Featured
ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ ಶಿವರಾಜ್ ತಂಗಡಗಿ – ಕೊಪ್ಪಳದಲ್ಲಿ ಭಾರೀ ಪ್ರತಿಭಟನೆ

ರೈಸಿಂಗ್ ಕನ್ನಡ :
ನಾಗರಾಜ್ ವೈ, ಕೊಪ್ಪಳ

ಡೀಸೆಲ್ – ಪೆಟ್ರೋಲ್ ಬೆಲೆ ಹೆಚ್ಚಾಗುತ್ತಲೇ ಇದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದರೆ ಕಾರ್ಯಕರ್ತರಿಗೆ ಪೊಲೀಸರು ಟಾರ್ಚರ್ ಮಾಡ್ತಿದ್ದಾರೆ, ಇದು ಮುಂದುವರೆದರೆ ಪೊಲೀಸ್ ಠಾಣೆ ಮುಂದೆಯೂ ಹೋರಾಟ ಮಾಡ್ತೀವಿ ಎಂದು ಶಿವರಾಜ್ ತಂಗಡಗಿ ಎಚ್ಚರಿಕೆ ನೀಡಿದ್ದಾರೆ.
ಪೆಟ್ರೋಲ್- ಡಿಸೇಲ್ ಬೆಲೆ ಏರಿಕೆ ಖಂಡಿಸಿ ನಡೆದ ಧರಣಿ ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವರು, ಚೀನಾ- ಭಾರತದ ಸೈನಿಕರ ಸಂಘರ್ಷ ವಿಚಾರಾಗಿ ಕೇಂದ್ರದ ಧ್ವಂಧ್ವ ಹೇಳಿಕೆಗಳನ್ನ ಪ್ರಶ್ನಿಸಿದ್ದಾರೆ. ಒಂದು ಕಡೆ ರಾಜನಾಥ ಸಿಂಗ್ ಚೀನಾ ಸೈನಿಕರು ಗಡಿ ಪ್ರವೇಶ ಮಾಡಿದ್ರು ಎಂದಿದ್ದಾರೆ, ಆದ್ರೆ, ಪ್ರಧಾನಿ ಮೋದಿ ಮಾತ್ರ ಚೀನಾ ಸೈನಿಕರು ಗಡಿ ಪ್ರವೇಶ ಮಾಡಿಲ್ಲ ಎನ್ನುತ್ತಿದ್ದಾರೆ. ಚಿತ್ರ ನಟರ ಸಾವಿಗೆ ತಕ್ಷಣದಲ್ಲೇ ಟ್ವೀಟ್ ಮಾಡೋ ಮೋದಿ, ಸೈನಿಕರ ಸಾವಿನ ವಿಚಾರದಲ್ಲಿ ಮಾತ್ರ ನಿಧಾನವಾಗಿ ಪ್ರತಿಕ್ರಿಯಿಸುತ್ತಾರೆ ಎಂದು ಆರೋಪಿಸಿದ್ದಾರೆ.
ಇನ್ನೂ ಕೊಪ್ಪಳದಲ್ಲಿ ಶಾಸಕರು, ಮಂತ್ರಿಗಳು ವಸೂಲಿಗೆ ನಿಂತಿದ್ದಾರೆ. ಕಾಮಗಾರಿ ವೀಕ್ಷಣೆ ನೆಪದಲ್ಲಿ ಲೂಟಿ ಮಾಡ್ತಿದ್ದಾರೆ, ಬಿಜೆಪಿಗೆ ತಾಖತ್ ಇದ್ದರೆ ದಾಖಲೆ ಸಮೇತ ಚರ್ಚೆಗೆ ಬರಲಿ ಎಂದ ಆಹ್ವಾನಿಸಿದ್ದಾರೆ. ದೇಶದಲ್ಲಿ ಪ್ರಜಾಪ್ರಭುತ್ವ ಇದೆಯಾ ಇಲ್ಲವೋ ಅನ್ನೋ ಅನುಮಾನ ಮೂಡಿದೆ. ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಮುಟ್ಟಿದರೆ ಎಲ್ಲ ಪೊಲೀಸ್ ಠಾಣೆ ಮುಂದೆ ಧರಣಿ ಮಾಡ್ತಿವಿ ಎಂದ ಹೇಳಿದ್ದಾರೆ.
You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?















