ರೈಸಿಂಗ್ ಕನ್ನಡ : ಭಾರತೀಯ ಟೆನ್ನಿಸ್ ತಾರೆ ಸಾನಿಯಾ ಮರ್ಜಾ ಮತ್ತೆ ರಾಕೆಟ್ ಹಿಡಿಯಲು ರೆಡಿಯಾಗ್ತಿದ್ದಾರೆ. ತಾಯಿ ಆದ ಬಳಿಕ ಆಟಕ್ಕೆ ಬ್ರೇಕ್ ಹಾಕಿದ್ದ ಸಾನಿಯಾ, ಇದೀಗ ಟೆನ್ನಿಸ್ ಕೋರ್ಟ್ಗೆ ಇಳಿಯೋಕೆ ತಯಾರಿ ನಡೆಸಿದ್ದಾರೆ. ಹೀಗಾಗಿ, ಫಿಟ್ನೆಸ್ ಮೇಲೆ ದೃಷ್ಟಿ ಹರಿಸಿರೋ ಸಾನಿಯಾ, ವರ್ಕ್ಔಟ್ ಮಾಡ್ತಿದ್ದಾರೆ. ಇದರ ಮೊದಲ ಭಾಗ ಎನ್ನುವಂತೆ ಕೇವಲ ನಾಲ್ಕೇ ತಿಂಗಳಿಗೆ 26 ಕೆಜಿ ತೂಕ ಇಳಿಸಿಕೊಂಡು ಎಲ್ಲರ ಹುಬ್ಬೇರಿಸಿದ್ದಾರೆ.
ಫಿಟ್ನೆಸ್ ಕಾಪಾಡಲು ಜಿಮ್ನಲ್ಲಿ ಕಸರತ್ತು ಶುರು ಮಾಡಿರೋ ಸಾನಿಯಾ, ಕ್ರಮ ಶಿಕ್ಷಣ ಹಾಗೂ ಸಾಧಿಸುವ ಛಲ ಇದ್ರೆ ಎಲ್ಲವೂ ಸಾಧ್ಯ. ಕಸರತ್ತು ಮಾಡ್ತಿರೋದ್ರಿಂದಲೇ ನಾನು ತೂಕ ಕಡಿಮೆ ಆಗ್ತಿರೋದು ಎಂದು ಸಾನಿಯಾ ಹೇಳಿದ್ದಾರೆ.
ಗರ್ಭಣಿಯಾಗಿದ್ದ ಸಂದರ್ಭದಲ್ಲಿ 23 ಕೆಜಿ ತೂಕ ಹೆಚ್ಚಾಗಿದ್ದೆ. ಹೀಗಾಗಿ ಮುಂದಿನ ಟೆನ್ನಿಸ್ ಲೈಫ್ಗಾಗಿ ತೂಕ ಇಳಿಕೆ ಅನಿವಾರ್ಯ. ಹೀಗಾಗಿ, ಹಾರ್ಡ್ ವರ್ಕೌಟ್ ಮಾಡ್ತಿರೋದಾಗಿ ಸಾನಿಯಾ ಹೇಳಿದ್ದಾರೆ. ಯಾರೇ ತಾಯಿಯಾದರೂ, ಮತ್ತೆ ಮೊದಲಿನಂತೆ ಆಗಬೇಕು ಅಂದ್ರೆ, ಹಾರ್ಡ್ ವರ್ಕೌಟ್ ಮಾಡಬೇಕು. ಇದು ಎಲ್ಲ ಮಹಿಳೆಯರಿಂದ ಸಾಧ್ಯ ಎಂದು ಚೈತನ್ಯದ ಮಾತ್ನಾಡಿದ್ದಾರೆ ಸಾನಿಯಾ ಮಿರ್ಜಾ. ಪ್ರತಿ ದಿನ ಒಂದ ರಿಂದ ಎರಡು ಗಂಟೆ ವರ್ಕೌಟ್ ಮಾಡಿದ್ರೆ, ತೂಕ ಇಳಿಕೆ ಕಷ್ಟವೇನಲ್ಲ ಎಂದು ಸಲಹೆ ಕೂಡ ನೀಡಿದ್ದಾರೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?