Featured
ಸಿದ್ದರಾಮಯ್ಯಗೆ ತಪ್ಪಿದ ಕಾವೇರಿ, ಯಡಿಯೂರಪ್ಪ ಮಡಿಲಿಗೆ : ಸಿದ್ದು ಮನವಿಗೆ ಬಿಎಸ್ವೈ ಡೋಂಟ್ಕೇರ್..!
ಬೆಂಗಳೂರು : ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬೇಡಿಕೆಗೆ ಸಿಎಂ ಯಡಿಯೂರಪ್ಪ ಡೋಂಟ್ಕೇರ್ ಎಂದಿದ್ದಾರೆ. ಸದ್ಯ ಸಿದ್ದರಾಮಯ್ಯ ವಾಸವಿದ್ದ ಕಾವೇರಿ ನಿವಾಸವನ್ನ ಖಾಲಿ ಮಾಡುವಂತೆ ಸೂಚನೆ ನೀಡಲಾಗಿದೆ. ಸಿದ್ದರಾಮಯ್ಯಗೆ ರೇಸ್ ವ್ಯೂ ಕಾಟೇಜ್ -೨ ವಸತಿ ಗೃಹವನ್ನ ಸರ್ಕಾರ ಹಂಚಿಕೆ ಮಾಡಿದೆ.
ಸಿದ್ದರಾಮಯ್ಯ ಪ್ರತಿಪಕ್ಷ ನಾಯಕರಾಗಿದ್ದು, ಈ ಹಿಂದೆ ವಾಸವಿದ್ದ ಕಾವೇರಿ ನಿವಾಸವೇಬೇಕೆಂದು ಸಿಎಂ ಗೆ ಪತ್ರ ಮುಖೇನ ಮನವಿ ಮಾಡಿದ್ರು. ಆದ್ರೆ, ಸಿದ್ದರಾಮಯ್ಯ ಅವ್ರಿಗೆ ರೇಸ್ಕೋರ್ಸ್ ರಸ್ತೆ ಬಳಿಯ ರೇಸ್ ವ್ಯೂ ಕಾಟೇಜ್ ೨ ನೀಡಲಾಗಿದೆ. ಇದಕ್ಕೂ ಮುನ್ನ, ಸಿಎಂ ಯಡಿಯೂರಪ್ಪ ಅವರಿಗೆ ರೇಸ್ ವ್ಯೂ ಕಾಟೇಜ್ 2 ಹಂಚಿಕೆ ಮಾಡಲಾಗಿತ್ತು.
ಸಿದ್ದರಾಮಯ್ಯ ಕಾವೇರಿ ನಿವಾಸ ಖಾಲಿ ಮಾಡ್ತಿದ್ದಂತೆ, ಸಿಎಂ ಯಡಿಯೂರಪ್ಪ ಕಾವೇರಿ ನಿವಾಸದಲ್ಲಿ ವಾಸ್ತವ್ಯ ಇರಲಿದ್ದಾರೆ. ಉಪಚುನಾವಣೆ ಮುಗಿಯೋವರೆಗಾದರೂ ಕಾವೇರಿ ನಿವಾಸ ಕೊಡಿ ಎಂದು ಸಿದ್ದು ಬೇಡಿಕೆ ಇಟ್ಟಿದ್ದರು. ಆದ್ರೆ, ಇಲ್ಲ ಆಗೋದಿಲ್ಲ, ಖಾಲಿ ಮಾಡಿ ಎಂದು ಸುಧಾರಣಾ ಇಲಾಖೆ ಸಿಬ್ಬಂದಿ ಹೇಳಿದ್ದಾರೆ. ಕಾವೇರಿ ನಿವಾಸ ಸಿದ್ದರಾಮಯ್ಯಗೆ ಒಂದ್ ರೀತಿ ಅದೃಷ್ಠದ ನಿವಾಸ ಎನ್ನುವಂತಿತ್ತು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?