Featured
ಶಾರ್ಟ್ ಫಿಲ್ಮ್ ಮಾಡಿದ ಡೈರೆಕ್ಟರ್ ಗೆ ಚಾನ್ಸ್ ಕೊಟ್ಟ ಲೂಸ್ ಮಾದ..!
![](https://risingkannada.com/wp-content/uploads/2020/07/Akataka2-1.jpg)
ರೈಸಿಂಗ್ ಕನ್ನಡ:
ಯೋಗೇಶ್… ಅಚಾನಕ್ ಆಗಿ ನಿರ್ದೇಶಕ ಸುಕ್ಕ ಸೂರಿ ಕಣ್ಣಿಗೆ ಬಿದ್ದು, ಸಿನಿ ದುನಿಯಾಗೆ ಬಲಗಾಲಿಟ್ಟ ಪ್ರತಿಭೆ. ಯೋಗಿ ಚಿಕ್ಕ ವಯಸ್ಸಿನಲ್ಲಿಯೇ ನೇಮು, ಫೇಮು ಪಡೆದುಕೊಂಡ ನಟ. ಖಳನಟನಾಗಿ ಎಂಟ್ರಿಕೊಟ್ಟವರು ಹೀರೋ ಆದ್ರು. ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡ್ರು. ಮೊದ ಮೊದಲು ಗೆದ್ದರು, ನಂತ್ರ ಸೋಲಿನಲ್ಲಿ ಬಿದ್ದರೂ ಮೈಕೊಡವಿ ಎದ್ದರು. ಇಂತಿಪ್ಪ ಯೋಗಿ 30ನೇ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ.
![](https://risingkannada.com/wp-content/uploads/2020/07/Akataka-1024x1024.jpg)
ಬಹಳ ಬೇಗ ಸಿನಿಪ್ರವರ್ತಮಾನಕ್ಕೆ ಬಂದು, ಸಾಲು ಸಾಲು ಸಿನಿಮಾದಲ್ಲಿ ಮಿಂಚಿದ ಯೋಗಿ, ಸದ್ಯ ಒಂದು ಬಿಗ್ ಬ್ರೇಕ್ ಗಾಗಿ ಕಾಯುತ್ತಿದ್ದಾರೆ. ಈಗಾಗ್ಲೇ ಹತ್ಹತ್ರಾ 30 ಸಿನಿಮಾಗಳನ್ನ ಮಾಡಿರುವ ಲೂಸ್ ಮಾದ ಅವರ ಬಳಿ ಅನೇಕ ಹೊಸ ಹೊಸ ಸಿನಿ ಪ್ರಾಜೆಕ್ಟ್ಗಳಿವೆ. ‘ಒಂಬತ್ತನೇ ದಿಕ್ಕು’ , ‘ಪರಿಮಳ ಲಾಡ್ಜ್’ ಸಿನಿಮಾದ ಶೂಟಿಂಗ್ನಲ್ಲಿ ಬಿಜಿಯಾಗಿದ್ದಾರೆ.
ಈ ಮಧ್ಯೆ ನಾಗರಾಜ್ ಸೋಮಯಾಜಿ ಅನ್ನೋ ಹೊಸ ಪ್ರತಿಭೆಯ ನಿರ್ದೇಶನದಲ್ಲಿ ಸಿನಿಮಾ ಮಾಡಲು ಸಜ್ಜಾಗುತ್ತಿದ್ದಾರೆ ಯೋಗಿ. ಆ ಸಿನಿಮಾವೇ ‘ಅಕಟಕಟ’. ಯೋಗಿ ಚಾನ್ಸ್ ಕೊಟ್ಟಿರುವ ನಾಗರಾಜ್ ಸಿನಿಮಾ ಫ್ಯಾಷನ್ ಇರೋ ಯುವ ಪ್ರತಿಭೆ. ಬೆಸಿಕಲಿ ಕ್ಯಾಮೆರಾ ಮ್ಯಾನ್ ಕಮ್ ರಂಗಕರ್ಮಿ. ಬೆಸ್ಟ್ ಆ್ಯಕ್ಟರ್ ಅನ್ನೋ ವಂಡರ್ಫುಲ್ ಮೈಕ್ರೋ ಶಾರ್ಟ್ ಫಿಲ್ಮ್ ಮಾಡಿದ್ರು ನಾಗರಾಜ್ ಸೋಮಯಾಜಿ. ಆ ಶಾರ್ಟ್ ಫಿಲ್ಮ್ ನೋಡಿ ಯೋಗಿ ‘ಅಕಟಕಟ’ ಚಿತ್ರಕ್ಕೆ ಸೈ ಎಂದಿದ್ದಾರೆ.
ಸದ್ಯಕ್ಕೆ ಕೊರೋನಾ, ಲಾಕ್ ಡೌನ್ ಸಮಸ್ಯೆಗಳು ಇರೋದ್ರಿಂದ ಶೂಟಿಂಗ್ ಅಖಾಡಕ್ಕೆ ಇಳಿಯದೆ, ಒಂದಷ್ಟು ಹೊಸ ಬಗೆಯ ಕಥೆಗಳನ್ನ ಕೇಳುತ್ತಿದ್ದಾರೆ ಯೋಗಿ. ಆದಷ್ಟು ಬೇಗ ಗೆಲುವಿನ ಲಯಕ್ಕೆ ಲೂಸ್ ಮಾದ ಬರ್ಲಿ. ಅವರ ಸಿನಿ ಯೋಗ ಬದಲಾಗಲಿ ಅಂತ ಹಾರೈಸೋಣ.
![](https://risingkannada.com/wp-content/uploads/2020/04/RISING-KANNADA-logo-150px.jpg)
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?