Featured
ಮಧುಗಿರಿ ಜನರ ಮುತ್ತಿನಂತ ಕೆಲಸ – ಸ್ವಯಂ ಪ್ರೇರಿತ ಲಾಕ್‌ಡೌನ್ – ಎಲ್ಲೆಡೆ ಮೆಚ್ಚುಗೆಗಳ ಮಹಾಪೂರ..!
ರೈಸಿಂಗ್ ಕನ್ನಡ :
ತುಮಕೂರು :
ಪ್ರತಿನಿಧಿ : ಕೆ.ಆರ್ ಬಾಬು
ಕೊರೊನಾ ವಿರುದ್ಧ ಸಮರಕ್ಕಾಗಿ ಸರ್ಕಾರ ಸಾಕಷ್ಟು ಕ್ರಮಗಳನ್ನ ಕೈಗೊಳ್ಳುತ್ತಿದೆ. ಆದ್ರೆ, ಎಲ್ಲದರ ಮಧ್ಯೆ ಲಾಕ್‌ಡೌನ್ ಮಾಡೋದನ್ನೇ ಮರೆತುಬಿಟ್ಟಿದೆ. ಈಗಲೂ ಸಿಎಂ ಸೇರಿದಂತೆ ಹಲವು ಸಚಿವರು ರಾಜ್ಯದಲ್ಲಿ ಅಥವಾ ಬೆಂಗಳೂರಿನಲ್ಲಿ ಲಾಕ್‌ಡೌನ್ ಅವಶ್ಯಕತೆಯೇ ಇಲ್ಲ ಎಂದಿದ್ದಾರೆ. ಜನ ಮಾತ್ರ ಸ್ವಇಚ್ಛೆಯಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಅಂತ ಹೇಳುತ್ತಿದ್ದಾರೆ.
ಸರ್ಕಾರಕ್ಕೆ ವಿರುದ್ಧ ಅನ್ನುವಂತೆ, ತುಮಕೂರಿನ ಮಧುಗಿರಿಯ ಜನರೆಲ್ಲಾ ಸೇರಿ ತಾವಾಗಿಯೇ ಸ್ವಯಂ ಪ್ರೇರಿತ ಲಾಕ್‌ಡೌನ್ ಮಾಡಿದ್ದಾರೆ. ಮಧುಗಿರಿಯಲ್ಲಿ ಮೂರು ದಿನಗಳ ಕಾಲ ನಾಗರೀಕರು ಹಾಗೂ ವರ್ತಕರಿಂದ ಲಾಕ್‌ಡೌನ್ ಘೋಷಿಸಲಾಗಿದೆ. ಇಂದಿನಿಂದ ಜೂನ್ 28ರವರೆಗೂ ಲಾಕ್‌ಡೌನ್ ಹೇರಿಕೊಳ್ಳಲಾಗಿದೆ. ತಮ್ಮೂರಿಗೆ ಬಂದಿರುವ ಕೊರೊನಾ, ಯಾವುದೇ ಕಾರಣಕ್ಕೂ ಸಮುದಾಯಕ್ಕೆ ಹರಡಬಾರದು ಅನ್ನೋದೆ ಇದರ ಉದ್ದೇಶವಂತೆ. ಕಮ್ಯೂನಿಟಿ ಸ್ಪ್ರೆಡ್ ವಿರುದ್ಧದ ಲಾಕ್‌ಡೌನ್ ಇದಾಗಿದ್ದು, ಜನತೆ ಉತ್ತಮ ರೀತಿಯಲ್ಲಿ ಸ್ಪಂಧಿಸುತ್ತಿದ್ದಾರೆ.
ಅಂಗಡಿ ಮುಗಟ್ಟುಗಳನ್ನ ಬಂದ್ ಮಾಡಲಾಗಿದೆ, ಮಾರ್ಕೆಟ್, ಹೋಟೆಲ್‌ಗಳನ್ನ ಕೂಡ ಮುಚ್ಚಲಾಗಿದೆ. ಇತ್ತೀಚೆಗೆ ಮಧುಗಿರಿಯಲ್ಲಿ ಪ್ರಕರಣಗಳು ಹೆಚ್ಚಾಗುತ್ತಿರೋದ್ರಿಂದ, ಜನರೇ ಸೇರಿ ಸ್ವಯಂ ಪ್ರೇರಿತವಾಗಿ ಕೈಗೊಂಡಿರೋ ಕ್ರಮ ಇದಾಗಿದ್ದು. ಎಲ್ಲೆಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಜನರ ಈ ಕಾರ್ಯಕ್ಕೆ ಪುರಸಭೆಯೂ ಸಾಥ್ ನೀಡಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?