Featured
ಭದ್ರಾವತಿಯಲ್ಲಿ ಬರೋಬ್ಬರಿ 7 ಕೊರೋನಾ ಪಾಸಿಟಿವ್ – 2 ಏರಿಯಾದ 5 ರಸ್ತೆ ಸೀಲ್ ಡೌನ್
![](https://risingkannada.com/wp-content/uploads/2020/06/WhatsApp-Image-2020-06-30-at-10.40.47-AM-1.jpeg)
ರೈಸಿಂಗ್ ಕನ್ನಡ :
ಶಿವಮೊಗ್ಗ :
ಮಂಗಳವಾರ ಮುಂಜಾನೆಯೇ ಉಕ್ಕಿನ ನಗರಿಯ ಮಂದಿಗೆ ಕೊರೋನಾ ಶಾಕ್ ಕೊಟ್ಟಿದೆ. ನಗರದಲ್ಲಿ ಇಂದು ಬರೋಬ್ಬರಿ ಏಳು ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಗಾಂಧಿನಗರದಲ್ಲಿ ಐವರಿಗೆ ಪಾಸಿಟಿವ್ ಬಂದಿದ್ದು, ಈ ಹಿನ್ನೆಲೆಯಲ್ಲಿ ಮೊದಲಿಯಾರ್ ಸಮುದಾಯ ಭವನಕ್ಕೆ ತೆರಳುವ ಮುಖ್ಯರಸ್ತೆ ಹಾಗೂ ಪಕ್ಕದ ರಸ್ತೆಯಲ್ಲಿ ಸೀಲ್ ಡೌನ್ ಮಾಡಲಾಗಿದೆ.
ಸುಭಾಷ್ ನಗರದಲ್ಲಿ ಎರಡು ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಮೂರು ರಸ್ತೆಯನ್ನು ಸೀಲ್ ಡೌನ್ ಮಾಡಲಾಗಿದೆ. ಈ ಕುರಿತು ಮಾತನಾಡಿದ ನಗರಸಭೆ ಆಯುಕ್ತ ಮನೋಹರ್, ಗಾಂಧಿ ನಗರದ ಮೊದಲಿಯಾರ್ ಸಮುದಾಯ ಭವನದ ರಸ್ತೆಯಲ್ಲಿ ಐದು ಮಂದಿಗೆ ಪಾಸಿಟಿವ್ ಬಂದಿದೆ. ಇವರುಗಳ ಟ್ರಾವೆಲ್ ಹಿಸ್ಟರಿ ಇನ್ನೂ ದೊರೆತಿಲ್ಲ. ಈ ಕುರಿತಂತೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದರು.
ಇನ್ನು, ಹೊಸಮನೆಯ ಸುಭಾಷ್ ನಗರದಲ್ಲಿ ಇಬ್ಬರಿಗೆ ಪಾಸಿಟಿವ್ ಬಂದಿದ್ದು, ತಮಿಳುನಾಡು ಟ್ರಾವೆಲ್ ಹಿಸ್ಟರಿ ಇರೋದು ತಿಳಿದುಬಂದಿದೆ. ತಮ್ಮ ಗರ್ಭಿಣಿ ಸೊಸೆ ಹೆರಿಗೆ ಸಂದರ್ಭದಲ್ಲಿ ತಮಿಳುನಾಡಿಗೆ ತೆರಳಿದ್ದು, ನಾಲ್ಕೈದು ದಿನಗಳ ಹಿಂದೆ ನಗರಕ್ಕೆ ಮರಳಿದ 56 ವರ್ಷದ ಪುರುಷ, 48 ವರ್ಷದ ಮಹಿಳೆಯಲ್ಲಿ ಪಾಸಿಟಿವ್ ಬಂದಿದೆ. ಈ ಕುಟುಂಬದಲ್ಲಿ ಒಟ್ಟು ನಾಲ್ವರಿದ್ದು, ಇನ್ನೂ ಇಬ್ಬರು ವರದಿ ಬರಬೇಕಿದೆ. ಇನ್ನೊಬ್ಬ ಹುಡುಗನನ್ನು ಪರೀಕ್ಷೆಗಾಗಿ ಇಂದು ಕಳುಹಿಸಲಾಗುತ್ತದೆ ಎಂದರು.
ನಗರದಲ್ಲಿ ಒಟ್ಟು ಎರಡು ಬಡಾವಣೆಯ ಐದು ರಸ್ತೆಗಳನ್ನು ಸೀಲ್ ಡೌನ್ ಮಾಡಲಾಗಿದ್ದು, ಈ ಪ್ರದೇಶದಲ್ಲಿ ಜನರ ಓಡಾಟವನ್ನು ನಿರ್ಬಂಧಿಸಲಾಗಿದೆ. ಯಾರಾದರೂ ಓಡಾಡುವುದು ಕಂಡುಬಂದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು, ನಗರಸಭೆ ಆಯುಕ್ತ ಮನೋಹರ್ ತಿಳಿಸಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?