Featured
ಅಂತೂ ಇಂತೂ ಐಪಿಎಲ್ ವೇಳಾ ಪಟ್ಟಿ ಪ್ರಕಟ: ಉದ್ಘಾಟನಾ ಪಂದ್ಯದಲ್ಲಿ ಮುಂಬೈ, ಚೆನ್ನೈ ಬಿಗ್ ಫೈಟ್

ರೈಸಿಂಗ್ ಕನ್ನಡ:
ನ್ಯೂಸ್ ಡೆಸ್ಕ್:
ಭಾರೀ ಕುತೂಹಲ ಕೆರೆಳಿಸಿದ್ದ ಸೀಸನ್ 13ರ ಐಪಿಎಲ್ ಟೂರ್ನಿಯ ವೇಳಾಪಟ್ಟಿ ಅಂತೂಇಂತೂ ಬಿಡುಗಡೆಯಾಗಿದ್ದು ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಮತ್ತು ಕಳೆದ ಬಾರಿಯ ರನ್ನರ್ಅಪ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಭಾನುವಾರ ಐಪಿಎಲ್ ಆಡಳಿತ ಮಂಡಳಿ ಸೀಸನ್ 13ರ ವೇಳಾ ಪಟ್ಟಯನ್ನ ಬಿಡುಗಡೆ ಮಾಡಿದ್ದು, ಸೆ.19ರಂದು ಅಬುಧಾಬಿಯಲ್ಲಿ ಕಲ್ಲರ್ಫುಲ್ ಟೂರ್ನಿ ಐಪಿಎಲ್ ಆರಂಭವಾಗಲಿದೆ.
ಉದ್ಘಾಟನಾ ಪಂದ್ಯದ ನಂತರ ಎರಡನೇ ಪಂದ್ಯ ದುಬೈನಲ್ಲಿ ನಡೆಯಲಿದ್ದು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ನಡುವೆ ನಡೆಯಲಿದೆ.
ಜಾಹೀರಾತು
ಮೂರನೇ ಪಂದ್ಯ ಸನ್ರೈಸರ್ಸ್ ಹೈದರಬಾದ್ ಮತ್ತು ಆರ್ಸಿಬಿ ನಡುವೆ ನಡೆಯಲಿದೆ. ಸೆ.22ರ ನಂತರ ಟೂರ್ನಿಯ ಸ್ಥಳ ಶಾರ್ಜಾಕ್ಕೆ ಸ್ಥಳಾಂತರವಾಗಲಿದೆ. ಸೆ.22 ಆತಿಥೇಯ ರಾಜಸ್ಥಾನ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನ ಎದುರಿಸಲಿದೆ.
24 ಪಂದ್ಯಗಳು ದುಬೈನಲ್ಲಿ, 20 ಪಂದ್ಯಗಳು ಅಬುಧಾಬಿಯಲ್ಲಿ, ಮತ್ತು 12 ಪಂದ್ಯಗಳು ಶಾರ್ಜಾದಲ್ಲಿ ನಡೆಯಲಿದೆ.
ಪ್ಲೇ ಆಫ್ ಮತ್ತು ಫೈನಲ್ ಪಂದ್ಯಗಳ ನಡೆಯುವ ಸ್ಥಳ ಇನ್ನು ನಿರ್ಧರಿಸಬೇಕಿದೆ.ಐಪಿಎಲ್ನ ಪಂದ್ಯಗಳು ಮೊದಲ ಪಂದ್ಯ ಮಧ್ಯಾಹ್ನ 3.30ಕ್ಕೆ ಭಾರತೀಯ ಕಾಲಮಾನ ಮತ್ತು ಎರಡನೇ ಪಂದ್ಯ ಸಂಜೆ 7.30ಕ್ಕೆ ಆರಂಭವಾಗಲಿದೆ ಎಂದು ಐಪಿಎಲ್ ಆಡಳಿತ ಮಂಡಳಿ ಹೇಳಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?