Featured
ಸ್ವಾಭಿಮಾನಿ ಹೆಸರಲ್ಲಿ ಶರತ್ ಬಚ್ಚೇಗೌಡ ಸ್ಪರ್ಧೆ : 30ರಂದು ನಾಮಿನೇಷನ್, MTBಗೆ ಶಾಕ್
ಹೊಸಕೋಟೆ : ಬೈ ಎಲೆಕ್ಷನ್ ಕಣ ರಂಗೇರಿದ್ದು, ಬಿಜೆಪಿಗೂ ಬಂಡಾಯದ ಬಿಸಿ ಜೋರಾಗಿಯೇ ಕಾಡ್ತಿದೆ. ಚಿಕ್ಕಬಳ್ಳಾಪುರ ಸಂಸದ ಬಿ.ಎನ್. ಬಚ್ಚೇಗೌಡ ಪುತ್ರ ಶರತ್ ಬಚ್ಚೇಗೌಡ ಹೊಸಕೋಟೆ ಕ್ಷೇತ್ರದಿಂದ ಕಣಕ್ಕೆ ಇಳಿಯೋದು ಪಕ್ಕಾ ಆಗಿದೆ. ಇವತ್ತು ಬೆಂಡಿಗಾನಹಳ್ಳಿಯಲ್ಲಿ ನಡೆದ ಮುಖಂಡರ ಸಭೆಯಲ್ಲಿ ಸ್ಪರ್ಧೆ ಕುರಿತು ಶರತ್ ಬಚ್ಚೇಗೌಡ ಘೋಷಣೆ ಮಾಡಿದ್ರು.
ಇದೇ ತಿಂಗಳ 30ರಂದು ನಾಮಿನೇಷನ್ ಹಾಕೋದಾಗಿ ಘೋಷಣೆ ಮಾಡಿದ ಶರತ್ ಬಚ್ಚೇಗೌಡ, ಪಕ್ಷೇತರವಾಗಿ ಸ್ಪರ್ಧೆ ಮಾಡೋದಾಗಿ ಹೇಳಿದ್ರು. ಒಂದ್ವೇಳೆ ಬಿಜೆಪಿ ಟಿಕೆಟ್ ನೀಡಿದರೆ ಬಿಜೆಪಿ ಅಭ್ಯರ್ಥಿ ಆಗುತ್ತೇನೆ. ಇಲ್ಲದೇ ಇದ್ರೆ, ಪಕ್ಷೇತರ ಅಭ್ಯರ್ಥಿ ಆಗ್ತೇನೆ ಎಂದು ಶರತ್ ಹೇಳಿದ್ರು. ಈ ಮೂಲಕ ಕಾಂಗ್ರೆಸ್ನ ಅನರ್ಹ ಶಾಸಕರ ಎಂಟಿಪಿ ನಾಗರಾಜ್ಗೆ ಸಡ್ಡು ಹೊಡೆದ್ರು ಶರತ್.
ಮುಖಂಡರ ಸಭೆ ಬಳಿಕ ಮಾತ್ನಾಡಿದ ಶರತ್ ಬಚ್ಚೇಗೌಡ, ಸಿಎಂ ಯಡಿಯೂರಪ್ಪ ಅವರ ಮೇಲೆ ಅಪಾರವಾದ ಗೌರವವಿದೆ. ಆದ್ರೆ, ಸ್ಥಳೀಯ ಕಾರ್ಯಕರ್ತರು, ಮುಖಂಡರ ನಿರ್ಧಾರದಂತೆ ನಾನು ಮುಂದೆ ನಡೆಯೋದಾಗಿ ಹೇಳಿದ್ರು. ಬೆಂಡಿಗಾನಹಳ್ಳಿಯಲ್ಲಿ ನಡೆದ ಸ್ವಾಭಿಮಾನಿ ಕಾರ್ಯಕರ್ತರ ಸಭೆಯಲ್ಲಿ ಶರತ್ ಬಚ್ಚೇಗೌಡ ಸ್ಪರ್ಧೆ ಖಚಿತವಾಯ್ತು.
ಸಭೆ ಬಳಿಕ ಮಾತನಾಡಿದ ಹೊಸಕೋಟೆ ತಾಲೂಕು ಬಿಜೆಪಿ ಅಧ್ಯಕ್ಷ ಸಿ.ಮಂಜುನಾಥ್, 30ರಂದು ನಾಮಿನೇಷನ್ ಹಾಕೋದಾಗಿ ತಿಳಿಸಿದ್ರು. ನಾಮಿನೇಷನ್ಗೆ ಸಾವಿರಾರು ಬೆಂಬಲಿಗರು ಹಾಜರಿರಲು ಸೂಚಿಸಲಾಯ್ತು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?