Featured
ಸಿಂಹಗಳ ಎದುರು ಗುಳ್ಳೇನರಿ ರಾಜಕೀಯ ಕುತಂತ್ರ ಮಾಡ್ತಿದೆ : MTB ನಾಗರಾಜ್ಗೆ ಶರತ್ ಬಚ್ಚೇಗೌಡ ವ್ಯಂಗ್ಯ
![](https://risingkannada.com/wp-content/uploads/2019/09/images-43.jpeg)
ಹೊಸಕೋಟೆ : ವ್ಯಕ್ತಿಗಳ ನಡುವಿನ ಕದನಕ್ಕೆ ಸದಾ ವೇದಿಕೆ ಆಗಿರೋ ಹೊಸಕೋಟೆ ಕ್ಷೇತ್ರ ಮತ್ತೊಮ್ಮೆ ರಾಜ್ಯ ರಾಜಕಾರಣ ಗಮನ ಸೆಳೆಯುವಂತಿದೆ. ಕಾಂಗ್ರೆಸ್ ಅನರ್ಹ ಶಾಸಕ ಎಂಟಿಬಿ ನಾಗರಾಜ್, ಬಿಜೆಪಿ ಸೇರ್ಪಡೆ ಅಥವಾ ಬಿಜೆಪಿ ಟಿಕೆಟ್ಗಾಗಿ ಕಾತರದಿಂದ ಇದ್ದಾರೆ. ಸಿಎಂ ಯಡಿಯೂರಪ್ಪ ಕೂಡ ಎಂಟಿಬಿ ನಾಗರಾಜ್ಗೆ ಬಿಜೆಪಿ ಟಿಕಟ್ ನೀಡೋದಾಗಿ ಹೇಳಿದ್ದಾರೆ. ಆದ್ರೆ, ಬಿಜೆಪಿ ಅಭ್ಯರ್ಥಿ ಶರತ್ ಬಚ್ಚೇಗೌಡ ಹಾಗೂ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಇದಕ್ಕೆ ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದಾರೆ.
ಇದೇ ವಿಚಾರವಾಗಿ ಇವತ್ತು ಸ್ವಾಭಿಮಾನಿ ಕಾರ್ಯಕರ್ತರ ಸಭೆ ನಡೀತು. ಸಭೆ ಬಳಿಕ ಮಾತ್ನಾಡಿದ ಶರತ್ ಬಚ್ಚೇಗೌಡ, ಅನರ್ಹ ಶಾಸಕ ಎಂಟಿಬಿ ನಾಗರಾಜ್ ಅವರನ್ನ ಗುಳ್ಳೇನರಿ, ನರಿಗೆ ಹೋಲಿಸಿ ವ್ಯಂಗ್ಯ ಮಾಡಿದ್ರು. 2004ರವರೆಗೆ ಹೊಸಕೋಟೆ ಕ್ಷೇತ್ರದಲ್ಲಿ ಹುಲಿ, ಸಿಂಹಗಳ ನಡುವೆ ಸ್ಪರ್ಧೆ ನಡೀತಿತ್ತು. 2004ರ ಬಳಿಕ ಹುಲಿ, ಸಿಂಹಗಳ ಮಧ್ಯೆ ಗುಳ್ಳೇನರಿ ಬಂದು ಕುತಂತ್ರ ರಾಜಕೀಯ ಮಾಡ್ತಿದೆ ಎಂದು ಹೆಸರೇಳದೇ ಎಂಟಿಬಿ ನಾಗರಾಜ್ ವಿರುದ್ಧ ವಾಗ್ದಾಳಿ ನಡೆಸಿದ್ರು.
ನಾನು ಹಣ ಮಾಡಲು ರಾಜಕೀಯ ಮಾಡ್ತಿಲ್ಲ. ನಮಗೆ ಸಾಕಷ್ಟು ಆಸೆ, ಆಮಿಷಗಳು ಬರ್ತಿವೆ. ಆದ್ರೆ, ನಾವು ಅದಕ್ಕೆ ಸೊಪ್ಪು ಹಾಕಲ್ಲ ಎಂದು ಪರೋಕ್ಷವಾಗಿ ಕಾಂಗ್ರೆಸ್ ಟಿಕೆಟ್ ಆಫರ್ ನೀಡಲು ರೆಡಿ ಇದೆ ಅಂತ ಹೇಳಿದ್ರು.
ಒಟ್ನಲ್ಲಿ ಹೊಸಕೋಟೆ ರಾಜಕೀಯ ಈ ಬಾರಿಯೂ ಜಿದ್ದಾಜಿದ್ದಿನಿಂದ ಕೂಡಿರುತ್ತೆ ಅನ್ನೋದ್ರಲ್ಲಿ ಡೌಟೇ ಇಲ್ಲ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?