ಕ್ರೀಡೆ
RCB ತಂಡದಲ್ಲಿ ಅಬ್ಬರಿಸುತ್ತಿದ್ದಾನೆ ಸೆಹ್ವಾಗ್ ಸೋದರಳಿಯ!

IPL 2024: ಯಾರು ಈ ಮಯಾಂಕ್ ದಗಾರ್ ಎಂಬ ಪ್ರಶ್ನೆ ಎಲ್ಲರಲ್ಲಿಯೂ ಮೂಡಿದೆ. ಅಲ್ಲದೇ ಮಯಾಂಕ್ ದಗಾರ್ ಬಗ್ಗೆ ಅಭಿಮಾನಿಗಳು ಗೂಗಲ್ ಅಲ್ಲಿ ಹುಡುಕಲಾರಂಭಿಸಿದ್ದಾರೆ. ಆದರೆ ದಗಾರ್ ಭಾರತದ ಮಾಜಿ ಆಟಗಾರನ ಸೋದರಳಿಯ ಎಂದರೆ ಅಚ್ಚರಿಯಾಗಬಹುದು.
ಐಪಿಎಲ್ 17ನೇ ಸೀಸನ್ ಅಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈವರೆಗೆ ಆಡಿರುವ 2 ಪಂದ್ಯಗಳಲ್ಲಿ ಒಂದರಲ್ಲಿ ಸೋತು, ಇನ್ನೊಂದರಲ್ಲಿ ಗೆದ್ದು ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಇದರ ನಡುವೆ ಆರ್ಸಿಬಿ ತಂಡದ ಆ ಒಬ್ಬ ಆಟಗಾರನ ಬಗ್ಗೆ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ಚರ್ಚೆ ಆಗುತ್ತಿದೆ.
ಮಯಾಂಕ್ ದಗಾರ್ ಎಂಬ ಯುವ ಆಟಗಾರ ಇದೀಗ ಆರ್ಸಿಬಿ ತಂಡದಲ್ಲಿ ಸಖತ್ ಟ್ರೆಂಡಿಂಗ್ ಆಟಗಾರ ಆಗಿದ್ದಾರೆ. ಅವರು ಈ ಬಾರಿ ಆರ್ಸಿಬಿ ಆಡಿರುವ 2 ಪಂದ್ಯದಲ್ಲಿ ಕಣಕ್ಕಿಳಿದಿದ್ದಾರೆ. ಮಯಾಂಕ್ ದಗಾರ್ ಚೆನ್ನೈ ವಿರುದ್ಧದ ಪಂದ್ಯದಲ್ಲಿ 2 ಓವರ್ ಬೌಲಿಂಗ್ ಮಾಡಿ ಕೇವಲ 6 ರನ್ ನೀಡಿದ್ದರು. ಆದರೆ ಪಂಜಾಬ್ ಕಿಂಗ್ಸ್ ವಿರುದ್ಧ 3 ಓವರ್ ಬೌಲಿಂಗ್ ಮಾಡಿದ ದಗಾರ್ 34 ರನ್ ನೀಡಿದ್ದರು.
ಆದರೆ ಮಯಾಂಕ್ ದಗಾರ್ ಅವರ ಫೀಲ್ಡಿಂಗ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಎಲ್ಲಾ ಅಂಶಗಳು ಸೇರಿ ಇದೀಗ ಯಾರು ಈ ಮಯಾಂಕ್ ದಗಾರ್ ಎಂಬ ಪ್ರಶ್ನೆ ಎಲ್ಲರಲ್ಲಿಯೂ ಮೂಡಿದೆ. ಅಲ್ಲದೇ ಮಯಾಂಕ್ ದಗಾರ್ ಬಗ್ಗೆ ಅಭಿಮಾನಿಗಳು ಗೂಗಲ್ ಅಲ್ಲಿ ಹುಡುಕಲಾರಂಭಿಸಿದ್ದಾರೆ. ಆದರೆ ದಗಾರ್ ಭಾರತದ ಮಾಜಿ ಆಟಗಾರನ ಸೋದರಳಿಯ ಎಂದರೆ ಅಚ್ಚರಿಯಾಗಬಹುದು.
ಮಯಾಂಕ್ ದಗಾರ್ ಟೀಂ ಇಂಡಿಯಾದ ಮಾಜಿ ಓಪನರ್ ವೀರೇಂದ್ರ ಸೆಹ್ವಾಗ್ ಅವರ ಸೋದರಳಿಯ. ಮಯಾಂಕ್ ದಾಗರ್ ದೆಹಲಿಯ 27 ವರ್ಷದ ಆಲ್ ರೌಂಡರ್ ಆಟಗಾರ. ದೆಹಲಿಯಲ್ಲಿ ಜನಿಸಿದ ಮಯಾಂಕ್ ದಾಗರ್ ಶಿಮ್ಲಾ ಶಾಲೆಯಲ್ಲಿ ಓದಿದ್ದಾರೆ. ಮಯಾಂಕ್ ತಂದೆ ಜಿತೇಂದ್ರ ದಾಗರ್ ಕೂಡ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಕ್ರಿಕೆಟ್ ಆಡಿದ್ದರು.
ಪ್ರಸ್ತುತ ಮುನ್ಸಿಪಲ್ ಕಾರ್ಪೊರೇಷನ್ ಆಫ್ ದೆಹಲಿಯಲ್ಲಿ (MCD) ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದಾರೆ. ಮಯಾಂಕ್ ಟೀಂ ಇಂಡಿಯಾದ ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ಅವರ ಸೋದರಳಿಯ. ಇನ್ನು, ದಗಾರ್ ದೇಶೀಯ ಕ್ರಿಕೆಟ್ನಲ್ಲಿ ಹಿಮಾಚಲ ಪ್ರದೇಶವನ್ನು ಪ್ರತಿನಿಧಿಸುತ್ತಿದ್ದಾರೆ.

You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?