Connect with us

Featured

3 ರೂಪಾಯಿ 46 ಪೈಸೆ ಸಾಲ ಕಟ್ಟಲು 15 ಕಿ.ಮೀ ನಡೆದ ಶಿವಮೊಗ್ಗ ರೈತ

ರೈಸಿಂಗ್ ಕನ್ನಡ :

ಶಿವಮೊಗ್ಗ : ನಮ್ಮ ಬ್ಯಾಂಕಿಂಗ್​ ವ್ಯವಸ್ಥೆ ಹೇಗಿದೆ ಅನ್ನೋದಕ್ಕೆ ಇದು ಕಣ್ಮುಂದೆ ಇರೋ ಸಾಕ್ಷಿ. ಅದರಂತೆ ರೈತರ ಬದುಕು ಎಷ್ಟು ದುಸ್ಥರ, ಶೋಚನೀಯವಾಗಿದೆ ಅನ್ನೋದಕ್ಕೂ ಇದುವೇ ಸಾಕ್ಷಿ.

ಭಾರತದಲ್ಲಿ ಸಾವಿರಾರು ಕೋಟಿ, ಲಕ್ಷಾಂತರ ಕೋಟಿ ಸಾಲ ಮಾಡಿ ಕಟ್ಟದೆ, ಲೂಟಿ ಮಾಡ್ಕೊಂಡು ಐಶಾರಾಮಿ ಜೀವನ ನಡೆಸ್ತಿರೋ ಉದ್ಯಮಿಗಳು, ರಾಜಕಾರಣಿಗಳು ಇದ್ದಾರೆ. ಅವರೆಲ್ಲಾ ದಿಲ್​ ದಾರಾಗಿಯೇ ಓಡಾಡಿಕೊಂಡು, ವಿದೇಶದಲ್ಲಿ ಟೂರ್ ಮಾಡ್ಕೊಂಡಿದ್ದಾರೆ. ಆದ್ರೆ, ರೈತರ ಸ್ಥಿತಿ ಹೇಗಿದೆ ನೋಡಿ.

ನೀವು ಸಾಲ ಬಾಕಿ ಉಳಿಸಿಕೊಂಡಿದ್ದೀರಿ, ತಕ್ಷಣ ಬ್ಯಾಂಕಿಗೆ ಬನ್ನಿ ಅಂತ ಬ್ಯಾಕಿನಿಂದ ರೈತನಿಗೆ ಫೋನ್​ ಹೋಗುತ್ತೆ. ತಕ್ಷಣ ಗಾಬರಿಗೊಂಡ ರೈತ, ತಾನಿದ್ದ ಸ್ಥಳದಿಂದ ಹೊರಟು ಬರ್ತಾನೆ. ತನ್ನ ಬಳಿ ಬೈಕ್​ ಇಲ್ಲ, ಸೈಕಲ್​ ಇಲ್ಲ.. ಬಸ್ಸು, ಆಟೋನೂ ಇಲ್ಲ. ಸೋ, ಬರೋಬ್ಬರಿ 15 ಕಿ.ಮೀ. ನಡೆದುಕೊಂಡು ಬರ್ತಾನೆ. ಬ್ಯಾಂಕ್​ಗೆ ಬಂದು ಎಷ್ಟು ಸಾಲ ಅಂತ ವಿಚಾರಿಸಿದ್ರೆ ಗೊತ್ತಾಗುತ್ತೆ. ಕೇವಲ 3 ರೂಪಾಯಿ 46 ಪೈಸೆ ಬಾಕಿ ಇದೆ ಎಂದು.

ಈ ಘಟನೆ ವರದಿಯಾಗಿರೋದು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ನಿಟ್ಟೂರು ಎಂಬಲ್ಲಿ. ನಿಟ್ಟೂರಿನ ಕೆನರಾ ಬ್ಯಾಂಕ್​ ಈ ರೀತಿಯ ಯಡವಟ್ಟು ಮಾಡಿದೆ. ನಿಟ್ಟೂರು ಸಮೀಪದ ಅಮಡೆ ಗ್ರಾಮದ ರೈತ ಲಕ್ಷ್ಮೀನಾರಾಯಣ, ಕೆನರಾ ಬ್ಯಾಂಕ್​ನಲ್ಲಿ 25 ಸಾವಿರ ಸಾಲ ಪಡೆದಿದ್ರು. ಕೆಲವು ದಿನಗಳ ಹಿಂದ 32 ಸಾವಿರ ಸಾಲ ಮನ್ನ ಆಗಿತ್ತು. ಉಳಿದ 3 ಸಾವಿರ ಕೆಲವು ದಿನಗಳ ಹಿಂದೆಯೇ ಕಟ್ಟಿದ್ರು. ಆದ್ರೆ, ಶುಕ್ರವಾರ ದಿಢೀರ್​ ಅಂತ ಬ್ಯಾಂಕ್​ನಿಂದ ಫೋನ್​ ಬರ್ತಿದ್ದಂತೆ ಗಾಬರಿಯಾಗಿದ್ರು ರೈತ.

ಇದೇನಿದು ಕೇವಲ 3 ರೂಪಾಯಿ 46 ಪೈಸೆಗೆ ಇಷ್ಟೊಂದು ಗಾಬರಿ ಮಾಡಿ, 15 ಕಿಲೋ ಮೀಟರ್​​ ನಡೆಸಿದ್ರೀ ಅಂತ ಬ್ಯಾಂಕ್​ನವರಿಗೆ ಕೇಳಿದ್ರೆ, ಅವರದ್ದೇ ಬೇರೆ ಸಮಜಾಯಿಸಿ. ಬ್ಯಾಂಕ್​​​ನಲ್ಲಿ ಆಡಿಟ್​ ನಡೀತಿದೆ. ಹೀಗಾಗಿ ಲಕ್ಷ್ಮೀನಾರಾಯಣ ಅವರ ಸಾಲ ರಿನಿವಲ್ ಮಾಡಲು ತುರ್ತಾಗಿ ಸಹಿಯ ಅಗತ್ಯವಿತ್ತು. ಬ್ಯಾಂಕ್​ ನಿಯಮದಂತೆ ಬಾಕಿ ಇರೋ 3.46 ರೂ ಕಟ್ಟಿಸಿಕೊಂಡು ಸಹಿ ಪಡೆಸಿದ್ದೇವೆ ಅಂತ ಕೆನರಾ ಬ್ಯಾಂಕ್ ನಿಟ್ಟೂರು ಶಾಖೆ ಮ್ಯಾನೇಜರ್​ ಎಲ್​. ಪಿಂಗ್ವಾ ಹೇಳಿದ್ದಾರೆ.

ಇನ್ನು, ರೈತ ಲಕ್ಷ್ಮೀನಾರಾಯಣ ಅವರನ್ನ ಮಾತನಾಡಿಸಿದ್ರೆ, ಬ್ಯಾಂಕ್​ ನಿಂದ ಫೋನ್ ಬಂದಾಗ ಗಾಬರಿಯಾಯ್ತು. ಆದ್ರೆ, ಕೇವಲ 3.46 ರೂಪಾಯಿ ಬಾಕಿ ಇದೆ, ಅದನ್ನು ಕಟ್ಟಿ ಎಂಬ ಸಿಬ್ಬಂದಿಯ ಮಾತು ಕೇಳಿ ಆಶ್ಚರ್ಯವಾಯಿತು ಎಂದಿದ್ದಾರೆ. ಕೇವಲ 3.46 ರೂಪಾಯಿಗೆ 15 ಕಿಲೋ ಮೀಟರ್​ ನಡೆಯುವಂತೆ ಮಾಡಿದ ಬ್ಯಾಂಕಿನವರ ವರ್ತನೆ ನೋವು ತಂದಿದೆ ಅಂತ ರೈತ ಲಕ್ಷ್ಮೀನಾರಾಯಣ ಬೇಸರ ಹೊರಹಾಕಿದ್ದಾರೆ.

Advertisement
ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ