Featured
ನಡುಗಡ್ಡೆಯಲ್ಲಿ ಸಿಲುಕಿದ ಕುರಿಗಾಯಿ ರಕ್ಷಣೆ- NDRF ಸಿಬ್ಬಂದಿಗೆ ಜೈಕಾರ, ಅಭಿನಂದನೆ
![](https://risingkannada.com/wp-content/uploads/2020/08/NDRF-yadgiri-1.jpg)
ರೈಸಿಂಗ್ ಕನ್ನಡ :
ಯಾದಗಿರಿ:
ಕೊನೆಗೂ ನಡುಗಡ್ಡೆಯಲ್ಲಿ ಸಿಲುಕಿದ ಕುರಿಗಾಯಿಯನ್ನು ರಕ್ಷಣೆ ಮಾಡಿದ ಎನ್ ಡಿ ಆರ್ ಎಪ್ ತಂಡದ ಸಿಬ್ಬಂದಿಗಳಿಗೆ ಇಲ್ಲಿನ ಸ್ಥಳಿಯರಿಂದ ಜೈಕಾರ ಅಭಿನಂಧಿಸಿದ್ದಾರೆ.
ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ಐಬಿ ತಾಂಡದ ಸಮೀಪ ಕೃಷ್ಣಾ ನದಿ ಪ್ರವಾಹದಲ್ಲಿ ಸಿಲುಕಿದ ಕುರಿಗಾಯಿಯನ್ನ NDRF ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
ಕಳೆದ ಮೂರು ದಿನಗಳಿಂದ ಕುರಿಗಾಯಿ 230 ಕುರಿಗಳೊಂದಿಗೆ ನಡುಗಡ್ಡೆಯಲ್ಲಿ ಸಿಲುಕಿದ್ದ. ಈಗ ಕುರಿಗಾಯಿ ಟೋಪಣ್ಣ ಹಾಗೂ ಆತನ ಸಾಕು ನಾಯಿಯನನ್ ರಕ್ಷಣಾ ಸಿಬ್ಬಂದಿ ಕರೆತಂದಿದ್ದಾರೆ. 230 ಕುರಿಗಳನ್ನ ನಡುಗಡ್ಡೆಯಲ್ಲೆ ಬಿಟ್ಟಿದ್ದಾರೆ.
![Puranik Full](https://risingkannada.com/wp-content/uploads/2020/07/full-plate.jpg)
ಕುರಿಗಳನ್ನು ಬಿಟ್ಟು ಬರುವುದಿಲ್ಲ ಎಂದು ಹಟ ಹಿಡಿದಿದ್ದ ಕುರಿಗಾಯಿಯನ್ನು ಮನವೋಲೀಸಿ ಕರೆತರಲಾಗಿದೆ. 2 ಲಕ್ಷ ಕ್ಯೂಸೆಕ್ಸ್ ನೀರಿನಲ್ಲಿ ಬೋಟ್ ಮೂಲಕ ಹೋಗಿ ಕುರಿಗಾಯಿಯನ್ನು ಕರೆತಂದಿರುವುದಕ್ಕೆ NDRF ಸಿಬ್ಬಂದಿಗಳಿಗೆ ಎಲ್ಲಡೆ ಪ್ರಶಂಸೆ ವ್ಯಕ್ತವಾಗ್ತಿದೆ. ಅಲ್ಲದೆ ಶಾಸಕ ರಾಜುಗೌಡ ಕೂಡ ಬೆಳಿಗ್ಗೆಯಿಂದ ಕಾರ್ಯಚರಣೆ ಮುಗಿಯುವವರೆಗೂ ಸ್ಥಳದಲ್ಲೆ ಇದ್ದು ಕುರಿಗಾಯಿ ರಕ್ಷಣೆಗೆ ಕಾರಣವಾಗಿದ್ದಾರೆ.
NDRF ತಂಡದ ಸಿಬ್ಬಂದಿಗೆ ಗ್ರಾಮಸ್ಥರು ಜೈಕಾರ ಹಾಕಿದ್ರೆ, ಇನ್ನೂ ಶಾಸಕ ರಾಜುಗೌಡ ರಕ್ಷಣೆ ಸಿಬ್ಬಂದಿಗೆ ಸನ್ಮಾನಿಸಿ ಅವರ ಕಾರ್ಯಕ್ಕೆ ಧನ್ಯವಾದ ಅರ್ಪಿಸಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?