾಮಯ್ಯ ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿ ಆಗಬಹುದು ಎಂದು ಪರೋಕ್ಷವಾಗಿ ಕೋಡಿ ಶ್ರೀ ಭವಿಷ್ಯ ನುಡಿದಿದ್ದು, ಕೋಡಿ ಶ್ರೀ ಭವಿಷ್ಯ ನಿಜವಾಗುತ್ತಾ ಅನ್ನೋ ಕುತೂಹಲ ಮೂಡಿಸಿದೆ.
ಹಾಸನದಲ್ಲಿ ಮಾತ್ನಾಡಿರೋ ಕೋಡಿ ಶ್ರೀಗಳು, ನಾನು ಹಿಂದೆಯೇ ಹೇಳಿದ್ದೆ, ಕಂಬಳಿ ಹಾಸೀತು, ಅಂಬಳಿ ಹಳಸೀತು. ಸಿದ್ದು ಗದ್ದುಗೆ ಹಾಸೀತು ಎಂದಿದ್ದೆ. ಅದರಂತೆ ಸಿದ್ದರಾಮಯ್ಯ ಈ ಹಿಂದೆ ಸಿಎಂ ಆಗಿದ್ದರು. ಈಗ ಮತ್ತೆ ಸಿದ್ದರಾಮಯ್ಯಗೆ ಶುಭ ಸೂಚನೆ ಇದೆ ಎಂದಿದ್ದಾರೆ. ಅಲ್ಲದೆ, ರಾಜ್ಯ ಗದ್ದುಗೆ ಹಿಡಿದಾಯ್ತು, ಇನ್ನು, ದೆಹಲಿ ಗದ್ದುಗೆ ಹಿಡಿಯಿರಿ ಎಂದು ಸಿದ್ದರಾಮಯ್ಯಗೆ ಸಲಹೆ ನೀಡುತ್ತಿದ್ದೇನೆ ಎಂದು ಕೋಡಿ ಶ್ರೀಗಳು ಹೇಳಿದ್ರು.
ಸಿದ್ದರಾಮಯ್ಯ ಸಾಮಾನ್ಯವಾಗಿ ಜ್ಯೋತಿಷ್ಯವನ್ನ ನಂಬೋದಿಲ್ಲ. ಆದ್ರೆ, ಕೋಡಿ ಶ್ರೀ ಹೇಳಿಕೆಯನ್ನ ಯಾವ ರೀತಿ ಸ್ವೀಕರಿಸ್ತಾರೋ ನೋಡೋಣ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?