Featured
ಕೃಷ್ಣಾ ನದಿಯಲ್ಲಿ ನಾಪತ್ತೆಯಾದ ರೈತನಿಗಾಗಿ ತೀವ್ರ ಹುಡುಕಾಟ- ಮೊಸಳೆ ದಾಳಿಗೆ ಬಲಿಯಾಗಿರುವ ಶಂಕೆ
ರೈಸಿಂಗ್ ಕನ್ನಡ:
ದುರ್ಗೇಶ್ ಮಂಗಿಹಾಳ:
ಕೃಷ್ಣಾ ನದಿಯಲ್ಲಿ ರೈತ ನಾಪತ್ತೆಯಾದ ಪ್ರಕರಣ ಯಾದಗಿರಿಯಲ್ಲಿ ನಡೆದು ದಿನಗಳು ಕಳೆದಿವೆ. ಕಳೆದ ಮೂರು ದಿನಗಳಿಂದ ಹುಡುಕಾಟ ನಡೆಸುತ್ತಿದ್ದರು ಇನ್ನೂ ರೈತನ ಶವ ಪತ್ತೆಯಾಗಿಲ್ಲ. ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಕೊಡಾಲ ಗ್ರಾಮದ ಸಮೀಪದ ಕೃಷ್ಣಾ ನದಿಯಲ್ಲಿ ಹುಡುಕಾಟ ನಡೆಸಲಾಗ್ತಿದೆ. ಬುಧವಾರ ನದಿ ದಡದಲ್ಲಿದ್ದ ಎಮ್ಮೆಗಳನ್ನು ಹೊಡೆದುಕೊಂಡು ಬರಲು ತೆರಳಿದ್ದಾಗ ನದಿಯಲ್ಲಿ ಮೊಸಳೆ ದಾಳಿ ಮಾಡಿರುವ ಶಂಕೆ ಇದೆ.
ಈ ಹಿಂದೆ ಕೂಡ ಮೊಸಳೆ ದಾಳಿಗೆ ನಾಲ್ಕೈದು ಜನರು ಗಾಯಗೊಂಡಿದ್ದರು. ಈಗ ಮತ್ತೊಮ್ಮೆ ರೈತನ ಮೇಲೆ ಮೊಸಳೆ ದಾಳಿ ಮಾಡಿರುವ ಸಾಧ್ಯತೆ ಇದೆ . ಘಟನಾ ಸ್ಥಳದಲ್ಲಿ ಯಾದಗಿರಿ ಅಗ್ನಿ ಶಾಮಕ ಸಿಬ್ಬಂದಿ, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳೀಯ ಮೀನುಗಾರರ ಸಹಾಯದಿಂದ ನದಿಯಲ್ಲಿ ಶವಕ್ಕಾಗಿ ಶೋಧಕಾರ್ಯ ನಡೆಸಲಾಗ್ತಿದೆ. ಮೂರು ದಿನಗಳು ಕಳೆದ್ರು ಮೃತ ದೇಹ ಪತ್ತೆಯಾಗಿಲ್ಲ. ರೈತನ ದೇಹವನ್ನು ಮೊಸಳೆ ತಿಂದಿರುವ ಅನುಮಾನವನ್ನು ಕುಟುಂಬಸ್ಥರು ವ್ಯಕ್ತಪಡಿಸಿದ್ದಾರೆ. ಕೂಡಲೇ ಅಧಿಕಾರಿಗಳು ನಾಪತ್ತೆಯಾದ ವ್ಯಕ್ತಿಯ ಶೋಧ ಕಾರ್ಯವನ್ನು ತೀವ್ರಗೊಳಿಸಿ ಶವ ಪತ್ತೆ ಹಚ್ಚಲು ಕಾಂಗ್ರೆಸ್ ಮುಖಂಡ ಮಾಣಿಕರೆಡ್ಡಿ ಕುರುಕುಂದಿ ಒತ್ತಾಯಿಸಿದ್ದಾರೆ. ಈ ಬಗ್ಗೆ ವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?